ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: 15 ಸದಸ್ಯರ ತಂಡ ಪ್ರಕಟಿಸಿದ ಬಾಂಗ್ಲಾದೇಶ, ಮಾಜಿ ನಾಯಕನಿಗೆ ಇಲ್ಲ ಸ್ಥಾನ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮುಂಬರುವ ಟಿ20 ವಿಶ್ವಕಪ್ 2022 ಗಾಗಿ ಪ್ರಬಲ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶಕೀಬ್ ಅಲ್ ಹಸನ್ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ. ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದ ಮಹಮ್ಮದುಲ್ಲಾ ತಮ್ಮ ಕಳಪೆ ಫಾರ್ಮ್‌ನಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.

ಏಷ್ಯಾ ಕಪ್ 2022 ರಲ್ಲಿ ಬಾಂಗ್ಲಾದೇಶದ ಕಳಪೆ ಪ್ರದರ್ಶನ ನೀಡಿತ್ತು. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಗುಂಪು ಹಂತದ ಪಂದ್ಯಗಳಲ್ಲಿ ಸೋತ ನಂತರ, ಬಾಂಗ್ಲಾದೇಶದ ಆಟಗಾರರು ಸೂಪರ್ 4ಹಂತದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಕಳೆದ ವರ್ಷದ ವಿಶ್ವಕಪ್ ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2022 ರಲ್ಲಿ ಹೀನಾಯ ಪ್ರದರ್ಶನ ನೀಡಿರುವ ಬಾಂಗ್ಲಾದೇಶಕ್ಕೆ, ಆಸ್ಟ್ರೇಲಿಯಾದಲ್ಲಿ ಮುಂಬರುವ ವಿಶ್ವಕಪ್ ತಮ್ಮನ್ನು ತಾವು ಸಾಬೀತುಪಡಿಸಲು ಒಂದು ಅವಕಾಶವಾಗಿದೆ. ಬಾಂಗ್ಲಾದೇಶವು ಅಕ್ಟೋಬರ್ 24 ರಂದು ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ, ಪಂದ್ಯಾವಳಿಯ ತಮ್ಮ ಆರಂಭಿಕ ಪಂದ್ಯವನ್ನು ಆಡುತ್ತಾರೆ.

ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!ಫಾರ್ಮ್ ಇದೆ, ಅರ್ಹತೆ ಇದೆ ಅದ್ರೆ ಅದೃಷ್ಟವಿಲ್ಲ: 2021 & 2022 ವಿಶ್ವಕಪ್‌ನಿಂದ ಹೊರಗುಳಿದ 6 ನತದೃಷ್ಟರು!

ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡವೇ ಅಕ್ಟೋಬರ್ 7ರಂದು ನ್ಯೂಜಿಲೆಂಡ್‌ಗೆ ಪ್ರಯಾಣ ಮಾಡಲಿದೆ. ಅಲ್ಲಿ ಪಾಕಿಸ್ತಾನ, ಬಾಂಗ್ಲಾ, ನ್ಯೂಜಿಲೆಂಡ್ ತಂಡಗಳ ನಡುವೆ ತ್ರಿಕೋನ ಟಿ20 ಸರಣಿ ನಡೆಯಲಿದೆ. ಫೈನಲ್ ಸೇರಿ ಒಟ್ಟು ಆರು ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 14ರಂದು ಸರಣಿಯ ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ಟಿ20 ವಿಶ್ವಕಪ್‌ ತಯಾರಿಗಾಗಿ ಪಂದ್ಯಗಳನ್ನು ಆಡುತ್ತಿವೆ. ನಂತರ ನಿಗದಿತ ಅಭ್ಯಾಸ ಪಂದ್ಯಗಳನ್ನು ಆಡುತ್ತವೆ.

3 ವರ್ಷಗಳ ಬಳಿಕ ತಂಡ ಸೇರಿದ ಶಬೀರ್

3 ವರ್ಷಗಳ ಬಳಿಕ ತಂಡ ಸೇರಿದ ಶಬೀರ್

ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾ ತಂಡದಲ್ಲಿ ಅಚ್ಚರಿಯ ಆಯ್ಕೆಗಳನ್ನು ಮಾಡಲಾಗಿದೆ. ಒಂದೇ ಒಂದು ಪಂದ್ಯವನ್ನಾಡಿದ್ದ ಶಬೀರ್ ರೆಹಮಾನ್ 3 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಮತ್ತು ನೂರುಲ್ ಹಸನ್ ಸೋಹನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ತಂಡದ ಭಾಗವಾಗಿದ್ದ ಮಹೇದಿ ಹಸನ್, ಪರ್ವೇಜ್ ಹೊಸೈನ್ ಎಮನ್, ಅನಾಮುಲ್ ಹಕ್ ಮತ್ತು ಮೊಹಮ್ಮದ್ ನಯಿಮ್‌ರನ್ನು ತಂಡದಿಂದ ಕೈಬಿಡಲಾಗಿದೆ.

