ಐಪಿಎಲ್: ಮೊದಲ ದಿನದ ಹರಾಜಿನಲ್ಲಿ ಯಾರಿಗೂ ಬೇಡವಾದವರಿವರು

Posted By:
Some famous players remain unsold on IPL 2018 auction first day

ಬೆಂಗಳೂರು, ಜನವರಿ 27: ಐಪಿಎಲ್‌ 2018 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನ ಹಲವು ಆಟಗಾರರು ಯಾವ ತಂಡಕ್ಕೂ ಬೇಡವಾಗಿ ಮೂಲೆಗುಂಪಾದರು.

ದಿಗ್ಗಜ ಆಟಗಾರರೇ ಇಂದು ಮಾರಾಟವಾಗದೆ ಅನ್‌ಸೋಲ್ಡ್‌ ಹಣೆ ಪಟ್ಟಿ ಹಾಕಿಸಿಕೊಂಡರು. ಅವರ ಅದೃಷ್ಟ ಕೈಕೊಟ್ಟೊ, ಅಥವಾ ಕಳಪೆ ಫಾರ್ಮ್‌ನಿಂದಾಗಿ ಹಲವು ಆಟಗಾರರು ಇಂದು ಮಾರಾಟವಾಗದೆ ಮೂಲೆಯಲ್ಲಿ ಕಾಯಬೇಕಾಗಿದೆ.

ಐಪಿಎಲ್: ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ಭಾರಿ ಡಿಮ್ಯಾಂಡ್

ಟಿ20 ಪಂದ್ಯವಾಡಲೆಂದೇ ದೇವರು ವಿಶೇಷವಾಗಿ ತಯಾರು ಮಾಡಿದ ಆಟಗಾರರು ಎಂದು ಹೇಳಲಾಗುವ ಕ್ರಿಸ್‌ಗೇಲ್, ಲಸಿತ್‌ ಮಲಿಂಗಾ ಅಂತಹಾ ಆಟಗಾರರೇ ಹರಾಜಿನಲ್ಲಿ ಬಿಕರಿಯಾಗದೆ ಬೆಂಚು ಕಾಯಿಸುವಂತಾಯಿತು. ಕ್ರಿಕೆಟ್‌ ಪ್ರಿಯರ ಆಶ್ಚರ್ಯಕ್ಕೂ ಇದು ಕಾರಣವಾಯಿತು.

ಮೊದಲ ದಿನ ಮಾರಾಟವಾಗದೇ ಉಳಿದರೆಂದ ಮಾತ್ರಕ್ಕೆ ಐಪಿಎಲ್‌ನಿಂದ ಹೊರಗುಳಿಯಬೇಕು ಎಂದೇನಲ್ಲ, ನಾಳೆ ಹರಾಜಿನಲ್ಲಿ ಅವರನ್ನು ಕೊಳ್ಳಲು ಅವಕಾಶವಿದೆ. ಮೊದಲ ದಿನ ಬೇಡಿಕೆ ಕಳೆದುಕೊಂಡ ಆಟಗಾರರ ಬಗ್ಗೆ ತಿಳಿಯಲು ಮುಂದೆ ಓದಿ...

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ನಾಳೆಯಾದರೂ ಮಾರಾಟವಾಗುವರೇ?

ನಾಳೆಯಾದರೂ ಮಾರಾಟವಾಗುವರೇ?

ಟಿ20ಯ ದೇವರೆಂದೇ ಹೇಳಲಾಗುವ ಕ್ರಿಸ್‌ಗೇಲ್ ಅವರು ಇಂದು ಹರಾಜಿನಲ್ಲಿ ಮಾರಾಟವಾಗಲಿಲ್ಲ. ಯಾವ ತಂಡವೂ ಗೇಲ್ ಅವರನ್ನು ಖರೀದಿಸಲು ಮುಂದೆ ಬರಲಿಲ್ಲ, ಆದರೆ ಅವರ ಸಮಯ ಇನ್ನೂ ಮುಗಿದಿಲ್ಲ ದಿನದಾಂತ್ಯಕ್ಕೆ ಅಥವಾ ನಾಳೆ ಮತ್ತೆ ಅವರಿಗೆ ಅವಕಾಶ ಇದ್ದು, ಆಗ ಬೇಕಾದರೆ ಮತ್ತೆ ಮಾರಾಟವಾಗುವ ಸಾಧ್ಯತೆ ಇದೆ. ಆದರೆ ಅವರ ಬೇಡಿಕೆ ಕುಸಿದಿರುವುದಂತೂ ನಿಜ ಎಂಬುದು ಮೊದಲ ದಿನ ಗೊತ್ತಾಗಿದೆ. ನಾಳೆಯಾದರೂ ಇವರು ಮಾರಾಟವಾಗುತ್ತಾರಾ ಕಾದು ನೋಡಬೇಕು.

ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಬೌಲರ್

ಹೆಚ್ಚು ಬೆಲೆಗೆ ಮಾರಾಟವಾಗಿದ್ದ ಬೌಲರ್

ವೇಗದ ಬೌಲರ್‌ಗಳಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದ ಶ್ರೀಲಂಕಾದ ಲಸಿತ್ ಮಲಿಂಗಾ ಅವರ ಕಡೆ ಈ ಬಾರಿ ಯಾವ ತಂಡವೂ ತಿರುಗಿಯೂ ನೋಡಲಿಲ್ಲ. ಮುಂಬೈ ಪರ ಆಡಿದ್ದ ಮಲಿಂಗಾ ಮೊದಲ ದಿನ ಮಾರಾಟವಾಗದೇ ಉಳಿದರು. ಬ್ಯಾಟ್ಸ್‌ಮನ್‌ಗಳ ಪಾಲಿನ ದುಸ್ವಪ್ನ, ಡೆತ್ ಓವರ್‌ಗಳ ದೇವತೆ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಮಲಿಂಗಾ ಮೇಲೆ ಯಾವ ತಂಡವೂ ಕೃಪೆ ತೋರಲಿಲ್ಲ.

ಆಸ್ಟ್ರೇಲಿಯಾ ಆಲ್‌ರೌಂಡರ್ ಆಟ ಮುಗಿಯಿತೇ?

ಆಸ್ಟ್ರೇಲಿಯಾ ಆಲ್‌ರೌಂಡರ್ ಆಟ ಮುಗಿಯಿತೇ?

ಆಸ್ಟ್ರೇಲಿಯಾದ ಬೌಲಿಂಗ್ ಆಲ್‌ರೌಂಡರ್ ಜೇಮ್ಸ್ ಫಕ್ನರ್ ತನ್ನ ವೇಗದ ಬೌಲಿಂಗ್ ಮತ್ತು ಬಿಡುಬೀಸಿನ ಬ್ಯಾಟಿಂಗ್‌ನಿಂದಾಗಿ ಪರಿಚಿತರು. ಕಳೆದ ಕೆಲವು ಐಪಿಎಲ್‌ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಜೇಮ್ಸ್ ಫಕ್ನರ್‌ ಅವರು ಈ ಬಾರಿ ಯಾರಿಗೂ ಬೇಡವಾದರೂ. ಆಸ್ಟ್ರೇಲಿಯಾ ತಂಡದಿಂದಲೂ ಹೊರಗುಳಿದಿರುವ ಫಕ್ನರ್‌ ಅವರ ಆಟ ಮುಗಿಯಿತೇ ಎಂಬುದು ಕ್ರಿಕೆಟ್ ಪ್ರಿಯರ ಚಿಂತೆ.

ಉದ್ದನೆಯ ವೇಗಿ ಐಪಿಎಲ್‌ಗಿಲ್ಲವೇ?

ಉದ್ದನೆಯ ವೇಗಿ ಐಪಿಎಲ್‌ಗಿಲ್ಲವೇ?

ಭಾರತದ ಬೆಸ್ಟ್ ವೇಗದ ಬೌಲರ್‌ಗಳಲ್ಲೊಬ್ಬರಾದ ಇಶಾಂತ್ ಶರ್ಮಾ ಐಪಿಎಲ್‌ನಲ್ಲಿ ಸ್ಥಾನ ಇಲ್ಲವೆನಿಸುತ್ತದೆ. ವಿದೇಶಿ ಪಿಚ್‌ಗಳಲ್ಲಿ ಈಗಲೂ ಭಾರತದ ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಇಶಾಂತ್‌ ಶರ್ಮಾ ಅವರಿಗೆ ಭಾರತಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅವಕಾಶ ನೀಡಲಾಗಿಲ್ಲದಿರುವುದು ಬೇಸರದ ಸಂಗತಿ. ಮೊದಲ ದಿನ ಮಾರಾಟವಾಗದ ಅವರು ಎರಡನೇ ದಿನ ಮಾರಾಟವಾಗುತ್ತಾರಾ ನೋಡಬೇಕು.

