ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮಾಧ್ಯಮ ಹಕ್ಕು ಹರಾಜಾದ ಮೊತ್ತಕ್ಕೆ ಅಚ್ಚರಿ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ

Sunil Gavaskar said Never imagined the value of IPL media rights would reach a mind boggling level
IPL ನ ಪ್ರತಿ ಪಂದ್ಯ 111 ಕೋಟಿಗೆ ಮಾರಾಟ | *Cricket | OneIndia Kannada

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2023-27ರವರೆಗಿನ ಆವೃತ್ತಿಯ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ನಡೆದಿದೆ. ಈ ಹರಾಜಿಗೆ ಭಾರೀ ಪೈಪೋಟಿ ಕಂಡು ಬಂದಿದ್ದು ಬೃಹತ್ ಮೊತ್ತವನ್ನು ಪಡೆದುಕೊಂಡಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಮಾಧ್ಯಮ ಹಕ್ಕುಗಳ ಮೌಲ್ಯ ಇಷ್ಟು ದೊಡ್ಡ ಪ್ರಮಾಣಕ್ಕೆ ತಲುಪಿತ್ತದೆ ಎಂದು ತಾನು ಊಹಿಸಿರಲಿಲ್ಲ ಎಂದಿದ್ದಾರೆ ಸುನಿಲ್ ಗವಾಸ್ಕರ್.

ಮುಂಬೈನಲ್ಲಿ ನಡೆದ ಈ ಈ ಹರಾಜು ಪ್ರಕ್ರಿಯೆ 2 ನೇ ದಿನದಂದು ಕೇವಲ ಭಾರತೀಯ ಉಪಖಂಡದ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕುಗಳು ಬರೊಬ್ಬರಿ 44,070 ಕೋಟಿ ರೂಪಾಯಿಗಳಿಗೆ ಮಾರಾಟವಾಯಿತು. ಹೀಗಾಗಿ BCCI ಕನಿಷ್ಠ 45,000 ಕೋಟಿಗಳಷ್ಟು ಲಾಭವನ್ನು ಪಡೆಯಲಿದೆ.

ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಸುನಿಲ್ ಗವಾಸ್ಕರ್ ಐಪಿಎಲ್ ಮಾಧ್ಯಮ ಹಕ್ಕುಗಳ ಮೌಲ್ಯವು ಟಿ 20 ಲೀಗ್‌ನ ಜನಪ್ರಿಯತೆಯನ್ನು ಮಾತ್ರ ತೋರಿಸುತ್ತದೆ ಎಂದಿದ್ದಾರೆ. ಜೊತೆಗೆ ಅಭಿಮಾನಿಗಳು ಗುಣಮಟ್ಟದ ಪ್ರಸಾರ ಅನುಭವವನ್ನು ಪಡೆಯುವುದನ್ನು ಮುಂದುವರಿಸುತ್ತಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ''

2023 ರಿಂದ 2027 ರವರೆಗಿನ 5 ವರ್ಷಗಳ ಅವಧಿಗೆ ಭಾರತೀಯ ಉಪಖಂಡದ ಟಿವಿ ಮತ್ತು ಡಿಜಿಟಲ್ ಪ್ರಸಾರ ಹಕ್ಕುಗಳ ಪ್ಯಾಕೇಜ್‌ಗಳ ಹರಾಜಿನಿಂದ 44,070 ಕೋಟಿ ರೂ.ಗಳನ್ನು ಬಿಸಿಸಿಐ ಪಡೆದುಕೊಂಡಿದೆ. ಇದು2018 ರಿಂದ 2022 ಅವಧಿಯ ಪ್ರಸಾರಕ್ಕಾಗಿ 2017ರಲ್ಲಿ ಟಿವಿ ಮತ್ತು ಡಿಜಿಟಲ್ ಹಕ್ಕುಗಳಿಗಾಗಿ ಸ್ಟಾರ್ ಇಂಡಿಯಾ ಖರೀದಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ವಯಾಕಾಮ್ ಡಿಜಿಟಲ್ ಹಕ್ಕು ಖರೀದಿಸಿದ್ದು ಟಿವಿ ಹಕ್ಕು ಮತ್ತೆ ಸ್ಟಾರ್ ಇಂಡಿಯಾ ಪಾಲಾಗಿದೆ.

ಗಾಯಕ್ಕೊಳಗಾಗಿ ಹೊರಬಿದ್ದ ರಾಹುಲ್ ಈಗ ಹೇಗಿದ್ದಾರೆ? ಮುಂದಿನ ಸರಣಿಯಿಂದಲೂ ಹೊರಬೀಳ್ತಾರಾ ರಾಹುಲ್?ಗಾಯಕ್ಕೊಳಗಾಗಿ ಹೊರಬಿದ್ದ ರಾಹುಲ್ ಈಗ ಹೇಗಿದ್ದಾರೆ? ಮುಂದಿನ ಸರಣಿಯಿಂದಲೂ ಹೊರಬೀಳ್ತಾರಾ ರಾಹುಲ್?

ಹೀಗಾಗಿ ಇಮಡಿಯನ್ ಪ್ರೀಮಿಯರ್ ಲೀಗ್‌ನ ಮಾಧ್ಯಮ ಹಕ್ಕುಗಳ ಹರಾಜಿನಲ್ಲಿ ಕೇವಲ ಭಾರತ ಉಪಖಂಡದಲ್ಲಿ ಟಿವಿ ಹಾಗೂ ಡಿಜಿಟಲ್ ಹಕ್ಕುಗಳ ಮೌಲ್ಯ ಪ್ರತಿ ಪಂದ್ಯಕ್ಕೆ 105 ಕೋಟಿಗೆ ತಲುಪಿದೆ. ಭಾರತೀಯ ಉಪಖಂಡದ ಡಿಜಿಟಲ್ ಹಕ್ಕುಗಳು ಪ್ರತಿ ಪಂದ್ಯಕ್ಕೆ ರೂ 33 ಕೋಟಿಗಳಿಂದ ರೂ 50 ಕೋಟಿಗಳನ್ನು ತಲುಪಿದದರೆ, ಭಾರತೀಯ ಉಪಖಂಡದ ಟಿವಿ ಹಕ್ಕುಗಳನ್ನು ಪ್ರತಿ ಪಂದ್ಯಕ್ಕೆ ರೂ 57.5 ಕೋಟಿಗೆ ಮಾರಾಟ ಮಾಡಲಾಗಿದೆ.

ಈ ಐಪಿಎಲ್ ಪ್ರಸಾರದ ಹಕ್ಕಿಗಳ ಮಾರಾಟದ ಮೊತ್ತಕ್ಕೆ ಸುನಿಲ್ ಗವಾಸ್ಕರ್ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. "ಐಪಿಎಲ್ ಆರಂಭವಾದ ವರ್ಷದಲ್ಲಿ ಈ ಟೂರ್ನಿ 15 ವರ್ಷಗಳ ನಂತರ ಇಷ್ಟು ಬೃಹತ್ ಮೊತ್ತವನ್ನು ಪಡೆಯಲಿದೆ ಎಂದು ನಾನು ಯೋಚನೆ ಮಾಡಿರಲಿಲ್ಲ" ಎಂದಿದ್ದಾರೆ ಸುನಿಲ್ ಗವಾಸ್ಕರ್.

Story first published: Tuesday, June 14, 2022, 9:47 [IST]
Other articles published on Jun 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X