ಆರ್‌ಸಿಬಿ ಖರೀದಿಸಿದ ಮೊದಲ ಆಟಗಾರ ಮೆಕ್ಲಂ

Posted By:
RCB purchases batsman Brendon mccullum for 3.60 core

ಬೆಂಗಳೂರು, ಜನವರಿ 27: ಐಪಿಎಲ್ 2018 ರ ಆಟಗಾರರ ಹರಾಜಿನ ಮೂರು ಸುತ್ತು ಮುಗಿದ್ದಿದ್ದರೂ ಸಹ ಆರ್‌ಸಿಬಿ ತಂಡ ಯಾವೊಬ್ಬ ಆಟಗಾರನನ್ನೂ ಖರೀದಿಸಿರಲಿಲ್ಲ, ಆದರೆ ಕೊನೆಗೆ ನ್ಯೂಜಿಲೆಂಡ್‌ನ ಬ್ರೆಂಡಂ ಮೆಕ್ಲಂ

ಹೌದು, ಬೆಂಗಳೂರಿನ ತಂಡ ಮೂರು ಸುತ್ತು ಹರಾಜಿನಲ್ಲೂ ಕೂಡ ಯಾವೊಬ್ಬ ಆಟಗಾರನನ್ನು ಖರೀದಿಸಲು ಉತ್ಸಾಹ ತೋರಿರಲೇ ಇಲ್ಲ. ಮೂರನೇ ಸುತ್ತಿನ ಕೊನೆಯಲ್ಲಿ 3.60 ಕೋಟಿ ತೆತ್ತು ಮೊದಲ ಆಟಗಾರನಾಗಿ ಖರೀದಿಸಿತು. ಕ್ರಿಸ್‌ಗೇಲ್‌ ಗೆ ಯಾರೂ ಹರಾಜು ಕೂಗದ ಕಾರಣ ಆರ್‌ಟಿಎಂ ನಿಯಮ ಚಲಾಯಿಸಲೂ ಕೂಡ ಆರ್‌ಸಿಬಿಗೆ ಸಾಧ್ಯವಾಗಲಿಲ್ಲ.

LIVE: ಐಪಿಎಲ್ 2018 ಹರಾಜು: ಕಿಂಗ್ಸ್ 11 ಪಂಜಾಬ್ ಗೆ 'ಯುವಿ'

ಕರ್ನಾಟಕದ ಆಟಗಾರರಾದ ಕರಣ್ ನಾಯರ್ ಮತ್ತು ಕೆ.ಎಲ್.ರಾಹುಲ್ ಖರೀದಿಗೆ ಕೂಡಾ ಆರ್‌ಸಿಬಿ ಉತ್ಸುಕತೆ ತೋರದಿರುವುದು ಆಶ್ಚರ್ಯವಾಗಿ ಕಂಡಿತು.

ಕೇವಲ 50 ಲಕ್ಷ ಮೂಲ ಮೊತ್ತದೊಂದಿಗೆ ಹರಾಜು ಅಂಗಳದಲ್ಲಿದ್ದ ಕರುಣ್ ನಾಯರ್ ಅವರು 5.60 ಕೋಟಿಗೆ ಹರಾಜಾಗುವ ಮೂಲಕ ಪಂಜಾಬ್‌ ತಂಡದ ತೆಕ್ಕೆಗೆ ಸೇರಿಕೊಂಡರು. ರಾಜ್ಯದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ಕೆ.ಎಲ್.ರಾಹುಲ್ 11 ಕೋಟಿಗೆ ಹರಾಜಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಸ್ಥಿರ ಆಟಗಾರನೆಂದೇ ಹೆಸರುವಾಸಿಯಾದ ಕೆ.ಎಲ್.ರಾಹುಲ್ ಅವರನ್ನು 11 ಕೋಟಿ ತೆತ್ತು ಪ್ರೀತಿ ಜಿಂಟಾ ತಮ್ಮ ತಂಡಕ್ಕೆ ಬರಮಾಡಿಕೊಂಡರು. ಅಲ್ಲಿಗೆ ರಾಜ್ಯದ ಕರುಣ್ ನಾಯರ್ ಹಾಗೂ ಕೆ.ಎಲ್.ರಾಹುಲ್ ಇಬ್ಬರೂ ಪಂಜಾಬ್ ತಂಡದ ಪಾಲಾದಂತಾಗಿದೆ.

Story first published: Saturday, January 27, 2018, 12:05 [IST]
Other articles published on Jan 27, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