ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಆರಂಭ, ಅಂತ್ಯ, ತಾಣ, ಭಾರತ ಸಂಭಾವ್ಯ ತಂಡ, ಹೊಸ ನಿಯಮಗಳು, ಸಂಪೂರ್ಣ ಮಾಹಿತಿ!

T20 World Cup 2021: ICC allows participating nations to bring 15 players, 8 officials

ದುಬೈ: ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ದೇಶಗಳಿಂದ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಗೆ ಕರೆತರಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ (ಆಗಸ್ಟ್ 13) ಅನುಮತಿ ನೀಡಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಈ ಸಂಗತಿಯನ್ನು ಖಾತರಿಪಡಿಸಿದೆ. 16 ತಂಡಗಳು ಪಾಲ್ಗೊಳ್ಳುವ ಟಿ20 ವಿಶ್ವಕಪ್‌, ಅಕ್ಟೋಬರ್‌ 17ರಂದು ಆರಂಭಗೊಂಡು ನವೆಂಬರ್ 14ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ!ಭಾರತ vs ಇಂಗ್ಲೆಂಡ್: ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ!

ಪಾಲ್ಗೊಳ್ಳುವ ತಂಡಗಳ ಆಟಗಾರರು ಮತ್ತು ಅಧಿಕಾರಿ ಸಂಖ್ಯೆಯನ್ನು ಶುಕ್ರವಾರ ಖಾತರಿ ಪಡಿಸಿರುವ ಪಿಸಿಬಿ, ಆಟಗಾರರ 15 ಹೆಸರುಗಳ ಪಟ್ಟಿ ಮತ್ತು ಕೋಚ್‌ಗಳು ಮತ್ತು ಬೆಂಬಲ ಸಿಬ್ಬಂದಿ ಸೇರಿ 8 ಮಂದಿ ಅಧಿಕಾರಿಗಳ ಹೆಸರುಗಳ ಪಟ್ಟಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೇ ದಿನವೆಂದು ಹೇಳಿದೆ.

15 ಆಟಗಾರರು, 8 ಅಧಿಕಾರಿಗಳಿಗೆ ಅನುಮತಿ

15 ಆಟಗಾರರು, 8 ಅಧಿಕಾರಿಗಳಿಗೆ ಅನುಮತಿ

"ಕೋವಿಡ್-19 ಭೀತಿಯ ಕಾರಣ ಮತ್ತು ಬಯೋ ಬಬಲ್ ಸುರಕ್ಷತೆಯ ದೃಷ್ಟಿಯಿಂದ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ರಾಷ್ಟ್ರಗಳು ತಮ್ಮ ತಂಡಗಳ ಜೊತೆ ಹೆಚ್ಚುವರಿ ಆಟಗಾರನ್ನು ಕರೆತರಲು ಅನುಮತಿ ನೀಡಿದೆ. ಬರುವ ಹೆಚ್ಚುವರಿ ಆಟಗಾರರ ಖರ್ಚುವೆಚ್ಚಗಳನ್ನು ನೀವೇ ಭರಿಸಬೇಕಾಗುತ್ತದೆ ಅನ್ನೋದನ್ನು ಐಸಿಸಿ ಕೂಡ ಹೇಳಿದೆ. ಐಸಿಸಿ ಕೇವಲ 15 ಆಟಗಾರರು ಮತ್ತು 8 ಮಂದಿ ಅಧಿಕಾರಿಗಳ ವೆಚ್ಚ ಮಾತ್ರ ಐಸಿಸಿ ಭರಿಸಲಿದೆ," ಎಂದು ಪಿಸಿಬಿ ತಿಳಿಸಿದೆ. 2016ರ ಟಿ20 ವಿಶ್ವಕಪ್‌ ಬಳಿಕ ನಡೆಯುತ್ತಿರುವ ಮೊದಲ ಈ ವಿಶ್ವಕಪ್‌ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ದುಬೈ ಅಬುದಾಬಿ ಮತ್ತು ಶಾರ್ಜಾ ಸ್ಟೇಡಿಯಂಗಳಲ್ಲಿ ನಡೆಯಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ತಂಡಗಳನ್ನು ಸೇರಿಸಿ 8 ರಾಷ್ಟ್ರಗಳ ಕ್ವಾಲಿಫೈಯಿಂಗ್ ಟೂರ್ನಮೆಂಟ್ ಸೆಪ್ಟೆಂಬರ್ 23ರಿಂದ ಓಮನ್ ಮತ್ತು ಯುಎಇಯ ಒಂದು ತಾಣದಲ್ಲಿ ನಡೆಯಲಿದೆ.

