ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತ ಅತ್ಯುತ್ತಮ ಆಟಗಾರ': ಪ್ರಭಾವಶಾಲಿ ಭಾರತೀಯನ ಹೆಸರಿಸಿದ ಸ್ಮಿತ್

Steve Smith picks KL Rahul as the most impressive Indian player

ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪ ಪ್ರಕರಣದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ನಿಷೇಧದ ಅವಧಿ ಮುಗಿಸಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಷ್ಟೇ ಅಲ್ಲ ಅಧ್ಭುತ ಪ್ರದರ್ಶನವನ್ನೂ ನೀಡುತ್ತಿದ್ದಾರೆ. ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿರುವ ಸ್ಮಿತ್ ತಾನು ನಂ.1 ಸ್ಥಾನ ಆವರಿಸಿಕೊಂಡಿದ್ದಾರೆ.

ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!

ಬಾಲ್‌ ಟ್ಯಾಪರಿಂದಾಗಿ ನಿಷೇಧಕ್ಕೆ ಒಳಗಾಗುವ ಮೊದಲು ಸ್ಮಿತ್ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದರು. ಸ್ಟೀವ್ ನಿಷೇಧಕ್ಕೀಡಾದ ಬಳಿಕ ಕೊಹ್ಲಿ ನಂ.1 ಸ್ಥಾನ ಅಲಂಕರಿಸಿದ್ದರು. ನಿಷೇಧ ಮುಗಿಸಿ ಬಂದಿರುವ ಸ್ಮಿತ್ ಮತ್ತೆ ನಂ.1 ಪಟ್ಟ ತನ್ನದಾಗಿಸಿಕೊಂಡಿದ್ದಾರೆ.

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

ಅಂದ್ಹಾಗೆ, ಕೊಹ್ಲಿ ಜೊತೆಗೆ ಹೋಲಿಸಲಾಗುತ್ತಿರುವ ಸ್ಟೀವ್ ಸ್ಮಿತ್, ತನ್ನನ್ನು ಹೆಚ್ಚಾಗಿ ಸೆಳೆಯುವ, ಪ್ರಭಾವ ಬೀರುವ ಭಾರತೀಯ ಬ್ಯಾಟ್ಸ್‌ಮನ್‌ನನ್ನು ಹೆಸರಿಸಿದ್ದಾರೆ.

ಭಾರತದ ಪ್ರಭಾವಶಾಲಿ ಬ್ಯಾಟ್ಸ್‌ಮನ್

ಭಾರತದ ಪ್ರಭಾವಶಾಲಿ ಬ್ಯಾಟ್ಸ್‌ಮನ್

ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ತನಗೆ ಕೆಎಲ್ ರಾಹುಲ್ ಹೆಚ್ಚು ಇಷ್ಟ ಎಂದು ಆಸ್ಟ್ರೇಲಿಯಾದ ಖ್ಯಾತ ಬ್ಯಾಟ್ಸ್‌ಮನ್ ಸ್ಮಿತ್ ಹೇಳಿಕೊಂಡಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ರಾಹುಲ್ ಅತ್ಯುತ್ತಮ ಆಟಗಾರ ಎಂದು ಸ್ಮಿತ್ ಹೇಳಿದ್ದಾರೆ.

ಸ್ಥಿರ ಪ್ರದರ್ಶನ ನೀಡಿದ್ದ ರಾಹುಲ್

ಸ್ಥಿರ ಪ್ರದರ್ಶನ ನೀಡಿದ್ದ ರಾಹುಲ್

ಭಾರತದ ಸೀಮಿತ ಓವರ್‌ಗಳ ತಂಡದಲ್ಲಿ ಹೆಚ್ಚು ಗಟ್ಟಿಯಾಗುತ್ತಿರುವ ರಾಹುಲ್, ಭಾರತದಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ನ್ಯೂಜಿಲೆಂಡ್ ಪ್ರವಾಸದಲ್ಲೂ ಉತ್ತಮ ಆಟ ಪ್ರದರ್ಶಿಸಿದ್ದರು. ಇದೇ ಕಾರಣಕ್ಕೆ ಸ್ಮಿತ್ ರಾಹುಲ್ ಅವರನ್ನು ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಪ್ರಭಾವಶಾಲಿ ಎಂದು ಕರೆದಿದ್ದಾರೆ.

ಐಪಿಎಲ್ ನೆಚ್ಚಿನ ಟೂರ್ನಿ

ಐಪಿಎಲ್ ನೆಚ್ಚಿನ ಟೂರ್ನಿ

ತನ್ನ ಅಭಿಮಾನಿಗಳ ಜೊತೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಮಾತನಾಡಿದ ಸ್ಮಿತ್, ಇಂಡಿಯನ್ ಪ್ರೀಮಿಯರ್ ಲೀಗ್ ತಾನು ಆಡಲು ಬಯಸುವ ನೆಚ್ಚಿನ ಟೂರ್ನಿ ಎಂದಿದ್ದಾರೆ. ಇದೇ ವೇಳೆ 'ನಿಮ್ಮನ್ನು ಹೆಚ್ಚು ಪ್ರಭಾವಗೊಳಿಸಿರುವ ಭಾರತದ ಆಟಗಾರ ಯಾರು?' ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಮಿತ್, 'ಕೆಎಲ್ ರಾಹುಲ್. ಆತ ಅತ್ಯುತ್ತಮ ಆಟಗಾರ' ಎಂದಿದ್ದಾರೆ.

ಟಿ20 Rankingನಲ್ಲಿ ನಂ.2

ಟಿ20 Rankingನಲ್ಲಿ ನಂ.2

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಳಿಕ ಕೆಎಲ್ ರಾಹುಲ್ ವಿಶಿಷ್ಠ ಶೈಲಿಯ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. 36 ಟೆಸ್ಟ್, 32 ಏಕದಿನ ಪಂದ್ಯಗಳು, 41 ಟಿ20ಐ ಪಂದ್ಯಗಳನ್ನಾಡಿರುವ ರಾಹುಲ್ ಕ್ರಮವಾಗಿ 2006, 1239 ಮತ್ತು 1461 ರನ್ ಗಳಿಸಿದ್ದಾರೆ. ಟಿ20 ಐಸಿಸಿ ರ್ಯಾಂಕಿಂಗ್‌ನಲ್ಲಿ ರಾಹುಲ್ ಸದ್ಯ 2ನೇ ಶ್ರೇಯಾಂಕದಲ್ಲಿದ್ದಾರೆ.

Story first published: Tuesday, June 16, 2020, 14:43 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X