ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ ಇಂಡೀಸ್ ಆರಂಭದಲ್ಲೇ ವಿಶ್ವಕಪ್‌ನಿಂದ ಹೊರಬಿದ್ದಿದ್ದು ಆಶ್ಚರ್ಯ ಮೂಡಿಸಿದೆ: ಕಿರಾನ್ ಪೊಲಾರ್ಡ್

Kieron pollard

ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ಐಸಿಸಿ ಟಿ20 ವಿಶ್ವಕಪ್‌ನ ಆರಂಭದಲ್ಲೇ ಹೊರಬಿದ್ದ ಕುರಿತು ಮಾಜಿ ಆಟಗಾರ ಕಿರಾನ್ ಪೊಲಾರ್ಡ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ಡೇಂಜರಸ್ ಟೀಂ ಆಗಿ ಗುರುತಿಸಿಕೊಂಡಿದ್ದ ಕೆರಿಬಿಯನ್ನರು ಸೂಪರ್ 12 ಹಂತವನ್ನೂ ಪ್ರವೇಶಿಸಲಾಗದೇ ಸೋತು ಹೊರಬಿದ್ದಿದೆ.

ವೆಸ್ಟ್ ಇಂಡೀಸ್ ಪ್ರದರ್ಶನದ ಕುರಿತು ಮಾತನಾಡಿರುವ ಪೊಲಾರ್ಡ್ '' ಸತ್ಯವಾಗಿ ಹೇಳಬೇಕಾದ್ರೆ, ನನಗೆ ಸ್ವಲ್ಪ ಆಶ್ಚರ್ಯವಾಗಿದೆ. ನಾವು ಇತರೆ ತಂಡದೆದುರು ಗುರಿಯನ್ನು ತಲುಪಲಾಗದೇ ಹೊರಬಿದ್ದಿರುವುದು ಬೇಸರ ಮೂಡಿಸಿದೆ'' ಎಂದು ಟ್ರಿನಿಡಾಡ್ ಮೂಲದ ರೇಡಿಯೋ ಸ್ಟೇಷನ್‌ಗೆ ತಿಳಿಸಿದ್ದಾರೆ.

T20 World Cup: ಭಾರತ-ಪಾಕಿಸ್ತಾನ ಪಂದ್ಯ ನೋಡಿ ಆಸ್ಟ್ರೇಲಿಯಾ ಆಟಗಾರ ಹೇಳಿದ್ದೇನು ಗೊತ್ತಾ?T20 World Cup: ಭಾರತ-ಪಾಕಿಸ್ತಾನ ಪಂದ್ಯ ನೋಡಿ ಆಸ್ಟ್ರೇಲಿಯಾ ಆಟಗಾರ ಹೇಳಿದ್ದೇನು ಗೊತ್ತಾ?

'' ಆದ್ರೆ ಮತ್ತೆ ನಾನು ಹೇಳಬೇಕಾದ್ರೆ, ಸದ್ಯ ನಮ್ಮ ಕ್ರಿಕೆಟ್ ಎಲ್ಲಿಗೆ ಹೋಗಿ ತಲುಪಿದೆ ಎಂಬುದನ್ನ ಅರಿಯಬೇಕು. ತಂಡದ ಆಟಗಾರರ ಕುರಿತು ನನಗೆ ಬೇಸರವಿದೆ. ಆದ್ರೆ ಅದು ಅವರ ತಪ್ಪಲ್ಲ'' ಎಂದು ಕಿರಾನ್ ಪೊಲಾರ್ಡ್ ವಿಂಡೀಸ್ ತಂಡವನ್ನು ಬೆಂಬಲಿಸಿದ್ದಾರೆ.

ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕೀರಿಟ್‌ ತುಂಬಾ ಕಠಿಣವಾದ ಹೇಳಿಕೆಯನ್ನು ನೀಡಿದ್ದು, ಮರಣೋತ್ತರ ಪರೀಕ್ಷೆ ಕೂಡಲೇ ಮಾಡಲಾಗುವುದು ಎಂದು ತಿಳಿಸಿದ್ದರು.

ಆದ್ರೆ ಪೊಲಾರ್ಡ್‌ '' ನಮ್ಮ ತಂಡದಲ್ಲಿ ಯುವ ನಾಯಕನಿದ್ದಾನೆ. ನಮ್ಮ ಬಳಿ ಯುವ ಆಟಗಾರರಿದ್ದಾರೆ. ಕೆಲವೇ ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನ ಆಡಿರುವ ಆಟಗಾರರು ಈಗ ವಿಶ್ವಕಪ್ ಆಡುತ್ತಿದ್ದಾರೆ. ಆದ್ರೆ ನಾನು ಅದನ್ನು ಹಿಂತಿರುಗಿ ನೋಡಿದಾಗ, ನಾನು ಸುಮ್ಮನೆ ಕುಳಿತುಕೊಳ್ಳುತ್ತೇನೆ ಮತ್ತು ನನ್ನ ಮುಖದ ಮೇಲೆ ನಗುವಿದೆ. ಏಕೆಂದರೆ ಕಳೆದ ವರ್ಷ ಕೆಲವು ಆಟಗಾರರನ್ನು ಆಯ್ಕೆ ಮಾಡದಿದ್ದಾಗ ಈ ಸಮಯದಲ್ಲಿ ಹೇಳಿದ ಕೆಲವು ವಿಷಯಗಳು ನನಗೆ ನೆನಪಿಗೆ ಬರುತ್ತದೆ'' ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡವು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಐರ್ಲೆಂಡ್ ಸೂಪರ್ 12 ಹಂತವನ್ನು ತಲುಪಿದ್ರೆ, ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬೀಳುವ ಮೂಲಕ ಭಾರೀ ಮುಖಭಂಗ ಅನುಭವಿಸಿತು.

ಈ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ ಆಮೆಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ನಿಜಕ್ಕೂ ಆಶ್ಚರ್ಯಕ್ಕೆ ಕಾರಣವಾಗಿತ್ತು. ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಗುರಿಯನ್ನ ಐರ್ಲೆಂಡ್ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಪಾಲ್ ಸ್ಟಿರ್ಲಿಂಗ್ ಅಜೇಯ ಆಟಕ್ಕೆ ವೀಂಡೀಸ್ ಕನಸು ನುಚ್ಚು ನೂರಾಯಿತು.

ವೆಸ್ಟ್‌ ಇಂಡೀಸ್ 2014 ಮತ್ತು 2016ರಲ್ಲಿ ಎರಡು ಬಾರಿ ಟಿ20 ವಿಶ್ವಕಪ್‌ ಗೆದ್ದಿದ್ದು ಈ ಸಾಧನೆ ಮಾಡಿರುವ ಏಕೈಕ ತಂಡವಾಗಿದೆ.

Story first published: Monday, October 24, 2022, 21:32 [IST]
Other articles published on Oct 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X