ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SL vs AUS 1ನೇ ಟೆಸ್ಟ್: ಲಿಯಾನ್, ಹೆಡ್ ದಾಳಿಗೆ ನಲುಗಿದ ಶ್ರೀಲಂಕಾ; ಆಸ್ಟ್ರೇಲಿಯಕ್ಕೆ 1-0 ಮುನ್ನಡೆ

SL vs AUS 1st Test: Australia 10-wicket Win Against Sri Lank On Day 3

ಆಸ್ಟ್ರೇಲಿಯ ಸ್ಪಿನ್ನರ್‌ಗಳಾದ ನಾಥನ್ ಲಿಯಾನ್ ಮತ್ತು ಟ್ರಾವಿಸ್ ಹೆಡ್ ಅವರ ಸ್ಪಿನ್ ಬಲೆಗೆ ಸಿಲುಕಿದ ಶ್ರೀಲಂಕಾ ಬ್ಯಾಟರ್‌ಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಸುಲಭ ತುತ್ತಾದರು.

IND vs ENG 5ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತದ ಸಂಭಾವ್ಯ ಆಡುವ 11ರ ಬಳಗ ಹೀಗಿದೆIND vs ENG 5ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಭಾರತದ ಸಂಭಾವ್ಯ ಆಡುವ 11ರ ಬಳಗ ಹೀಗಿದೆ

ಗಾಲೆಯಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್‌ ಪಂದ್ಯವು ಮೂರೇ ದಿನಗಳಲ್ಲಿ ಫಲಿತಾಂಶ ಕಂಡಿದೆ. ಶುಕ್ರವಾರದಂದು 10 ವಿಕೆಟ್‌ಗಳ ಸಮಗ್ರ ವಿಜಯವನ್ನು ದಾಖಲಿಸಿದ ಆಸ್ಟ್ರೇಲಿಯ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. 2016ರ ಕೊನೆಯ ಪ್ರವಾಸದಲ್ಲಿ ಶ್ರೀಲಂಕಾದಲ್ಲಿ 3-0 ವೈಟ್‌ವಾಶ್‌ ಅನುಭವಿಸಿದ್ದ ಆಸ್ಟ್ರೇಲಿಯಕ್ಕೆ ಇದು ದೊಡ್ಡ ಜಯವಾಗಿತ್ತು.

ಶ್ರೀಲಂಕಾದ ಅಗ್ರ ಕ್ರಮಾಂಕ ಬ್ಯಾಟಿಂಗ್‌ ಕೆಡವಿದ ಲಿಯಾನ್

ಶ್ರೀಲಂಕಾದ ಅಗ್ರ ಕ್ರಮಾಂಕ ಬ್ಯಾಟಿಂಗ್‌ ಕೆಡವಿದ ಲಿಯಾನ್

ನಾಥನ್ ಲಿಯಾನ್ (4/31) ಅವರು ಶ್ರೀಲಂಕಾದ ಅಗ್ರ ಕ್ರಮಾಂಕ ಬ್ಯಾಟಿಂಗ್‌ ಅನ್ನು ಧ್ವಂಸಗೊಳಿಸಿದರೆ , ಪಾರ್ಟ್‌ಟೈಮ್ ಬೌಲರ್ ಟ್ರಾವಿಸ್ ಹೆಡ್ (4/10) ಶ್ರೀಲಂಕಾದ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿದರು. ಹೀಗಾಗಿ 109 ರನ್‌ಗಳ ಹಿನ್ನಡೆ ಅನುಭವಿಸಿದ ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. ದಿಮುತ್ ಕರುಣರತ್ನೆ ಅವರ 23 ರನ್ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳ ಗರಿಷ್ಠ ಸ್ಕೋರ್ ಆಗಿತ್ತು.

ಆಸ್ಟ್ರೇಲಿಯ ಗೆಲುವಿಗೆ ಕೇವಲ ಐದು ರನ್‌ಗಳ ಅಗತ್ಯವಿದ್ದಾಗ, ಪ್ರವಾಸಿ ತಂಡದ ಆರಂಭಿಕರಾದ ಆಟಗಾರ ಡೇವಿಡ್ ವಾರ್ನರ್ ಅವರು ರಮೇಶ್ ಮೆಂಡಿಸ್ ಬೌಲಿಂಗ್‌ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕ ಕೇವಲ ನಾಲ್ಕು ಎಸೆತಗಳಲ್ಲಿ ಆಟ ಮುಗಿಸಿದರು.

