ಕೆ.ಎಲ್ ರಾಹುಲ್ ನಾಯಕನಾಗಿ ಬೆಳೆಯುತ್ತಿದ್ದಾನೆ, ಅನಿಲ್ ಕುಂಬ್ಳೆ ಪಾತ್ರ ಮರೆಯದಿರಿ!

ಯುಎಇಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಆಧಾರಸ್ತಂಭ ಮತ್ತು ನಾಯಕ ಕೆಎಲ್ ರಾಹುಲ್ ತಮ್ಮ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದ್ದಾರೆ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್-ರಾಹುಲ್ ನೇತೃತ್ವದಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಪ್ಲೇ ಆಫ್ ಸ್ಥಾನಕ್ಕೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ 11 ಪಂದ್ಯಗಳಿಂದ ಐದು ಗೆಲುವುಗಳೊಂದಿಗೆ, ಕೆಎಕ್ಸ್‌ಐಪಿ ಐದನೇ ಸ್ಥಾನದಲ್ಲಿದೆ. ಸೋಮವಾರ ಇಯಾನ್ ಮಾರ್ಗನ್ ಅವರ ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೆಣಸಿದಾಗ ಮತ್ತೊಂದು ಗೆಲುವು ಸಾಧಿಸಲಿದ್ದಾರೆ.

ಕೆ.ಎಲ್ ರಾಹುಲ್ ನಾಯಕನಾಗಿಯೂ ಮಿಂಚು ಹರಿಸುತ್ತಿದ್ದಾರೆ!

ಕೆ.ಎಲ್ ರಾಹುಲ್ ನಾಯಕನಾಗಿಯೂ ಮಿಂಚು ಹರಿಸುತ್ತಿದ್ದಾರೆ!

ಈ ಆವೃತ್ತಿಯ ಅತಿ ಹೆಚ್ಚು ರನ್-ಸ್ಕೋರರ್ ಆಗಿರುವ ರಾಹುಲ್ ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ ಮತ್ತು ಅವರು ಹೆಚ್ಚು ಬಲಿಷ್ಠವಾಗುತ್ತಾ ಸಾಗಿದ್ದಾರೆ. ಕೆ.ಎಲ್ ಕೇವಲ ಆಟಗಾರನಾಗಿ ಅಷ್ಟೇ ಅಲ್ಲದೆ ನಾಯಕನಾಗಿಯು ಮಿಂಚುತ್ತಿದ್ದಾನೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಕ್ಸ್‌ವೆಲ್ ಬೆಂಬಲಿಸುತ್ತಿರುವುದಕ್ಕೆ ಕಾರಣ ಬಾಯ್ಬಿಟ್ಟ ಕೆಎಲ್ ರಾಹುಲ್

ಅನಿಲ್ ಕುಂಬ್ಳೆ ಪಾತ್ರವನ್ನು ಮರೆಯಬೇಡಿ!

ಅನಿಲ್ ಕುಂಬ್ಳೆ ಪಾತ್ರವನ್ನು ಮರೆಯಬೇಡಿ!

ಭಾರತದ ಮಾಜಿ ಆಟಗಾರ ಹಾಗೂ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ಕೋಚ್ ಅನಿಲ್ ಕುಂಬ್ಳೆ ಅವರ ಹೋರಾಟದ ಮನೋಭಾವವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಪಾತ್ರವನ್ನು ಮರೆಯಬೇಡಿ! ಕ್ರಿಕೆಟ್ ಮೈದಾನದಲ್ಲಿ ಅನಿಲ್‌ ಕುಂಬ್ಳೆ ಛಲದಂಕಮಲ್ಲನಾಗಿದ್ದು, ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಈ ಹೋರಾಟದ ಮನೋಭಾವವುಳ್ಳ ಕುಂಬ್ಳೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳಮುಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಸತತ ಗೆಲುವಿನ ಸೂತ್ರದಾರ ಎಂದು ಲಿಟಲ್ ಮಾಸ್ಟರ್ ಅಭಿಪ್ರಾಯವಾಗಿದೆ.