ಟಿ20 ಶ್ರೇಯಾಂಕ: ಭರ್ಜರಿ ಶತಕದ ಬಳಿಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಭಾರೀ ಏರಿಕೆ

ತಂಡಕ್ಕೆ ಆಯ್ಕೆಯಾಗದ ಮಾಜಿ ನಾಯಕ

ತಂಡಕ್ಕೆ ಆಯ್ಕೆಯಾಗದ ಮಾಜಿ ನಾಯಕ

ಬಾಂಗ್ಲಾ ತಂಡದ ಮಾಜಿ ನಾಯಕ ಮಹಮ್ಮದುಲ್ಲಾ ಕಳೆದ ಟಿ20 ವಿಶ್ವಕಪ್‌ನಲ್ಲಿ 11 ಪಂದ್ಯಗಳನ್ನು ಆಡಿ, 17ರ ಸರಾಸರಿಯಲ್ಲಿ 182 ರನ್ ಗಳಿಸಿದ್ದರು. ನಂತರ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಎರಡು ಪಂದ್ಯಗಳಲ್ಲಿ 106.12ರ ಸ್ಟ್ರೈಕ್‌ ರೇಟ್‌ನಲ್ಲಿ ಕೇವಲ 52 ನರ್ ಗಳಿಸಿದ್ದರು.

ಇದುವರೆಗೂ ಬಾಂಗ್ಲಾ ಟಿ20 ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ, ಮಹಮ್ಮದುಲ್ಲಾರನ್ನೇ ಬಾಂಗ್ಲಾ ತಂಡದಿಂದ ಕೈಬಿಡಲಾಗಿದೆ. ಕಳಪೆ ಫಾರ್ಮ್‌ನಲ್ಲಿದ್ದ ಅವರನ್ನು ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿತ್ತು.

ಫಾರ್ಮ್ ಕಳೆದುಕೊಂಡವರಿಗೆ ಅವಕಾಶ ಇಲ್ಲ

ಫಾರ್ಮ್ ಕಳೆದುಕೊಂಡವರಿಗೆ ಅವಕಾಶ ಇಲ್ಲ

ಮಹಮ್ಮದುಲ್ಲಾ ಆಯ್ಕೆಯಾಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ತಂಡದ ನಿರ್ದೇಶಕ ಖಲೀದ್ ಸುಜೋನ್, ಕಳೆದ ಕೆಲವು ತಿಂಗಳಿಂದ ಆಡಿದ ಪಂದ್ಯಗಳಲ್ಲಿ ಮಹಮ್ಮದುಲ್ಲಾ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರನ್ನು ತಂಡದಿಂದ ಕೈಬೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಮಹಮ್ಮದುಲ್ಲಾ ಜೊತೆಗೆ ತಂಡದ ಮತ್ತೊಬ್ಬ ಆಟಗಾರ ಮಹೇದಿ ಹಸನ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೂ ಮಹೇದ್ ಹಸನ್, ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಸೌಮ್ಯ ಸರ್ಕಾರ್, ಲೆಗ್ ಸ್ಪಿನ್ನರ್ ರಿಷಾದ್ ಹೊಸೈನ್ ಮತ್ತು ಎಡಗೈ ಆಟಗಾರ ಶೋರಿಫುಲ್ ಇಸ್ಲಾಂ ಕೂಡ ಸ್ಟಾಂಡ್​ ಬೈ ಆಟಗಾರರ ಪಟ್ಟಿಯಲ್ಲಿದ್ದಾರೆ.

ಟಿ20 ವಿಶ್ವಕಪ್‌ 2022ಕ್ಕೆ ಬಾಂಗ್ಲಾ ತಂಡ

ಟಿ20 ವಿಶ್ವಕಪ್‌ 2022ಕ್ಕೆ ಬಾಂಗ್ಲಾ ತಂಡ

ಶಕೀಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ತಸ್ಕಿನ್ ಅಹ್ಮದ್, ಯಾಸಿರ್ ಅಲಿ, ನೂರುಲ್ ಹಸನ್, ಎಬಾಡೋತ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್, ಹಸನ್ ಮಹ್ಮದ್, ಅಫೀಫ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ನಸುಮ್ ಅಹ್ಮದ್, ಮೊಸದ್ದೆಕ್ ಹೊಸೈನ್, ಮೊಹಮ್ಮದ್ ಸೈಫುದ್ದೀನ್, ನಜ್ಮುಲ್ ಹೊಸೈನ್ ಶಾಂತೋ,

ಸ್ಟ್ಯಾಂಡ್‌ಬೈ ಆಟಗಾರರು: ಶೋರಿಫುಲ್ ಇಸ್ಲಾಂ, ರಿಶಾದ್ ಹೊಸೈನ್, ಮಹೇದಿ ಹಸನ್, ಸೌಮ್ಯ ಸರ್ಕಾರ್.

Story first published: Wednesday, September 14, 2022, 17:23 [IST]
Other articles published on Sep 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X