ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPLನಲ್ಲಿ 6000ಕ್ಕೂ ಅಧಿಕ ರನ್‌ಗಳಿಸಿರುವ ಶಿಖರ್ ಧವನ್, ಭಾರತ ಟಿ20 ತಂಡದಲ್ಲಿ ಏಕಿಲ್ಲ? ಮೊಹಮ್ಮದ್ ಕೈಫ್ ಪ್ರಶ್ನೆ

Kaif and dhawan

ಐಪಿಎಲ್‌ನಲ್ಲಿ ಪ್ರತಿ ಸೀಸನ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಶಿಖರ್‌ ಧವನ್‌ರನ್ನು ಟೀಂ ಇಂಡಿಯಾ ಟಿ20 ತಂಡದಲ್ಲಿ ಏಕೆ ಪರಿಗಣಿಸುತ್ತಿಲ್ಲ ಎಂದು ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಪ್ರಶ್ನಿಸಿದ್ದಾರೆ.

ಐಪಿಎಲ್‌ನಲ್ಲಿ ಯಾವುದೇ ತಂಡದ ಪರ ಧವನ್ ಆಡಿದಾಗಲೂ ಉತ್ತಮ ರನ್‌ಗಳಿಸಿದ್ದಾರೆ. ಹೀಗಾಗಿ ಆತ ಇನ್ನೂ ಭಾರತ ಟಿ20 ತಂಡದಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕೈಫ್ ಅಭುಪ್ರಾಯ ಪಟ್ಟಿದ್ದಾರೆ.

ಶಿಖರ್ ಧವನ್ ಐಪಿಎಲ್‌ನಲ್ಲಿ 35ಕ್ಕೂ ಹೆಚ್ಚು ಸರಾಸರಿಯಲ್ಲಿ 6244 ರನ್ ಕಲೆಹಾಕಿದ್ದಾರೆ. ಪ್ರತಿ ವರ್ಷವೂ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಇಷ್ಟಾದರೂ ಆತನನ್ನು ಭಾರತ ಟಿ20 ತಂಡದಲ್ಲಿ ಪರಿಗಣಿಸುತ್ತಿಲ್ಲ. 36 ವರ್ಷದ ಶಿಖರ್ ಧವನ್ ಜುಲೈ 2021ರಲ್ಲಿ ಕೊನೆಯ ಬಾರಿಗೆ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಟಿ20 ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಶಿಖರ್ ಧವನ್ ಭಾರತ ಪರ ಟಿ20 ಪಂದ್ಯಗಳನ್ನಾಡಿಲ್ಲ.

IPL 2023: ರವೀಂದ್ರ ಜಡೇಜಾ CSK ತಂಡವನ್ನ ತೊರೆದ್ರೆ, ಈ ಇಬ್ಬರು ಆಟಗಾರರ ಮೇಲಿದೆ ಫ್ರಾಂಚೈಸಿ ಕಣ್ಣುIPL 2023: ರವೀಂದ್ರ ಜಡೇಜಾ CSK ತಂಡವನ್ನ ತೊರೆದ್ರೆ, ಈ ಇಬ್ಬರು ಆಟಗಾರರ ಮೇಲಿದೆ ಫ್ರಾಂಚೈಸಿ ಕಣ್ಣು

ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಸಂದರ್ಶನದಲ್ಲಿ ಮಾತನಾಡಿರುವ ಮೊಹಮ್ಮದ್ ಕೈಫ್, ಶಿಖರ್ ಧವನ್ ಆಯ್ಕೆ ಆಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

'' ಅವರಿಗೆ (ಕೋಚ್, ಸೆಲೆಕ್ಟರ್ ಮತ್ತು ಟೀಂ ಮ್ಯಾನೇಜ್‌ಮೆಂಟ್‌) ತಿಳಿದಿದೆ ಯಾರು ಎಲ್ಲಾ ಫಾರ್ಮೆಟ್‌ ಆಡಬಲ್ಲ ಪ್ಲೇಯರ್ ಎಂದು. ಆದ್ರೆ ಅವರಿಗೆ ಆಯ್ಕೆ ಕುರಿತು ಖಚಿತತೆ ಇಲ್ಲ. ಶಿಖರ್ ಧವನ್ ಕುರಿತು ಮಾತನಾಡುವುದಾದ್ರೆ, ಆತ ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನ ಆಡುವ ಸಾಮರ್ಥ್ಯ ಹೊಂದಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ'' ಎಂದಿದ್ದಾರೆ.

'' ಐಪಿಎಲ್‌ನಲ್ಲಿ ಆತ 6000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾನೆ. ನೀವು ಆತ ಭಾರತ ಟಿ20 ತಂಡಕ್ಕೆ ಉತ್ತಮವಾಗಿಲ್ಲ ಎಂದು ಹೇಳುತ್ತಿದ್ದೀರಿ. ಇಲ್ಲ, ನಿಮ್ಮ ಬಳಿ ಹಲವು ಆಯ್ಕೆಗಳಿರಬಹುದು, ಅಂದ ಮಾತ್ರಕ್ಕೆ ನೀವು ಸರಿಯಾದ ಆಯ್ಕೆಯನ್ನು ಮಾಡಲೇಬೇಕಾಗುತ್ತದೆ'' ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಜೊತೆಗೆ ಸದ್ಯ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿರುವ ಶಿಖರ್ ಧವನ್ , ಟೆಸ್ಟ್ ಹಾಗೂ ಟಿ20 ಫಾರ್ಮೆಟ್‌ನಲ್ಲೂ ಪ್ರಭಾವ ಬೀರುವಂತಹ ಆಟಗಾರನಾಗಿದ್ದಾನೆ ಎಂದು ಕೈಫ್ ಹೇಳಿದ್ದಾರೆ.

Story first published: Friday, August 19, 2022, 11:15 [IST]
Other articles published on Aug 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X