ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ಸ್ಟಾರ್ ಕ್ರಿಕೆಟಿಗ

South Africa Star Cricketer Farhaan Behardien Announced His Retirement From Professional Cricket

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಫರ್ಹಾನ್ ಬೆಹಾರ್ಡಿಯನ್ ಡಿಸೆಂಬರ್ 27ರ ಮಂಗಳವಾರದಂದು ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು.

ಫರ್ಹಾನ್ ಬೆಹಾರ್ಡಿಯನ್ ಅವರು 39ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದರು. ಫರ್ಹಾನ್ ಬೆಹಾರ್ಡಿಯನ್ 2004ರಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ ಅವರು, 18 ವರ್ಷಗಳ ಆಟದಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು.

AUS vs SA: 100ನೇ ಟೆಸ್ಟ್‌ನಲ್ಲಿ ಶತಕದೊಂದಿಗೆ ಸಚಿನ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ವಾರ್ನರ್AUS vs SA: 100ನೇ ಟೆಸ್ಟ್‌ನಲ್ಲಿ ಶತಕದೊಂದಿಗೆ ಸಚಿನ್ ಅವರ ಸಾರ್ವಕಾಲಿಕ ದಾಖಲೆ ಸರಿಗಟ್ಟಿದ ವಾರ್ನರ್

ಫರ್ಹಾನ್ ಬೆಹಾರ್ಡಿಯನ್ ದಕ್ಷಿಣ ಆಫ್ರಿಕಾ ಪರ ಚೊಚ್ಚಲ ಪಂದ್ಯವನ್ನು ಆಡಲು ಎಂಟು ವರ್ಷಗಳ ಕಾಲ ಕಾಯಬೇಕಾಯಿತು. ನಂತರ ಅವರು ವೈಟ್-ಬಾಲ್ ಸ್ವರೂಪಗಳಲ್ಲಿ 59 ಏಕದಿನ ಪಂದ್ಯಗಳು ಮತ್ತು 38 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. 1592 ರನ್‌ಗಳನ್ನು ಗಳಿಸಿದ್ದಾರೆ ಮತ್ತು ಟಿ20 ಸ್ವರೂಪಗಳಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.

South Africa Star Cricketer Farhaan Behardien Announced His Retirement From Professional Cricket

ಆಲ್‌ರೌಂಡರ್ ಫರ್ಹಾನ್ ಬೆಹಾರ್ಡಿಯನ್ 2012, 2014 ಮತ್ತು 2016ರಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಭಾಗವಾಗಿದ್ದರು, ಅಲ್ಲದೆ 2015ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಜನವರಿ 2017ರಲ್ಲಿ ಮೂರು ಟಿ20 ಸರಣಿಗಾಗಿ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದಾಗ ಫರ್ಹಾನ್ ಬೆಹಾರ್ಡಿಯನ್ ತಮ್ಮ ದೇಶದ ನಾಯಕತ್ವದ ಅವಕಾಶವನ್ನು ಪಡೆದರು.

ಫರ್ಹಾನ್ ಬೆಹಾರ್ಡಿಯನ್ ಅವರು ಕೊನೆಯ ಬಾರಿಗೆ ನವೆಂಬರ್ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಾರರಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದರು.

ಫರ್ಹಾನ್ ಬೆಹರ್ಡಿಯನ್ ವಿದಾಯದ ಮಾತು
ನಿವೃತ್ತಿ ಘೋಷಿಸಿದ ಫರ್ಹಾನ್ ಬೆಹರ್ಡಿಯನ್, "ಕಳೆದ ಎರಡು ವಾರಗಳಿಂದ ಸಾಕಷ್ಟು ಭಾವನಾತ್ಮಕವಾಗಿದೆ. ಕ್ರಿಕೆಟ್ ವೃತ್ತಿಜೀವನದಲ್ಲಿ 18 ವರ್ಷಗಳು ಬಂದು ಹೋಗಿವೆ. ನನ್ನ ದೇಶಕ್ಕಾಗಿ 97 ಪಂದ್ಯಗಳು ಸೇರಿದಂತೆ ಎಲ್ಲಾ ಸ್ವರೂಪಗಳಲ್ಲಿ 560 ಪಂದ್ಯಗಳು, 17 ಟ್ರೋಫಿಗಳು ಗೆದ್ದ ಮತ್ತು 4 ವಿಶ್ವಕಪ್‌ಗಳಲ್ಲಿ ಆಡಿದ ಅಪಾರ ಅನುಭವ ಕಲಿಸಿದೆ," ಎಂದು ಬರೆದುಕೊಂಡಿದ್ದಾರೆ.

"ಅಚಲವಾದ ಬೆಂಬಲ ನೀಡಿದ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನನ್ನ ವೃತ್ತಿಜೀವನದಲ್ಲಿ ನಾನು ಕಂಡ ಎಲ್ಲಾ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು. ಅದೇ ರೀತಿ ನನ್ನ ಎಲ್ಲಾ ಸಹ ಆಟಗಾರರು, ನನ್ನ ಕೆಲವು ನಾಯಕರು ಮತ್ತು ಕೆಲವು ಶ್ರೇಷ್ಠರೊಂದಿಗೆ ನಾನು ಆಡಿದ ನಾನು ಅದೃಷ್ಟವೆಂದು," ಫರ್ಹಾನ್ ಬೆಹಾರ್ಡಿಯನ್ ತಿಳಿಸಿದ್ದಾರೆ.

Story first published: Tuesday, December 27, 2022, 16:07 [IST]
Other articles published on Dec 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X