ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಗ್ಗಜರ ಟೂರ್ನಿ 'ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌'ಗೂ ಕೊರೊನಾ ಕಂಟಕ!

Road Safety World Series cricket matches to be played behind closed doors

ಮುಂಬೈ, ಮಾರ್ಚ್ 12: ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್, ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್ ಇಂಥವರ ಆಟ ನೋಡಿ ಎಷ್ಟೋ ದಿನಗಳಾಗಿವೆ. ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನಿಂದಾಗಿ ಕ್ರಿಕೆಟ್ ದಿಗ್ಗಜರ ಆಟ ವೀಕ್ಷಿಸುವ ಅವಕಾಶ ಒದಗಿದೆ. ಆದರೆ ಈ ಅಪರೂಪದ ಟೂರ್ನಿಗೂ ಕೊರೊನಾ ವೈರಸ್ ಕಂಟಕ ಎದುರಾಗಿದೆ.

2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020 ಟೂರ್ನಿಯ ಆರಂಭಿಕ ಪಂದ್ಯಗಳು ಯಶಸ್ವಿಯಾಗಿ ನಡೆದಿದ್ದವು, ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸಿದ್ದವು. ಆದರೆ ಕೊರೊನಾ ವೈರಸ್ ಸೋಂಕಿನಿಂದಾಗಿ ಟೂರ್ನಿಯ ಉಳಿದ ಪಂದ್ಯಗಳನ್ನು ಸರಿಯಾದ ರೀತಿಯಲ್ಲಿ ನಡೆಸಲಾಗುತ್ತಿಲ್ಲ.

2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!2020ರ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಆಡೋದು ಅನುಮಾನ!

ಕೊರೊನಾ ವೈರಸ್ ಹಬ್ಬುವುದನ್ನು ತಡೆಯಲು ಮಹಾರಾಷ್ಟ್ರದಲ್ಲಿ ಕ್ರೀಡಾಕೂಟಗಳಿಗೆ ನಿರ್ಬಂಧ ಹೇರಲಾಗುತ್ತಿದೆ. ಹೀಗಾಗಿ ರೋಡ್ ಸೇಫ್ಟಿ ಸೀರೀಸ್‌ನ ಉಳಿದ ಪಂದ್ಯಗಳನ್ನು ಕದ ಮುಚ್ಚಿದ ಸ್ಟೇಡಿಯಂ ಅಂದರೆ ಪ್ರೇಕ್ಷಕರ ಪ್ರವೇಶ ನಿರ್ಬಂಧಿಸಿದ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!

ಪುಣೆಯ ಗಹುಂಜೆಯಲ್ಲಿರುವ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020ರ ಪಂದ್ಯಗಳನ್ನು ರದ್ದು ಮಾಡಿರುವ ಆಯೋಜಕರು, ಆ ಪಂದ್ಯಗಳನ್ನು ನವಿ ಮುಂಬೈಯ ಡಿವೈ ಪಾಟಿಲ್ ಸ್ಟೇಡಿಯಂಗೆ ಸ್ಥಳಾಂತರಿಸಿದ್ದಾರೆ.

ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿರೋಡ್ಸ್ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿರೋಡ್ಸ್

'ಆರೋಗ್ಯಕ್ಕೆ ಸಂಬಂಧಿಸಿ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿರುವುದರಿಂದ ಮಾರ್ಚ್ 13ರಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಕದ ಮುಚ್ಚಿದ ಡಿವೈ ಪಾಟಿಲ್ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಿದ್ದೇವೆ. ವೇಳಾಪಟ್ಟಿ ಬದಲಿಸಲಾಗಿರುವ ಸೌತ್ ಆಫ್ರಿಕಾ ಲೆಜೆಂಡ್ಸ್ vs ಶ್ರೀಲಂಕಾ ಲೆಜೆಂಡ್ಸ್‌ ತಂಡಗಳು ಮಾರ್ಚ್ 13ರಂದು ಕಾದಾಡಲಿವೆ,' ಎಂದು ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Story first published: Thursday, March 12, 2020, 12:46 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X