ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2023ರ ಐಪಿಎಲ್ ಟೂರ್ನಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಲಭ್ಯತೆ ಬಗ್ಗೆ ಮೈಕ್ ಹೆಸ್ಸನ್ ಮಹತ್ವದ ಮಾಹಿತಿ

RCB Team Director Mike Hesson Information On Glenn Maxwells Availability For IPL 2023 Tournament

2022ರ ಟಿ20 ವಿಶ್ವಕಪ್ ನಂತರ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅಚ್ಚರಿಯ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದು, ಇದು ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ನೀಡಿದೆ.

ಕಾಲಿನ ಗಾಯದಿಂದಾಗಿ ಗ್ಲೆನ್ ಮಾಕ್ಸ್‌ವೆಲ್ ಸುಮಾರು ಆರು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬಹುದು ಎಂದು ತಿಳಿದುಬಂದಿದ್ದು, 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಭಾಗವಹಿಸುವುದು ಅನುಮಾನ ಮೂಡಿಸಿದೆ.

IPL 2023: ಎಲ್ಲಾ 10 ತಂಡಗಳಿಂದ ಕೈಬಿಡಲಾದ ಕರ್ನಾಟಕ ಆಟಗಾರರ ಪಟ್ಟಿIPL 2023: ಎಲ್ಲಾ 10 ತಂಡಗಳಿಂದ ಕೈಬಿಡಲಾದ ಕರ್ನಾಟಕ ಆಟಗಾರರ ಪಟ್ಟಿ

ಐಪಿಎಲ್ 2023ರ ರಿಟೆನ್ಶನ್ ದಿನದಂದು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಉಳಿಸಿಕೊಂಡ ಒಂದು ದಿನದ ನಂತರ, ಆರ್‌ಸಿಬಿ ತಂಡದ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಪ್ರತಿಕ್ರಿಯಿಸಿದ್ದು, ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಆವೃತ್ತಿಯ ಐಪಿಎಲ್ ಲೀಗ್‌ನ ಮೊದಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಿದರು.

 ಐಪಿಎಲ್ ಟೂರ್ನಿಗೂ ಮೊದಲೇ ತಂಡವನ್ನು ಕೂಡಿಕೊಳ್ಳುತ್ತಾರೆ

ಐಪಿಎಲ್ ಟೂರ್ನಿಗೂ ಮೊದಲೇ ತಂಡವನ್ನು ಕೂಡಿಕೊಳ್ಳುತ್ತಾರೆ

ಕಳೆದ ಶನಿವಾರದಂದು ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯ ನಂತರ ಅಪಘಾತದಲ್ಲಿ ಕಾಲು ಮುರಿದುಕೊಂಡ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ದೀರ್ಘಕಾಲದವರೆಗೆ ಕ್ರಿಕೆಟ್‌ನಿಂದ ವಿಶ್ರಾಂತಿ ನೀಡಲಾಗಿದೆ. "ಗ್ಲೆನ್ ಮ್ಯಾಕ್ಸ್‌ವೆಲ್ ಬಗ್ಗೆ ಸ್ವಲ್ಪ ಆತಂಕ ಇದೆ, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಅವರು ಮುಂದಿನ ಐಪಿಎಲ್ ಟೂರ್ನಿಗೂ ಮೊದಲೇ ತಂಡವನ್ನು ಕೂಡಿಕೊಳ್ಳುತ್ತಾರೆ ಎಂಬ ಭರವಸೆ ನಮಗೆ ಇದೆ," ಎಂದು ಮೈಕ್ ಹೆಸ್ಸನ್ ಬುಧವಾರ ಆರ್‌ಸಿಬಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ತಿಳಿಸಿದ್ದಾರೆ.

ಗಮನಾರ್ಹ ಅಂಶವೆಂದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಈ ವರ್ಷ ಟಿ20 ಸ್ವರೂಪದಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. 19 ಪಂದ್ಯಗಳ 18 ಇನ್ನಿಂಗ್ಸ್‌ಗಳಲ್ಲಿ 19.68 ಸರಾಸರಿಯಲ್ಲಿ 315 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಕೇವಲ ಒಂದು ಅರ್ಧಶತಕ ಮಾತ್ರ ಬಂದಿದ್ದು, ಅತ್ಯುತ್ತಮ ಸ್ಕೋರ್ ಅಜೇಯ 54 ರನ್ ಆಗಿದೆ. ಅದೇ ರೀತಿ 2022ರ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮವಾಗಿಲ್ಲದಿದ್ದರೂ ಮ್ಯಾಕ್ಸ್‌ವೆಲ್, 39.33ರ ಸರಾಸರಿಯಲ್ಲಿ 161.64ರ ಸ್ಟ್ರೈಕ್‌ರೇಟ್‌ನೊಂದಿಗೆ 118 ರನ್ ಗಳಿಸಿ, ಬೌಲಿಂಗ್‌ನಲ್ಲಿ ಆಸೀಸ್ ತಂಡದ ಪರ ಮೂರು ವಿಕೆಟ್ ಪಡೆದರು.

