ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಒಬ್ಬ ಆಟಗಾರನನ್ನು ಸೇರಿಸಿಕೊಂಡಿದ್ದರೆ ಬಾಬರ್ ಅಜಂಗೆ ಹೆಚ್ಚಿನ ಬೆಂಬಲ ದೊರೆಯುತ್ತಿತ್ತು: ಶಾಹಿದ್ ಅಫ್ರಿದಿ

Shahid Afridi statement on Pakistan t20 world cup squad said Shoaib Malik should included

ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿಯಿದ್ದು ಬಹುತೇಕ ತಂಡಗಳು ತಂಡವನ್ನು ಈಗಾಗಲೇ ಘೋಷಣೆ ಮಾಡಿದೆ. ಪಾಕಿಸ್ತಾನ ತಂಡ ಕೂಡ 15 ಆಟಗಾರರ ಬಲಿಷ್ಠ ತಂಡವನ್ನು ಚುಟುಕು ವಿಶ್ವಕಪ್‌ಗೆ ಆಯ್ಕೆ ಮಾಡಿದ್ದು ಟೂರ್ನಿಗೆ ಸಜ್ಜಾಗಿದೆ. ಆದರೆ ಈ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ತಂಡಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಪಡಿಸುತ್ತಿದ್ದಾರೆ.

ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಪಾಕಿಸ್ತಾನ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಓರ್ವ ಕ್ರಿಕೆಟಿಗನನ್ನು ಪಾಕಿಸ್ತಾನ ತಂಡಕ್ಕೆ ಸೇರ್ಪಡೆಗೊಳಿಸಬೇಕಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇದರಿಂದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂಗೆ ಮತ್ತಷ್ಟು ಹೆಚ್ಚಿನ ಬೆಂಬಲ ದೊರೆಯುತ್ತಿತ್ತು ಎಂದಿದ್ದಾರೆ.

ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್ವಿದೇಶಿ ಲೀಗ್‌ಗಳಲ್ಲಿ ಆಡಲು ನ್ಯೂಜಿಲೆಂಡ್‌ ತಂಡದಿಂದ ದೂರವುಳಿದ ಆಲ್‌ರೌಂಡರ್ ಜಿಮ್ಮಿ ನೀಶಮ್

ಶೋಯೆಬ್ ಮಲಿಕ್ ಸೇರ್ಪಡೆ ಅಗತ್ಯವಾಗಿತ್ತು ಎಂದ ಅಫ್ರಿದಿ

ಶೋಯೆಬ್ ಮಲಿಕ್ ಸೇರ್ಪಡೆ ಅಗತ್ಯವಾಗಿತ್ತು ಎಂದ ಅಫ್ರಿದಿ

ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಈ ಬಾರಿಯ ವಿಶ್ವಕಪ್ ತಂಡಕ್ಕೆ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅವರನ್ನು ಸೇರ್ಪಡೆಗೊಳಿಸಬೇಕಿತ್ತು ಎಂದಿದ್ದಾರೆ. ಆಲ್‌ರೌಂಡರ್ ಶೋಯೆಬ್ ಮಲಿಕ್ ವಿಶ್ವಕಪ್ ತಂಡದಲ್ಲಿ ಸೇರ್ಪಡೆಯಾಗಿದ್ದರೆ ಆಲ್‌ರೌಂಡರ್ ಆಗಿ ತಂಡಕ್ಕೆ ಹೆಚ್ಚಿನ ನೆರವು ದೊರೆಯುತ್ತಿತ್ತು ಎಂದಿರುವ ಅವರು ಆಸಿಸ್ ನೆಲದಲ್ಲಿ ಈ ಬಾರಿಯ ವಿಶ್ವಕಪ್ ನಡೆಯುತ್ತಿರುವ ಕಾರಣ ಮಲಿಕ್ ಉಪಸ್ಥಿತಿ ಪಾಕ್ ನಾಯಕ ಬಾಬರ್ ಅಜಂಗೆ ಹೆಚ್ಚಿನ ನೆರವು ದೊರೆಯುತ್ತಿತ್ತು ಎಂದಿದ್ದಾರೆ.

