ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಭ್ ಮ್ಯಾಚ್ ವಿನ್ನರ್, ಸಂಜು ಸ್ಯಾಮ್ಸನ್ ಕಾಯಲೇ ಬೇಕು: ಶಿಖರ್ ಧವನ್

Shikhar Dhawan backs Rishabh Pant said he is a match-winner, Sanju Samson has to wait

ಟೀಮ್ ಇಂಡಿಯಾ ಯುವ ಆಟಗಾರ ರಿಷಭ್ ಪಂತ್ ಪದೇ ಪದೇ ವೈಪಲ್ಯಕ್ಕೆ ತುತ್ತಾದರೂ ಆಡುವ ಬಳಗದಲ್ಲಿ ಮತ್ತೆ ಮತ್ತೆ ಸ್ಥಾನವನ್ನು ಪಡೆಯುತ್ತಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಸಾಕಷ್ಟು ಟೀಕೆಯನ್ನು ವ್ಯಕ್ತಪಡಿಸಿದ್ದರೂ ಮ್ಯಾನೇಜ್‌ಮೆಂಟ್ ಸತತವಾಗಿ ರಿಷಭ್ ಒಂತ್‌ಗೆ ಬೆಂಬಲವನ್ನು ನೀಡುತ್ತಲೇ ಇದೆ. ಕಿವೀಸ್ ವಿರುದ್ಧದ ಟಿ20 ಸರಣಿಯ ಬಳಿಕ ಏಕದಿನ ಸರಣಿಯಲ್ಲಿಯೂ ರಿಷಭ್ ಪಂತ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಹಾಗಿದ್ದರೂ ಭಾರತ ತಂಡದ ಹಂಗಾಮಿ ನಾಯಕ ಶಿಖರ್ ಧವನ್ ರಿಷಭ್ ಪಂತ್ ಬೆಂಬಲಕ್ಕೆ ನಿಂತಿದ್ದಾರೆ.

ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಅವರಿಗೆ ಶಿಖರ್ ಧವನ್ ಬೆಂಬಲವನ್ನು ವ್ಯಕ್ತಪಡಿಸಿ ಮಾತನಾಡಿದ್ದಾರೆ. ಇಂಥಾ ಕಠಿಣ ಪರಿಸ್ಥಿತಿಯನ್ನು ಎದುರಿಸುವಾಗ ರಿಷಭ್ ಪಂತ್ ಅವರಂತಾ ಆಟಗಾರನಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ತಂಡದ ಬೆಂಚ್ ಸಾಮರ್ಥ್ಯ ಬಲಿಷ್ಠವಾಗಿರುವ ಕಾರಣ ಸಂಜು ಸ್ಯಾಮ್ಸನ್ ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಲ ಕಾಯಬೇಕಾಗುತ್ತದೆ ಎಂದಿದ್ದಾರೆ.

ಫಿಫಾ ವಿಶ್ವಕಪ್ 2022: ಆತಿಥೇಯ ಕತಾರ್‌ಗೆ ಸೋಲುಣಿಸಿ 16ರ ಘಟ್ಟಕ್ಕೆ ಲಗ್ಗೆ ಇಟ್ಟ ನೆದರ್ಲ್ಯಾಂಡ್ಸ್ಫಿಫಾ ವಿಶ್ವಕಪ್ 2022: ಆತಿಥೇಯ ಕತಾರ್‌ಗೆ ಸೋಲುಣಿಸಿ 16ರ ಘಟ್ಟಕ್ಕೆ ಲಗ್ಗೆ ಇಟ್ಟ ನೆದರ್ಲ್ಯಾಂಡ್ಸ್

ಸಂಜುಗೆ ದೊರೆತಿದ್ದು ಒಂದೇ ಅವಕಾಶ

ಸಂಜುಗೆ ದೊರೆತಿದ್ದು ಒಂದೇ ಅವಕಾಶ

ಈ ನ್ಯೂಜಿಲೆಂಡ್ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ಕೇವಲ ಒಂದು ಅವಕಾಶವನ್ನು ಮಾತ್ರವೇ ಪಡೆದುಕೊಂಡಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಆಡಿದ ಸಂಜು ಮಹತ್ವದ 36 ರನ್‌ಗಳ ಕೊಡುಗೆ ನೀಡಿ ಮಿಂಚಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಹೆಚ್ಚುವರಿ ಬೌಲಿಂಗ್ ಆಯ್ಕೆಯ ಕಾರಣಕ್ಕೆ ಸಂಜು ಬದಲಿಗೆ ದೀಪಕ್ ಹೂಡಾಗೆ ಅವಕಾಶ ನೀಡಲಾಗಿತ್ತು. ಅಂತಿಮ ಪಂದ್ಯದಲ್ಲಿಯೂ ಅದೇ ತಂಡವನ್ನು ಆಡಿಸಿದ ಕಾರಣದಿಂದಾಗಿ ಸಂಜು ಮತ್ತೆ ನಿರಾಸೆ ಅನುಭವಿಸುವಂತಾಯಿತು.

