ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶುಭ್ಮನ್ ಗಿಲ್‌ಗಿದೆ ಶಿಖರ್ ಧವನ್‌ರ ಈ 3 ದಾಖಲೆ ಮುರಿಯುವ ಅವಕಾಶ

Shubman Gill Has A Chance To Break Shikhar Dhawans These 3 Records

ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಫಾರ್ಮ್‌ನೊಂದಿಗೆ ಹಳೆಯ ದಾಖಲೆಯಗಳನ್ನು ಅಳಿಸಿ ಹಾಕಿ ಹೊಸ ದಾಖಲೆ ಬರೆಯುತ್ತಿದ್ದಾರೆ. ಗಿಲ್ ಇತ್ತೀಚಿಗೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್‌ಗಳನ್ನು ಕಲೆಹಾಕಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಸದ್ಯ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಫಾರ್ಮ್‌ ನೋಡುತ್ತಿದ್ದರೆ, ಅವರ ದಾಖಲೆಗಳ ಓಟ ಮುಂದುವರೆಯುವಂತೆ ಕಾಣುತ್ತಿದೆ.

2022ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಮರುಜೀವ ಪಡೆದುಕೊಂಡ ಶುಭ್ಮನ್ ಗಿಲ್ ಅವರು ಭಾರತ ತಂಡದ ಬ್ಯಾಕ್ ಅಪ್ ಬ್ಯಾಟ್ಸ್‌ಮನ್ ಆಗಿ ಸ್ಥಿರವಾಗಿ ಸ್ಥಾನ ಪಡೆದರು. ಅಂತಿಮವಾಗಿ ಶಿಖರ್ ಧವನ್ ಅವರನ್ನು ತಂಡದಿಂದ ಕೈಬಿಟ್ಟು ರೋಹಿತ್ ಶರ್ಮಾರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ತಮ್ಮದಾಗಿಸಿಕೊಂಡರು ಮತ್ತು ತಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡರು.

ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಶುಭ್ಮನ್ ಗಿಲ್ ಆಡುತ್ತಿರುವ ರೀತಿ ನೋಡಿದರೆ, ಯಾವುದೇ ದಾಖಲೆಗಳು ಸುರಕ್ಷಿತವಲ್ಲ ಎಂದು ಹೇಳುವುದು ಅತಿಶಯೋಕ್ತಿ ಅಲ್ಲ. ಅಗ್ರ ಕ್ರಮಾಂಕದಲ್ಲಿ ತಂಡಕ್ಕಾಗಿ ದೊಡ್ಡ ಮೊತ್ತ ಗಳಿಸುವುದು ಮತ್ತು ತನ್ನ ವೈಯಕ್ತಿಕ ಹೆಸರಿನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಲು ಎದುರು ನೋಡುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ

ಈ ಮೊದಲು ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಸ್ಥಿರವಾಗಿ ರನ್ ಗಳಿಸುತ್ತಿದ್ದ ಅವರು, ಕೆಲ ತಿಂಗಳಿನಿಂದ ಶಿಖರ್ ಧವನ್ ಬ್ಯಾಟಿಂಗ್ ಅಷ್ಟೊಂದು ಉತ್ತಮವಾಗಿರಲಿಲ್ಲ. ಆದರೆ, ಧವನ್ ಕ್ರಿಕೆಟ್ ಆಡಿದಾಗ ಹಲವು ದಾಖಲೆಗಳನ್ನು ಬರೆದಿಟ್ಟಿದ್ದಾರೆ. ಇದೀಗ ಅಂತಹ ಮೂರು ದಾಖಲೆಗಳನ್ನು ಮುರಿಯಲು ಶುಭ್ಮನ್ ಗಿಲ್ ತಯಾರಾಗಿದ್ದಾರೆ.

ವೇಗವಾಗಿ 2000 ಏಕದಿನ ರನ್ ಗಳಿಸಿದ ಭಾರತೀಯ ಆಟಗಾರ

ವೇಗವಾಗಿ 2000 ಏಕದಿನ ರನ್ ಗಳಿಸಿದ ಭಾರತೀಯ ಆಟಗಾರ

ಶುಭ್ಮನ್ ಗಿಲ್ ಇತ್ತೀಚೆಗೆ ವೇಗವಾಗಿ ಅಂದರೆ 19 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಗಳಿಸಿ ಶಿಖರ್ ಧವನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಇನ್ನು ಶಿಖರ್ ಧವನ್ 2000 ಏಕದಿನ ರನ್‌ಗಳ ಗಡಿಯನ್ನು ತಲುಪಲು 48 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆಗ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದರು. 2018 ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯನಾಗಿರುವ ಶುಭ್ಮನ್ ಗಿಲ್ ಪ್ರಸ್ತುತ 21 ಇನ್ನಿಂಗ್ಸ್‌ಗಳಲ್ಲಿ 1254 ರನ್‌ಗಳನ್ನು ದಾಖಲಿಸಿದ್ದಾರೆ. ಉಳಿದ 746 ರನ್‌ಗಳನ್ನು ಗಳಿಸಲು ಅವರಿಗೆ ಇನ್ನೂ 27 ಇನ್ನಿಂಗ್ಸ್‌ಗಳು ಬಾಕಿ ಇವೆ.

