ಟೆಸ್ಟ್ ಕ್ರಿಕೆಟ್‌ನಲ್ಲಿ ಈತನಿಗೆ ಅವಕಾಶ ಸಿಕ್ಕರೆ ಶತಕ, ದ್ವಿಶತಕ ಬಾರಿಸುತ್ತಾನೆ; ಸುರೇಶ್ ರೈನಾ

ಭಾರತ ತಂಡ ನ್ಯೂಜಿಲೆಂಡ್ ವಿರುದ್ಧದ ವೈಟ್‌ಬಾಲ್ ಸರಣಿಯ ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ಫೆಬ್ರವರಿ 9ರಿಂದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನಡೆಯಲಿದ್ದು, ಈಗಾಗಲೇ ಎರಡೂ ತಂಡಗಳು ಸಿದ್ಧತೆ ಆರಂಭಿಸಿವೆ.

ಇನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರು.

WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್‌ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?WIPL 2023: ಮಹಿಳಾ ಐಪಿಎಲ್ ಫ್ರಾಂಚೈಸಿ ಗೆದ್ದ ಆರ್‌ಸಿಬಿ; ವಿರಾಟ್ ಕೊಹ್ಲಿ ಪ್ರತಿಕ್ರಿಯೆ ಏನು?

ಬ್ಯಾಟಿಂಗ್‌ನಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರ ಫಲವಾಗಿ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಇದೀಗ ಅವರಿಗೆ ಭಾರತದ ಎಲ್ಲ ಸ್ವರೂಪಗಳ ತಂಡಗಳಲ್ಲಿ ಅವಕಾಶ ನೀಡಲಾಗುತ್ತಿದೆ.

ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದಾರೆ. ಇದೇ ವೇಳೇ ಟೆಸ್ಟ್ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಆಯ್ಕೆ ಮತ್ತು ಭವಿಷ್ಯದ ಬಗ್ಗೆ ಮಾತನಾಡಿದ ಮಾಜಿ ಬ್ಯಾಟರ್ ಸುರೇಶ್ ರೈನಾ, ತಂಡಕ್ಕೆ ಆಯ್ಕೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಸೂರ್ಯಕುಮಾರ್‌ಗೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ.

ICC T20 Player Of The 2022: ಈ ಐಸಿಸಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಸೂರ್ಯಕುಮಾರ್ICC T20 Player Of The 2022: ಈ ಐಸಿಸಿ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಸೂರ್ಯಕುಮಾರ್

"ಖಂಡಿತವಾಗಿಯೂ, ಸೂರ್ಯಕುಮಾರ್ ಯಾದವ್ ಈ ಹಿಂದೆ ರೀತಿಯಿಂದಾಗಿ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಬೇಕು ಎಂದು ನಾನು ಭಾವಿಸುತ್ತೇನೆ. ಅವನಿಲ್ಲದೆ ಎಲ್ಲಾ ಮೂರು ಸ್ವರೂಪಗಳು ಅಸ್ತಿತ್ವದಲ್ಲಿರಬಾರದು. ಸೂರ್ಯಕುಮಾರ್ ಪ್ರದರ್ಶನ ನೀಡಿದ ರೀತಿ, ಉದ್ದೇಶ ತೋರಿಸುವ ರೀತಿ, ವಿಭಿನ್ನ ಹೊಡೆತಗಳನ್ನು ಯೋಜಿಸುವ ರೀತಿ, ನಿರ್ಭಯವಾಗಿ ಆಡುವ ರೀತಿಯನ್ನು ತಿಳಿದಿದ್ದಾರೆ," ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಿಳಿಸಿದ್ದಾರೆ.ಸೂರ್ಯಕುಮಾರ್ ಯಾದವ್ ಟೆಸ್ಟ್ ತಂಡಕ್ಕಾಗಿ ಶತಕ ಮತ್ತು ಶತಕಗಳನ್ನು ದ್ವಿಶತಕಗಳನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕೆಂಪು ಬಾಲ್ ಕ್ರಿಕೆಟ್ ಅನ್ನು ಹೇಗೆ ಆಡಬೇಕೆಂದು ತಿಳಿದಿದ್ದಾರೆ ಎಂದು ಮಾಜಿ ಆಟಗಾರ ಸುರೇಶ್ ರೈನಾ ಅಭಿಪ್ರಾಯಪಟ್ಟರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುವ ಭರವಸೆಯಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಗಂಭಿರವಾಗಿ ತೆಗೆದುಕೊಳ್ಳಲಿದೆ. ಭಾರತ ತಂಡ ವಿಶ್ವದ ಅಗ್ರ ಶ್ರೇಯಾಂಕದ ಟೆಸ್ಟ್ ತಂಡದ ವಿರುದ್ಧ ಸೆಣಸಲಿದೆ ಮತ್ತು ಬಾರ್ಡರ್- ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, January 25, 2023, 23:03 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X