ಐಪಿಎಲ್ ಹರಾಜು 2023: ಈ 4 ಕ್ರಿಕೆಟಿಗರಿಗಾಗಿ ನಡೆಯಲಿದೆ ಮಹಾಕಾಳಗ: ಭಾರೀ ಮೊತ್ತ ಪಡೆಯುವ ಆಟಗಾರರು

ಪಂತ್‌ಗೆ ಅವಕಾಶದ ಮೇಲೆ ಅವಕಾಶ

ಪಂತ್‌ಗೆ ಅವಕಾಶದ ಮೇಲೆ ಅವಕಾಶ

ಇನ್ನು ರಿಷಭ್ ಪಂತ್ ಎರಡು ಟಿ20 ಪಂದ್ಯಗಳಲ್ಲಿಯೂ ಕಣಕ್ಕಿಳಿದಿದ್ದು ಕೇವಲ 17 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಎರಡು ಏಕದಿನ ಪಂದ್ಯಗಳಲ್ಲಿ ಆಡಿದ ಪಂತ್ ಈ ಅವಕಾಶದಲ್ಲಿ 25 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. ಈ ಮೂಲಕ ಇಡೀ ಸರಣಿಯಲ್ಲಿ ತಮ್ಮ ಕಳಪೆ ಪ್ರದರ್ಶನ ಮುಂದುವರಿದಿದ್ದರು.
ಸಂಜು ಸ್ಯಾಮ್ಸನ್ ಈ ಬಾರಿಯ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ ಕಿವಿಸ್ ಪ್ರವಾಸದಲ್ಲಿ ಬಹುತೇಕ ಬೆಂಚ್ ಕಾಯುವಂತಾಯಿತು.

ICC ODI Ranking: ಬ್ಯಾಟಿಂಗ್‌ನಲ್ಲಿ ಏರಿಕೆ ಕಂಡ ಗಿಲ್, ಸ್ಯಾಮ್ಸನ್; ಕೊಹ್ಲಿ, ರೋಹಿತ್ ಸ್ಥಾನವೇನು?

ಪಂತ್‌ಗೆ ಬೆಂಬಲ ನೀಡುವುದು ಅಗತ್ಯ!

ಪಂತ್‌ಗೆ ಬೆಂಬಲ ನೀಡುವುದು ಅಗತ್ಯ!

ಈ ಬಗ್ಗೆ ಶಿಖರ್ ಧವನ್ ಮಾತನಾಡುತ್ತಾ "ರಿಷಭ್ ಪಂತ್ ವಿಚಾರವಾಗಿ, ಅವರು ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿಯಲ್ಲಿ ಆಡಿದ್ದು ಅಲ್ಲಿ ಶತಕವನ್ನು ಗಳಿಸಿದ್ದರು. ಶತಕವನ್ನು ಗಳಿಸಿದ ಆಟಗಾರನಿಗೆ ಬೆಂಬಲ ನೀಡುವುದು ಸಹಜ. ಎಲ್ಲವನ್ನು ಕೂಡ ದೊಡ್ಡ ಮಟ್ಟದ ದೃಷ್ಟಿಕೋನದಿಂದ ನಿರ್ಧರಿಸಲಾಗುತ್ತದೆ. ಒಬ್ಬ ಮ್ಯಾಚ್ ವಿನ್ನರ್ ಇದ್ದಾನೆ ಎಂದರೆ ಆತನಿಗೆ ಬೆಂಬಲವನ್ನು ನೀಡುವ ಅಗತ್ಯವಿದೆ. ಸಾಕಷ್ಟು ವಿಶ್ಲೇಷಣೆಗಳ ಬಳಿಕವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದಿದ್ದಾರೆ ಶಿಖರ್ ಧವನ್.

ಫಿಫಾ ವಿಶ್ವಕಪ್: ಪೊಲಾಂಡ್ ವಿರುದ್ಧ 2-0 ಅಂತರದಿಂದ ಗೆದ್ದು ಬೀಗಿದ ಮೆಸ್ಸಿ ಪಡೆ

ಸಂಜು ಕಾಯಬೇಕು ಎಂದ ಧವನ್

ಸಂಜು ಕಾಯಬೇಕು ಎಂದ ಧವನ್

"ಇನ್ನು ಸಂಜು ಸ್ಯಾಮ್ಸನ್ ಕೂಡ ಅದ್ಭುತವಾಗಿಯೇ ಪ್ರದರ್ಶನ ನೀಡಿದ್ದಾರೆ. ಅವರಿಗೆ ಸಿಕ್ಕ ಅವಕಾಶವನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಆದರೆ ಕೆಲ ಸಂದರ್ಭಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರೂ ಆಟಗಾರ ಅನಿವಾರ್ಯವಾಗಿ ಕಾಯಬೇಕಾಗುತ್ತದೆ. ಯಾಕೆಂದರೆ ಅವರಿಗಿಂತ ಮುಂದೆ ಇದ್ದವರು ಉತ್ತಮವಾಗಿ ಪ್ರದರ್ಶನ ನೀಡುತ್ತಿರುತ್ತಾರೆ" ಎಂದಿದ್ದಾರೆ ಶಿಖರ್ ಧವನ್.

Story first published: Thursday, December 1, 2022, 5:45 [IST]
Other articles published on Dec 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X