ದಕ್ಷಿಣ ಆಫ್ರಿಕಾದ ವಿರಾಟ್ ಕೋಹ್ಲಿ ಮಾರಟವಾಗಿಲ್ಲ

ದಕ್ಷಿಣ ಆಫ್ರಿಕಾದ ವಿರಾಟ್ ಕೋಹ್ಲಿ ಮಾರಟವಾಗಿಲ್ಲ

ದಕ್ಷಿಣ ಆಫ್ರಿಕಾದ ವಿರಾಟ್ ಕೋಹ್ಲಿ ಎಂದೇ ಪರಿಚಿತವಾದ ಹಶೀಮ್ ಆಮ್ಲಾ ಅವರನ್ನು ಮೊದಲ ದಿನದ ಹರಾಜಿನಲ್ಲಿ ಯಾರೂ ಕೊಳ್ಳಲಿಲ್ಲ. ತಮ್ಮ ಅತ್ಯುತ್ತಮ ಕಲಾತ್ಮಕ ಬ್ಯಾಟಿಂಗ್‌ನಿಂದಾಗಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಲೇ ಬಂದಿರುವ ಹಶೀಮ್ ಆಮ್ಲಾ ಅವರನ್ನು ಯಾವ ತಂಡವೂ ಪರಿಗಣಿಸದಿರುವುದು ವಿಷಾದನೀಯ. ಅವರ ವಯಸ್ಸಿನಿಂದಾಗಿ ತಂಡಗಳು ಅವರನ್ನು ಕೊಳ್ಳದೇ ಹಿಂದೆ ಸರಿದವೇನೊ...

ಇಂಗ್ಲೆಂಡ್‌ ಯುವ ಆಟಗಾರ ಯಾರಿಗೂ ಬೇಡ

ಇಂಗ್ಲೆಂಡ್‌ ಯುವ ಆಟಗಾರ ಯಾರಿಗೂ ಬೇಡ

ಇಂಗ್ಲೆಂಡ್‌ನ ಯುವ ಆಟಗಾರ, ಇಂಗ್ಲೆಂಡ್‌ ತಂಡದ ಟೆಸ್ಟ್ ನಾಯಕ ಜೋ ರೂಟ್ ಅತ್ಯುತ್ತಮ ಬ್ಯಾಟಿಂಗ್‌ ಸರಾಸರಿ ಹೊಂದಿದ್ದಾರೆ. ಇತ್ತೀಚೆಗೆ ನಡೆದ ಆಶಸ್‌ ಸರಣಿಯಲ್ಲೂ ಉತ್ತಮ ಪ್ರದರ್ಶನವನ್ನೇ ತೋರಿದ್ದರು ಆದರೆ ಐಪಿಎಲ್ ಪ್ರಾಂಚೈಸಿಗಳು ಏಕೆ ಅವರನ್ನು ಪರಿಗಣಿಸಲಿಲ್ಲ ಎಂಬುದು ಆಶ್ಚರ್ಯ.

ಕಲಾತ್ಮಕತೆಗೆ ಇಲ್ಲ ಬೆಲೆ

ಕಲಾತ್ಮಕತೆಗೆ ಇಲ್ಲ ಬೆಲೆ

ಚೆನ್ನೈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಹಲವು ಅತ್ಯುತ್ತಮ ಇನ್ನಿಂಗ್ಸ್‌ ಕಟ್ಟಿದ್ದ ಕಲಾತ್ಮಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಅವರು ಈ ಬಾರಿ ಬಿಕರಿಯಾಗಿಲ್ಲ. ಈಗಲೂ ಭಾರತ ಟೆಸ್ಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಮುರಳಿ ವಿಜಯ್‌ ಐಪಿಲ್‌ ನ ಮೊದಲ ದಿನ ಸೇಲ್ ಆಗಲೇ ಇಲ್ಲ.

ಗುಪ್ಟಿಲ್‌, ಟಿಮ್ ಸೌಥಿ ಕೂಡಾ ಇದ್ದಾರೆ

ಗುಪ್ಟಿಲ್‌, ಟಿಮ್ ಸೌಥಿ ಕೂಡಾ ಇದ್ದಾರೆ

ಹಲವು ಪ್ರಮುಖ ಆಟಗಾರರು ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗಲಿಲ್ಲ, ನ್ಯೂಜಿಲೆಂಡ್‌ನ ಮಾರ್ಕ್ ಗುಪ್ತಿಲ್, ಟಿಮ್ ಸೌಥಿ ಸೇರಿದಂತೆ ಆಸ್ಟ್ರೇಲಿಯಾದ ಹೇಜಲ್‌ವೂಡ್, ಬಿಲ್ಲಿಂಗ್ಸ್, ವೆಸ್ಟ್ ಇಂಡೀಸ್‌ನ ಸ್ಯಾಮುಯೆಲ್ ಬದ್ರಿ, ಸ್ಪಿನ್ನರ್ ಇಶ್ ಸೋದಿ ಅವರುಗಳು ಮೊದಲ ದಿನ ಮಾರಾಟವಾಗದೇ ಉಳಿದರು.

Story first published: Saturday, January 27, 2018, 16:32 [IST]
Other articles published on Jan 27, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