ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲ

South African cricketer Hashim Amla announces his retirement from all formats of cricket

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶಿಮ್ ಆಮ್ಲ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. 39ರ ಹರೆಯದ ಹಾಶಿಮ್ ಆಮ್ಲ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದರು ಕೂಡ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದರು. ಇದೀಗ ಎಲ್ಲಾ ಮಾದರಿಯಿಂದಲೂ ನಿವೃತ್ತಿ ಪಡೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿರುವ ಆಮ್ಲ ಒಟ್ಟು 349 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಮೂರು ಮಾದರಿಯಲ್ಲಿಯೂ ಒಟ್ಟು 18672 ರನ್‌ಗಳನ್ನು ಗಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟರ್ 124 ಪಂದ್ಯಗಳಲ್ಲಿ 28 ಟೆಸ್ಟ್ ಶತಕಗಳ ದಾಖಲಿಸಿದ್ದು ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ 27 ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿರುವ ಅತ್ಯುತ್ತಮ ಆಟಗಾರ ಎನಿಸಿಕೊಂಡಿದ್ದಾರೆ ಆಮ್ಲ. ಜುಲೈ 22, 2012 ರಂದು ಓವಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 311 ರನ್ ಗಳಿಸಿದ ಹಾಶಿಮ್ ಆಮ್ಲ ದಕ್ಷಿಣ ಆಫ್ರಿಕಾ ಪರವಾಗಿ ತ್ರಿಶತಕ ಸಿಡಿಸಿದ [್ರಥಮ ಆಟಗಾರ ಎನಿಸಿಕೊಂಡಿದ್ದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಭವಿಷ್ಯದ ಕುರಿತು ಸುನಿಲ್ ಗವಾಸ್ಕರ್ ಹೇಳಿದ್ದೇನು?ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಭವಿಷ್ಯದ ಕುರಿತು ಸುನಿಲ್ ಗವಾಸ್ಕರ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡಿರುವ ಅನುಭವ ಹೊಂದಿರುವ ಹಾಶಿಮ್ ಆಮ್ಲ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಪರವಾಗಿ ಆಡಿದ್ದಾರೆ. ಇನ್ನು 2019ರಲ್ಲಿ ಸರ್ರೆ ಪರ ಆಡುವ ಒಪ್ಪಂದ ಮಾಡಿಕೊಂಡಿದ್ದರು. ತಂಡದ ನಾಯಕತ್ವದ ಗುಂಪಿನ ಭಾಗವಾಗಿದ್ದ ಇವರು ಕೌಂಟಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್‌ಗಳಿಸಿದ್ದಾರೆ.

ಇನ್ನು ತಮ್ಮ ನಿವೃತ್ತಿಯ ಘೋಷಣೆಯ ಸಂದರ್ಭದಲ್ಲಿ ಸರ್ರೆ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಓವಲ್ ಕ್ರೀಡಾಂಗಣ ಸಾಕಷ್ಟು ನೆನಪುಗಳನ್ನು ನೀಡಿದೆ ಎಂದಿರುವ ಆಮ್ಲ ಇಲ್ಲಿ ಆಡುವ ಅವಕಾಶ ದೊರೆತಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದಿದ್ದಾರೆ. ಇನ್ನು ಸರ್ರೆ ತಂಡ ಮತ್ತಷ್ಟು ಹೆಚ್ಚು ಟ್ರೋಫಿಗಳನ್ನು ಗೆಲ್ಲುವಂತಾಗಲಿ ಎಂದು ಹಾರೈಸಿದ್ದಾರೆ.

Story first published: Wednesday, January 18, 2023, 19:37 [IST]
Other articles published on Jan 18, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X