 ಆರ್‌ಸಿಬಿ ಪರ ಆಡಿದ 28 ಪಂದ್ಯಗಳಲ್ಲಿ 814 ರನ್

ಆರ್‌ಸಿಬಿ ಪರ ಆಡಿದ 28 ಪಂದ್ಯಗಳಲ್ಲಿ 814 ರನ್

2021ರಲ್ಲಿ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದಾಗಿನಿಂದ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಲ್ಲಿ ಮ್ಯಾಕ್ಸಿ ಒಬ್ಬರಾಗಿದ್ದಾರೆ. ಆರ್‌ಸಿಬಿ ಪರ ಆಡಿದ 28 ಪಂದ್ಯಗಳಲ್ಲಿ ಏಳು ಅರ್ಧಶತಕಗಳೊಂದಿಗೆ 33.91 ಸರಾಸರಿಯಲ್ಲಿ 814 ರನ್ ಗಳಿಸಿದ್ದಾರೆ. ಇದೇ ವೇಳೆ 9 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. 2021ರ ಋತುವಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ತಾವು ಆಡಿದ 15 ಪಂದ್ಯಗಳಲ್ಲಿ 42.75ರ ಸರಾಸರಿಯಲ್ಲಿ ಆರು ಅರ್ಧ ಶತಕಗಳೊಂದಿಗೆ 513 ರನ್‌ ಗಳಿಸಿದರು. ಜೊತೆಗೆ ಮೂರು ವಿಕೆಟ್‌ಗಳನ್ನು ಪಡೆದಿದ್ದು, ಅದು ಅವರ ಅತ್ಯುತ್ತಮ ಐಪಿಎಲ್ ಋತುವಾಗಿದೆ.

ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕಾಲಿನ ಗಾಯದ ಹಿನ್ನೆಲೆಯಲ್ಲಿ ನವೆಂಬರ್ 17 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಕಳೆದ ಶನಿವಾರ ಬರ್ತ್‌ಡೇ ಪಾರ್ಟಿಯಲ್ಲಿ ಸ್ನೇಹಿತನೊಂದಿಗೆ ಓಡುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ.

ಆರ್‌ಸಿಬಿ ತಂಡದ ಬಳಿ ಇನ್ನೂ 8.75 ಕೋಟಿ ರೂಪಾಯಿ

ಆರ್‌ಸಿಬಿ ತಂಡದ ಬಳಿ ಇನ್ನೂ 8.75 ಕೋಟಿ ರೂಪಾಯಿ

ಇನ್ನು ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2023ರ ಐಪಿಎಲ್‌ಗಾಗಿ ತನ್ನ ಬಹುತೇಕ ಸ್ಟಾರ್ ಆಟಗಾರರನ್ನು ಉಳಿಸಿಕೊಂಡಿದ್ದು, ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಶೆರ್ಫೇನ್ ರುದರ್‌ಫೋರ್ಡ್‌ನನ್ನು ತಂಡದಿಂದ ಕೈಬಿಡಲಾಗಿದೆ.

ಉಳಿದಂತೆ ನಾಯಕ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಜೋಶ್ ಹೇಜಲ್‌ವುಡ್ ಅವರನ್ನೊಳಗೊಂಡ ಬಲಿಷ್ಠ ತಂಡವನ್ನು ಉಳಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾದ ವೇಗಿ ಜೇಸನ್ ಬೆಹ್ರೆಂಡಾರ್ಫ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಟ್ರೇಡ್ ಮಾಡಿದೆ.

ಆರ್‌ಸಿಬಿ ತಂಡದ ಬಳಿ ಇನ್ನೂ 8.75 ಕೋಟಿ ರೂಪಾಯಿಗಳನ್ನು ಪರ್ಸ್‌ನಲ್ಲಿ ಉಳಿಸಿಕೊಂಡಿದೆ ಮತ್ತು ಎರಡು ವಿದೇಶಿ ಆಟಗಾರರನ್ನು ಖರೀದಿಸುವ ಅವಕಾಶ ಹೊಂದಿದೆ.

Story first published: Wednesday, November 16, 2022, 19:20 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X