ಫ್ರಾಂಚೈಸಿಗಳ ಮೊದಲ ಆಯ್ಕೆ ಮಲಿಕ್ ಎಂದ ಅಫ್ರಿದಿ

ಫ್ರಾಂಚೈಸಿಗಳ ಮೊದಲ ಆಯ್ಕೆ ಮಲಿಕ್ ಎಂದ ಅಫ್ರಿದಿ

ಪಾಕಿಸ್ತಾನದ ಖ್ಯಾತ ಸುದ್ದಿ ವಾಹಿನಿ ಸಮಾ ಟಿವಿ ಜೊತೆಗೆ ಮಾತನಾಡಿದ ಅಫ್ರಿದಿ "ಶೋಯೆಬ್ ಮಲಿಕ್ ಜಗತ್ತಿನಾದ್ಯಂತ ಕ್ರಿಕೆಟ್ ಆಡಿದ ಅನುಭವ ಹೊಂದಿದ್ದು ಎಲ್ಲೆಡೆ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಪ್ರತಿ ಫ್ರಾಂಚೈಸಿಯೂ ಬಯಸುವಂತಾ ಆಟಗಾರನಾಗಿದ್ದು ಅತ್ಯಂತ ಫಿಟ್ ಆಗಿದ್ದಾರೆ. ಮಲಿಕ್ ಬೆಂಚ್ ಕಾದಿದ್ದರೂ ಬಾಬರ್ ಅಜಂಗೆ ಬೆಂಬಲ ದೊರೆಯುತ್ತಿತ್ತು" ಎಂದಿದ್ದಾರೆ ಶಾಹಿದ್ ಅಫ್ರಿದಿ.

ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿಗೆ ಸಿಗುವ ಹಣ ಎಷ್ಟು ಕೋಟಿ ಗೊತ್ತಾ?

ಪಾಕ್ ತಂಡಕ್ಕೆ ಮಧ್ಯಮ ಕ್ರಮಾಂಕದ ಆತಂಕ

ಪಾಕ್ ತಂಡಕ್ಕೆ ಮಧ್ಯಮ ಕ್ರಮಾಂಕದ ಆತಂಕ

ಏಷ್ಯಾ ಕಪ್ 2022ರಲ್ಲಿ ಪಾಕಿಸ್ತಾನ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದರೂ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು ಇದರಲ್ಲಿ ಮುಖ್ಯ ಪಾತ್ರವಹಿಸಿತ್ತು. ಅದರಲ್ಲೂ ಮೊಹಮ್ಮದ್ ರಿಜ್ವಾನ್ ಪ್ರದರ್ಶನ ಗಮನಾರ್ಹವಾಗಿತ್ತು. ಆದರೆ ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಪ್ರದರ್ಶನ ಅತ್ಯಂತ ಕಳಪೆಯಾಗಿರುವುದು ತಂಡಕ್ಕೆ ಹಿನ್ನಡೆಯುಂಟು ಮಾಡುವ ಆತಂಕ ಮೂಡಿಸಿದೆ. ಅಫ್ಘಾನಿಸ್ತಾನದ ವಿರುದ್ಧ 130 ರನ್‌ಗಳ ಅಲ್ಪ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿಯೂ ಪಾಕಿಸ್ತಾನ ತಂಡ ಸಾಕಷ್ಟು ಪರದಾಟವನ್ನು ನಡೆಸಿತ್ತು. ಅಂತಿಮ ಓವರ್‌ನಲ್ಲಿ ನಸೀಮ್ ಶಾ ಎರಡು ಸಿಕ್ಸರ್ ಸಿಡಿಸದಿದ್ದರೆ ಪಾಕ್ ಫೈನಲ್‌ಗೆ ಪ್ರವೇಶ ಪಡೆಯುವುದು ಅಸಾಧ್ಯವಾಗಿರುತ್ತಿತ್ತು. ಆದರೆ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಯಾರಿಂದಲೂ ಕಾಪಾಡಲು ಸಾಧ್ಯವಾಗಲಿಲ್ಲ. ರಿಜ್ವಾನ್ ಏಕಾಂಗಿ ಹೋರಾಟ ನಡೆಸಿದರಾದರೂ ಅದರಿಂದ ಪಾಕ್ ತಂಡಕ್ಕೆ ಹೆಚ್ಚಿನ ಉಪಯೋಗವಾಗಲಿಲ್ಲ.

ಪಾಕಿಸ್ತಾನದ ಟಿ20 ವಿಶ್ವಕಪ್ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪ ನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾಫ್ರಿ ಅಫ್ರಿ , ಶಾನ್ ಮಸೂದ್, ಉಸ್ಮಾನ್ ಖಾದಿರ್

ಮೀಸಲು: ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ

Story first published: Friday, September 16, 2022, 19:10 [IST]
Other articles published on Sep 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X