15 ಜನರ ಸಂಭಾವ್ಯ ಭಾರತೀಯ ತಂಡ

15 ಜನರ ಸಂಭಾವ್ಯ ಭಾರತೀಯ ತಂಡ

(ಟಿ20 ವಿಶ್ವಕಪ್‌ಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಟೀಂ ಇಂಡಿಯಾ ಸೇರಬಲ್ಲ ಸಂಭಾವ್ಯ 15 ಆಟಗಾರರ ಪಟ್ಟಿ ಇಲ್ಲಿದೆ)
1. ರೋಹಿತ್ ಶರ್ಮ 2. ಶಿಖರ್ ಧವನ್ 3. ಕೆಎಲ್ ರಾಹುಲ್ 4. ವಿರಾಟ್ ಕೊಹ್ಲಿ (ನಾಯಕ) 5. ಶ್ರೇಯಸ್ ಅಯ್ಯರ್ 6. ಸಂಜು ಸಾಮ್ಸನ್ (ವಿಕೆಟ್ ಕೀಪರ್) 7. ರಿಷಬ್ ಪಂತ್ (ವಿಕೆಟ್ ಕೀಪರ್) 8. ಹಾರ್ದಿಕ್ ಪಾಂಡ್ಯ 9. ರವೀಂದ್ರ ಜಡೇಜ 10. ಯುಜುವೇಂದ್ರ ಚಾಹಲ್ 11. ಮೊಹಮ್ಮದ್ ಶಮಿ 12. ಜಸ್ ಪ್ರೀತ್ ಬೂಮ್ರಾ 13. ವಾಷಿಂಗ್ಟನ್ ಸುಂದರ್ 14. ದೀಪಕ್ ಚಾಹರ್ 15. ನವದೀಪ್ ಸೈನಿ.
* ಟಿ20 ವಿಶ್ವಕಪ್ 2021ರಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ಜೊತೆಗೆ ಪಪುವಾ ನ್ಯೂಗಿನಿ, ನಮೀಬಿಯಾ, ನೆದರ್ಲೆಂಡ್, ಓಮನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಕೂಡ ಪಾಲ್ಗೊಳ್ಳಲಿವೆ.

ಎಷ್ಟು ಆಟಗಾರರು ಬೇಕನ್ನೋದು ಆಯಾ ಬೋರ್ಡ್‌ಗಳಿಗೆ ಬಿಟ್ಟಿದ್ದು

ಎಷ್ಟು ಆಟಗಾರರು ಬೇಕನ್ನೋದು ಆಯಾ ಬೋರ್ಡ್‌ಗಳಿಗೆ ಬಿಟ್ಟಿದ್ದು

ಕೋವಿಡ್-19 ಪಾಸಿಟಿವ್ ಬಂದು ತಂಡದಿಂದ ಆಟಗಾರರು ಹೊರ ಬೀಳುವ ಭೀತಿ ಮತ್ತು ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿಯುವ ಭೀತಿ ಇರುವುದರಿಂದ ತನ್ನ ಮುಖ್ಯ ತಂಡದ ಜೊತೆಗೆ ಎಷ್ಟು ಆಟಗಾರರನ್ನು ಕರೆದೊಯ್ಯಬೇಕು ಅನ್ನೋದು ಆಯಾ ಕ್ರಿಕೆಟ್ ಬೋರ್ಡ್‌ಗಳಿಗೆ ಬಿಟ್ಟಿದ್ದು. ಹೆಚ್ಚುವರಿ ಆಟಗಾರರನ್ನು ಕೊಂಡೊಯ್ದರೆ ತಂಡಕ್ಕೆ ಬದಲಿ ಆಟಗಾರರ ಅವಶ್ಯಕತೆಯಿದ್ದಾಗ ಆಟಗಾರರನ್ನು ತಂದಡಿಂದ ಬದಲಾಯಿಸಿಕೊಳ್ಳಬಹುದು," ಎಂದು ಪಿಸಿಬಿ ಹೇಳಿದೆ. ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ತಂಡಗಳ ಕ್ವಾರಂಟೈನ್ ಶುರುವಾಗಲು ಇನ್ನು 5 ದಿನಗಳು ಬಾಕಿಯಿರುವವರೆಗೂ ಅಂತಿಮ ಕ್ಷಣದವರೆಗೆ ತಂಡಗಳಿಗೆ 15 ಜನರ ತಂಡವನ್ನು ನಿರ್ಧರಿಸಲು ಅವಕಾಶವಿದೆ ಎಂದು ಐಸಿಸಿ ಹೇಳಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ. ಅಸಲಿಗೆ ಈ ಟಿ20 ವಿಶ್ವಕಪ್‌ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತು. ಆದರೆ ಭಾರತದಲ್ಲಿ ಕೋವಿಡ್-19 ಭೀತಿ ಶುರುವಾಗಿದ್ದರಿಂದ ಟೂರ್ನಿ ಭಾರತಕ್ಕೆ ಬದಲು ಯುಎಇಗೆ ಸ್ಥಳಾಂತರಗೊಂಡಿದೆ. ಆದರೆ ಟೂರ್ನಿಯ ಆಯೋಜನೆಯ ಜವಾಬ್ದಾರಿ ಭಾರತವೇ ಇರಿಸಿಕೊಂಡಿದೆ.

Story first published: Friday, August 13, 2021, 21:42 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X