ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ

Posted By:
Sachin played gully cricket: video goes viral

ಮುಂಬೈ, ಏಪ್ರಿಲ್ 17: ಕ್ರಿಕೆಟ್ ದೇವರು ಎಂದೇ ಹೆಸರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಐದು ವರ್ಷ ಕಳೆದರೂ, ಕ್ರಿಕೆಟ್ ಜಗತ್ತಿನಲ್ಲಿ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ.

ಸಚಿನ್ ಇದ್ದಲ್ಲಿ ಅವರನ್ನು ಮುತ್ತಿಕೊಳ್ಳುವ ಅಭಿಮಾನಿಗಳು, ಮಾಧ್ಯಮಗಳು ಇದಕ್ಕೆ ಸಾಕ್ಷಿ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಿನಿಂದ ನಿವೃತ್ತಿಯಾದ ಬಳಿಕವೂ ಸಚಿನ್ ಬದಲಾಗಿಲ್ಲ. ಜನಸಾಮಾನ್ಯರೊಂದಿಗೆ ಅವರು ಬೆರೆಯುವ ಪರಿ ವಿಶೇಷ. ಈ ಕಾರಣಕ್ಕೇ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿರುವುದು.

ಸಚಿನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಕಾನ್ ಕ್ರಿಕೆಟಿಗ. ಉಳಿದ ಆಟಗಾರರ ಜತೆ ಕುಳಿತು ಯುವಕನಂತೆ ಅದೇ ಹುಮ್ಮಸ್ಸಿನೊಂದಿಗೆ ಅವರು ತಂಡವನ್ನು ಹುರಿದುಂಬಿಸುತ್ತಾರೆ.

ವಿಶ್ವಕಪ್: ಹರಿಣಗಳ ವಿರುದ್ಧ ಶತಕ ಸಾಧಿಸಿದ್ದು ಸಚಿನ್ ಮಾತ್ರ

ಮೈದಾನದಾಚೆಗೂ ಸಚಿನ್ ಅತಿ ಸರಳ ವ್ಯಕ್ತಿ. ಇತ್ತೀಚೆಗೆ ಕೆಲವು ಹುಡುಗರ ಜತೆ ಸೇರಿ ಅವರು ಗಲ್ಲಿ ಕ್ರಿಕೆಟ್ ಆಡಿದ ವಿಡಿಯೋ ವೈರಲ್ ಆಗುತ್ತಿದೆ.

ಮುಂಬೈನ ಬಾಂದ್ರಾದಲ್ಲಿ ರಾತ್ರಿ ವೇಳೆ ಕಾರ್‌ನಲ್ಲಿ ತೆರಳುತ್ತಿದ್ದ ಸಚಿನ್, ಮೆಟ್ರೊ ಕೆಲಸ ಮಾಡುತ್ತಿರುವ ಕೆಲವು ಹುಡುಗರು ಗಲ್ಲಿ ಕ್ರಿಕೆಟ್ ಆಡುತ್ತಿದ್ದದ್ದನ್ನು ಕಂಡಿದ್ದಾರೆ. ಕಾರು ನಿಲ್ಲಿಸಲು ಹೇಳಿ ಸ್ವಲ್ಪ ಸಮಯ ಆಟ ನೋಡಿದ ಅವರು ಕಾರಿನಿಂದ ಇಳಿದಿದ್ದಾರೆ. ಅವರ ಜತೆ ಬೆರೆತು ಕೆಲ ಹೊತ್ತು ಬ್ಯಾಟಿಂಗ್ ಮಾಡಿದ್ದಾರೆ.

ಕಾರ್ಮಿಕ ಯುವಕರು ಸಚಿನ್ ಕೈಕುಲುಕಿ, ಕೆಲವು ಎಸೆತಗಳನ್ನು ಎಸೆದು ಸಂಭ್ರಮಿಸಿದರು. ಸಚಿನ್ ನೋಡಿ ಅವರತ್ತ ಧಾವಿಸಿದ ಅಭಿಮಾನಿಗಳು ಸೆಲ್ಫಿ, ಆಟೊಗ್ರಾಫ್ ಮೊರೆ ಹೊಕ್ಕರು.

ಕೊಂಚವೂ ದರ್ಪ ತೋರದೆ ಕಾರ್ಮಿಕರೊಂದಿಗೆ ಬೆರೆತು ಆಟವಾಡಿದ ಸಚಿನ್ ಸರಳತೆಯನ್ನು ಟ್ವಿಟ್ಟರಿಗರು ಶ್ಲಾಘಿಸಿದ್ದಾರೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, April 17, 2018, 13:11 [IST]
Other articles published on Apr 17, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