2023ರಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುವ ಅವಕಾಶವಿದ್ದು, ಶುಭ್ಮನ್ ಗಿಲ್ ಶೀಘ್ರದಲ್ಲೇ ಆ ದಾಖಲೆಯನ್ನು ಮುರಿಯುವ ಸಂಭವವಿದೆ. ಏಕದಿನ ಕ್ರಿಕೆಟ್ ಮಾದರಿಯಲ್ಲಿ 2000 ರನ್‌ಗಳ ಗಡಿಯನ್ನು ತಲುಪಲು ವಿರಾಟ್ ಕೊಹ್ಲಿ 53 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ.

ವೇಗವಾಗಿ ಐದು ಏಕದಿನ ಶತಕ ಬಾರಿಸಿದ ಆಟಗಾರ

ವೇಗವಾಗಿ ಐದು ಏಕದಿನ ಶತಕ ಬಾರಿಸಿದ ಆಟಗಾರ

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಮೋಘ ಶತಕ ಬಾರಿಸುವ ಮೂಲಕ, ಈ ಸ್ವರೂಪದಲ್ಲಿ ವೇಗವಾಗಿ ನಾಲ್ಕು ಶತಕಗಳನ್ನು ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದ ಶಿಖರ್ ಧವನ್ ಅವರ ದಾಖಲೆಯನ್ನು ಮುರಿದರು.

ಶಿಖರ್ ಧವನ್ ತಮ್ಮ 28 ಇನ್ನಿಂಗ್ಸ್‌ಗಳಲ್ಲಿ ಐದು ಶತಕಗಳ ದಾಖಲೆಯನ್ನು ಶುಭ್ಮನ್ ಗಿಲ್ ಮೀರಿಸಬಹುದಾಗಿದೆ. ಭಾರತ ತಂಡದ ಮುಂದಿನ ಏಳು ಏಕದಿನ ಪಂದ್ಯಗಳಲ್ಲಿ ಈ ಯುವ ಆಟಗಾರ ಶುಭ್ಮನ್ ಗಿಲ್ ಮತ್ತೊಂದು ಶತಕ ಬಾರಿಸಿದರೆ, ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರ ಮತ್ತೊಂದು ಸಾಧನೆಯನ್ನು ಅಳಿಸಿ ಹಾಕಲಿದ್ದಾರೆ.

ಐಸಿಸಿ ಟೂರ್ನಿಯಲ್ಲಿ ವೇಗವಾಗಿ 1000 ರನ್‌ ಗಳಿಸಿದ ಆಟಗಾರ

ಐಸಿಸಿ ಟೂರ್ನಿಯಲ್ಲಿ ವೇಗವಾಗಿ 1000 ರನ್‌ ಗಳಿಸಿದ ಆಟಗಾರ

ಐಸಿಸಿ ಪಂದ್ಯಾವಳಿಗಳಲ್ಲಿ ಶಿಖರ್ ಧವನ್ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 2013ರಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ವಿಜಯದ ಅಭಿಯಾನದಲ್ಲಿ ಟೂರ್ನಿಯುದ್ದಕ್ಕೂ ಹೆಚ್ಚು ರನ್ ದಾಖಲಿಸಿದ ಆಟಗಾರನಾಗಿದ್ದರು. ನಂತರ 2015ರ ವಿಶ್ವಕಪ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ದೊಡ್ಡ ಮೊತ್ತ ದಾಖಲಿಸಿದ್ದರು.

ಶಿಖರ್ ಧವನ್ ಅವರು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದು ಐಸಿಸಿ ಟೂರ್ನಿಗಳಲ್ಲಿ ವೇಗವಾಗಿ 1000 ರನ್ ಗಳಿಸಿದ ಭಾರತೀಯನಾಗಿದ್ದಾರೆ. ಈ ಹೆಗ್ಗುರುತನ್ನು ತಲುಪಲು ಸಚಿನ್ 16 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಶಿಖರ್ ಧವನ್ 14 ಇನ್ನಿಂಗ್ಸ್‌ಗಳಿಂದ 1000 ರನ್ ಬಾರಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದರು.

ಸದ್ಯದ ಶುಭ್ಮನ್ ಗಿಲ್ ಅವರ ಅತ್ಯುತ್ತಮ ಫಾರ್ಮ ಅನ್ನು ಪರಿಗಣಿಸಿದರೆ, ತವರಿನಲ್ಲಿ ನಡೆಯು ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಒಂಬತ್ತು ಪಂದ್ಯಗಳವರೆಗೆ ಸಮರ್ಥವಾಗಿ ಆಡಬಹುದಾಗಿದೆ. ಹೀಗಾಗಿ ಹಿರಿಯ ಆರಂಭಿಕ ಆಟಗಾರ ಶಿಖರ್ ಧವನ್ ಅವರ ದಾಖಲೆಯನ್ನು ಯುವ ಆಟಗಾರ ಶುಭ್ಮನ್ ಗಿಲ್ ಮುರಿಯುವ ಅವಕಾಶ ಹೊಂದಿದ್ದಾರೆ.

Story first published: Thursday, January 26, 2023, 3:35 [IST]
Other articles published on Jan 26, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X