ಕಿಂಗ್ಸ್‌ ಇಲವೆನ್ ಪಂಜಾಬ್ ಅಸಾಧಾರಣ ಕ್ರಿಕೆಟ್ ಆಡಿದೆ

ಕಿಂಗ್ಸ್‌ ಇಲವೆನ್ ಪಂಜಾಬ್ ಅಸಾಧಾರಣ ಕ್ರಿಕೆಟ್ ಆಡಿದೆ

ಸ್ಟಾರ್ ಸ್ಪೋರ್ಟ್ಸ್ ಶೋ ಕ್ರಿಕೆಟ್ ಲೈವ್‌ನಲ್ಲಿ ಪ್ರತ್ಯೇಕವಾಗಿ ಮಾತನಾಡಿದ ಭಾರತದ ಮಾಜಿ ನಾಯಕ, "ನಿಮಗೆ ಗೊತ್ತಾ, ಅವರು ಗೆಲುವಿನ ಹಾದಿಯನ್ನು ಕಂಡುಕೊಂಡಿದ್ದಾರೆ! ಪಂದ್ಯಾವಳಿಯ ಪ್ರಾರಂಭದಲ್ಲಿ ಅವರು ಅದನ್ನು ಕಳೆದುಕೊಂಡಿರುವಂತೆ ತೋರುತ್ತಿದೆ. ನೆನಪಿಡಿ, ಪ್ರತಿ ಬಾರಿಯೂ ಅವರು ಗೆಲ್ಲಲು ಹತ್ತಿರದಲ್ಲಿದ್ದರು ಮತ್ತು ಅವರು ತಮ್ಮ ಮೊದಲ ಪಂದ್ಯದಲ್ಲಿ ಸೂಪರ್ ಓವರ್‌ಗೆ ಹೋದರು ಮತ್ತು ನಂತರ ಮತ್ತೆ ಅವರು ಅಂತಿಮ ಓವರ್‌ಗಳಲ್ಲಿ ಸೋತರು. ನಂತರ, ಎಲ್ಲೋ ಸಾಲಿನ ಕೆಳಗೆ, ಅವರು ತಮ್ಮ ಹುರುಪನ್ನು ಕಂಡುಕೊಂಡರು, ಅದು ಅವರನ್ನು ಪಂದ್ಯಗಳ ಗೆಲುವಿನತ್ತ ಕರೆದೊಯ್ಯುತ್ತದೆ, ಅವರು ಅಸಾಧಾರಣ ಕ್ರಿಕೆಟ್ ಆಡಿದ್ದಾರೆ'' ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಗಬ್ಬರ್ ಅಬ್ಬರದ ನಡುವೆಯೂ ಆರೆಂಜ್ ಕ್ಯಾಪ್ ಬಿಟ್ಟುಕೊಡದ ಕನ್ನಡಿಗ

ಕೆ.ಎಲ್ ರಾಹುಲ್ ನಾಯಕತ್ವದ ಪಾತ್ರ ಬೆಳವಣಿಗೆ

ಕೆ.ಎಲ್ ರಾಹುಲ್ ನಾಯಕತ್ವದ ಪಾತ್ರ ಬೆಳವಣಿಗೆ

"ಕೊನೆಯ ಪಂದ್ಯ, 126 ಅನ್ನು ಡಿಫೆಂಡ್ ಮಾಡಿಕೊಳ್ಳಲು, ಸಾಕಷ್ಟು ಆತ್ಮವಿಶ್ವಾಸವನ್ನು ತೆಗೆದುಕೊಳ್ಳುತ್ತದೆ ಮತ್ತು ಅದನ್ನೇ ಅವರು ತೋರಿಸಿದ್ದಾರೆ. ತಂಡವನ್ನುನ್ನು ಕೆಎಲ್ ರಾಹುಲ್ ಅದ್ಭುತವಾಗಿ ಮುನ್ನಡೆಸಿದ್ದಾರೆ. ಕೆಎಲ್ ರಾಹುಲ್ ನಾಯಕತ್ವದ ಪಾತ್ರದಲ್ಲಿ ಬೆಳೆದಿದ್ದಾರೆ. ಅವರು ತಮ್ಮ ಮೈದಾನದ ಮೂಲಕ, ತಮ್ಮ ಬೌಲಿಂಗ್ ಬದಲಾವಣೆಗಳೊಂದಿಗೆ, ಕ್ರಿಸ್ ಜೋರ್ಡಾನ್ ಅವರಿಗೆ 19 ನೇ ಓವರ್ ಅನ್ನು ನೀಡಿದರು ಮತ್ತು ಅಂತಿಮ ಓವರ್‌ನಲ್ಲಿ 14 ರನ್ ಡಿಫೆಂಡ್ ಮಾಡಲು ಹರ್ಷ್‌ದೀಪ್ ಅವರನ್ನು ನಂಬಿದ್ದರು. ಇದು ಅವರ ಕೈ ಹಿಡಿಯಿತು'' ಎಂದು ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಸ್ಕಾರ್ ಶ್ಲಾಘಿಸಿದ್ದಾರೆ.

ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ತಮ್ಮ ಕೊನೆಯ ಪಂದ್ಯದಲ್ಲಿ 12 ರನ್‌ಗಳಿಂದ ಸೋಲಿಸಿತು.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, October 26, 2020, 18:32 [IST]
Other articles published on Oct 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X