ಆಸ್ಟ್ರೇಲಿಯಾ 109 ರನ್‌ಗಳ ಮುನ್ನಡೆ ಸಾಧಿಸಿತ್ತು

ಆಸ್ಟ್ರೇಲಿಯಾ 109 ರನ್‌ಗಳ ಮುನ್ನಡೆ ಸಾಧಿಸಿತ್ತು

ಇದಕ್ಕೂ ಮೊದಲು ಶುಕ್ರವಾರ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 109 ರನ್‌ಗಳ ಮುನ್ನಡೆ ಸಾಧಿಸುವ ಮೂಲಕ 321 ರನ್‌ಗಳಿಗೆ ಆಲೌಟ್ ಆಗಿತ್ತು. ಕ್ಯಾಮರೂನ್ ಗ್ರೀನ್ (77) ಮತ್ತು ಉಸ್ಮಾನ್ ಖವಾಜಾ (71) ಪ್ರವಾಸಿ ತಂಡದ ಪರ ನಿರ್ಣಾಯಕ ಅರ್ಧಶತಕಗಳನ್ನು ಹೊಡೆದರು. ರಮೇಶ್ ಮೆಂಡಿಸ್ (4/112) ಶ್ರೀಲಂಕಾ ಬೌಲರ್‌ಗಳ ಪೈಕಿ ಮಿಂಚಿದರು. ಮುಂದಿನ ಶುಕ್ರವಾರದಿಂದ ಎರಡನೇ ಟೆಸ್ಟ್ ಪಂದ್ಯವನ್ನು ಕೂಡ ಗಾಲೆಯಲ್ಲಿ ಆಡಲಾಗುತ್ತದೆ.

ಕೋವಿಡ್ -19 ಕಾರಣದಿಂದಾಗಿ ಏಂಜೆಲೊ ಮ್ಯಾಥ್ಯೂಸ್ ಹೊರಗುಳಿದಿರುವುದು, ಆಟ ಪ್ರಾರಂಭವಾಗುವ ಮೊದಲು ಶ್ರೀಲಂಕಾ ಹೊಡೆತವನ್ನು ಅನುಭವಿಸಿತು. ಓಷಾಡಾ ಫೆರ್ನಾಂಡೋ ಅವರ ಬದಲಿ ಆಟಗಾರನನ್ನು ಹೆಸರಿಸಲಾಗಿತ್ತು.

ಮೊದಲ ಓವರ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದ್ದ ದಿಮುತ್ ಕರುಣಾರತ್ನೆ

ಮೊದಲ ಓವರ್‌ನಲ್ಲಿ ನಾಲ್ಕು ಬೌಂಡರಿ ಬಾರಿಸಿದ್ದ ದಿಮುತ್ ಕರುಣಾರತ್ನೆ

ನಾಯಕ ದಿಮುತ್ ಕರುಣಾರತ್ನೆ ಅವರು ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್‌ನಲ್ಲಿ ನಾಲ್ಕು ಬೌಂಡರಿಗಳನ್ನು ಸಿಡಿಸುವ ಮೂಲಕ 17 ರನ್‌ಗಳನ್ನು ಗಳಿಸಿ ಬಲಿಷ್ಠವಾಗಿ ಆರಂಭಿಸಿದರು. ಆದರೆ ಲಿಯಾನ್ ಮತ್ತು ಸಹ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಸ್ಪೆಲ್‌ನಲ್ಲಿ ಶ್ರೀಲಂಕಾ ಲೆಕ್ಕಾಚಾರವೆಲ್ಲಾ ಉಲ್ಟಾ ಆಯಿತು.

ಕೇವಲ 20 ಎಸೆತಗಳಲ್ಲಿ 23 ರನ್ ಗಳಿಸಿದ್ದಾಗ ನಾಯಕ ಕರುಣಾರತ್ನೆ ಅವರ ವಿಕೆಟ್‌ ಅನ್ನು ನಾಥನ್ ಲಿಯಾನ್ ಪಡೆದರು. ಆದರೆ ಸ್ವೆಪ್ಸನ್ ಅವರು 14 ರನ್‌ಗಳಿಗೆ ಪಾತುಮ್ ನಿಸ್ಸಾಂಕಾ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಶ್ರೀಲಂಕಾ 63 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಾಗ 12ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ಓಷಾಡ ಕ್ಯಾಚ್ ಔಟ್ ಆದರು.

England ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರಯೋಗ | *Cricket | OneIndia Kannada
ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯ

ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ಆಸ್ಟ್ರೇಲಿಯ

ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು ತೊಂದರೆಯಿಂದ ಹೊರಬರಲು ಹತಾಶವಾಗಿ ಪ್ರಯತ್ನಿಸುವುದರೊಂದಿಗೆ ವಿಕೆಟ್‌ಗಳು ಉರುಳುತ್ತಲೇ ಇದ್ದವು. ಎಡಗೈ ಬ್ಯಾಟ್ಸ್‌ಮನ್ ಮತ್ತು ಸಾಂದರ್ಭಿಕ ಆಫ್ ಸ್ಪಿನ್ನರ್ ಆಗಿರುವ ಟ್ರಾವಿಸ್ ಹೆಡ್, ದಿನೇಶ್ ಚಾಂಡಿಮಲ್ ಮತ್ತು ಧನಂಜಯ ಡಿ ಸಿಲ್ವಾ ಅವರ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆದರು.

ಅನಂತರ ಆಸ್ಟ್ರೇಲಿಯದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ರಮೇಶ್ ಮೆಂಡಿಸ್ ಎಸೆತದಲ್ಲಿ ಒಂದು ಬೌಂಡರಿ ಮತ್ತು ಸಿಕ್ಸರ್ಸುಲಭವಾದ ಗೆಲುವನ್ನು ಔಪಚಾರಿಕವಾಗಿ ಮುಗಿಸಿದರು.

Story first published: Friday, July 1, 2022, 17:42 [IST]
Other articles published on Jul 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X