ಇತರೆ ಆಟಗಾರರೂ ವಿಫಲರಾಗಿದ್ದಾರೆ, ಆದರೆ ದಿನೇಶ್ ಕಾರ್ತಿಕ್ ವಿರುದ್ಧ ಮಾತ್ರ ಟೀಕೆ ಯಾಕೆ ಎಂದ ಮಾಜಿ ಕ್ರಿಕೆಟಿಗ

ಆಸ್ಟ್ರೇಲಿಯಾದಲ್ಲಿ 2022 ರ ಟಿ 20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಟೀಮ್ ಇಂಡಿಯಾ ಗ್ರೂಪ್ 2 ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ನೋಡುತ್ತಿದೆ. ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರು, ಕೆಲವು ಆಟಗಾರರು ಇನ್ನೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.

ನೆದರ್ಲ್ಯಾಂಡ್ಸ್ ವಿರುದ್ಧ ಸುಲಭದ ಜಯ ಸಾಧಿಸಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ರೋಚಕ ಜಯ ಸಾಧಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ದ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಟೀಂ ಇಂಡಿಯಾ 5 ವಿಕೆಟ್‌ಗಳ ಸೋಲನುಭವಿಸಿತ್ತು.

ಟೀಂ ಇಂಡಿಯಾದ ಫಿನಿಷರ್ ಎಂದು ತಂಡದಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್, ಈ ಬಾರಿ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶದ ವಿರುದ್ಧ ಕಳಪೆ ಪ್ರದರ್ಶನ ನೀಡಿದರು. ನೆದರ್ಲ್ಯಾಂಡ್ಸ್‌ ವಿರುದ್ಧ ಬ್ಯಾಟಿಂಗ್ ಮಾಡಲು ಅವರಿಗೆ ಅವಕಾಶ ಸಿಗಲಿಲ್ಲ.

ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶುಭಾಶಯ ತಿಳಿಸಿದ ಟೀಂ ಇಂಡಿಯಾ ಆಟಗಾರರುವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ ಆಚರಿಸಿ, ಶುಭಾಶಯ ತಿಳಿಸಿದ ಟೀಂ ಇಂಡಿಯಾ ಆಟಗಾರರು

ದಿನೇಶ್ ಕಾರ್ತಿಕ್ ಕಳಪೆ ಆಟಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರಿಗೆ ಉತ್ತಮ ಅವಕಾಶ ಇದ್ದರು, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್‌ ಪಂತ್‌ಗೆ ಅವಕಾಶ ನೀಡಬೇಕು ಎಂದು ಹಲವರು ಒತ್ತಾಯಿಸುತ್ತಿದ್ದರೂ, ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ದಿನೇಶ್ ಕಾರ್ತಿಕ್ ಬೆಂಬಲಕ್ಕೆ ನಿಂತಿದ್ದಾರೆ.

ಆತನಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಕು

ಆತನಿಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಕು

ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ವೈಫಲ್ಯಗಳಿಗಾಗಿ ನಿರಂತರ ಟೀಕೆಗಳನ್ನು ಎದುರಿಸಿದ್ದಾರೆ. ಆದರೆ, ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ವಿಕೆಟ್ ಕೀಪರ್ ಬ್ಯಾಟರ್ ಅನ್ನು ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಬದಲಿಗೆ ರಿಷಬ್‌ ಪಂತ್‌ಗೆ ಅವಕಾಶ ನೀಡಬೇಕು ಎಂದು ಹಲವರ ಹೇಳಿಕೆಗಳಿಗೆ ಹರ್ಭಜನ್ ಸಿಂಗ್ ಸಹಮತ ವ್ಯಕ್ತಪಡಿಸಿಲ್ಲ, ಬದಲಿಗೆ ದಿನೇಶ್ ಕಾರ್ತಿಕ್‌ ಅವರೇ ಮುಂದಿನ ಪಂದ್ಯಗಳಲ್ಲಿ ಆಡಬೇಕು ಎಂದು ಒತ್ತಾಯಿಸಿದ್ದಾರೆ.

ಟಿ20 ವಿಶ್ವಕಪ್ ಬಳಿಕ ಕನ್ನಡಿಗ ಕೆಎಲ್ ರಾಹುಲ್ ಮದುವೆ!

ದಿನೇಶ್‌ ಕಾರ್ತಿಕ್‌ ಅತ್ಯುತ್ತಮ ಫಿನಿಷರ್

ದಿನೇಶ್‌ ಕಾರ್ತಿಕ್‌ ಅತ್ಯುತ್ತಮ ಫಿನಿಷರ್

ದಿನೇಶ್‌ ಕಾರ್ತಿಕ್‌ ರೀತಿ ರಿಷಬ್ ಪಂತ್ ಫಿನಿಶರ್ ಅಲ್ಲ ಮತ್ತು ಅನುಭವಿ ವಿಕೆಟ್-ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ರಿಷಬ್ ಪಂತ್ ಅವರ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದರು.

ದಿನೇಶ್ ಕಾರ್ತಿಕ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತವಾಗಿ ಆಡಿದ್ದರು, ಟೀಂ ಇಂಡಿಯಾ ಪರವಾಗಿ ಕೂಡ ಅವರು ಅತ್ಯುತ್ತಮ ಇನ್ನಿಂಗ್ಸ್‌ ಆಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವರಿಗೆ ಸಿಕ್ಕಿರುವ ಅವಕಾಶ ಕಡಿಮೆ ಈಗಲೇ ಅವರ ಪ್ರದರ್ಶನ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

"ಕಾರ್ತಿಕ್ ಗಾಯಗೊಂಡಾಗ, ನಾವು ಪಂತ್ ಅವರನ್ನು ಮರಳಿ ಕರೆತರೋಣ ಎಂದು ನಾನು ಹೇಳಿದೆ. ಆದರೆ ಅವರು ಫಿಟ್ ಆಗಿದ್ದರೆ, ಕಾರ್ತಿಕ್ ಅವರನ್ನು ನೀವು ಫಿನಿಶರ್ ಆಗಿ ತಂಡದಲ್ಲಿ ಪಡೆದಿರುವ ಕಾರಣ ಕಾರ್ತಿಕ್‌ಗೆ ಆದ್ಯತೆ ನೀಡಬೇಕು. ನೀವು ಆ ಸ್ಥಾನದಲ್ಲಿ ಪಂತ್ ಅವರನ್ನು ಆಡಲು ಸಾಧ್ಯವಿಲ್ಲ" ಎಂದು ಹರ್ಭಜನ್ ಅಭಿಪ್ರಾಯಪಟ್ಟಿದ್ದಾರೆ.

ದಿನೇಶ್ ಕಾರ್ತಿಕ್ ಬಗ್ಗೆ ಮಾತ್ರ ಟೀಕೆ ಯಾಕೆ?

ದಿನೇಶ್ ಕಾರ್ತಿಕ್ ಬಗ್ಗೆ ಮಾತ್ರ ಟೀಕೆ ಯಾಕೆ?

ಟಿ20 ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡದ ತಂಡದಲ್ಲಿ ಇನ್ನೂ ಕೆಲವು ಹಿರಿಯ ಆಟಗಾರರಿದ್ದಾರೆ, ಆದರೆ ಅವರ ಬಗ್ಗೆ ಯಾರೂ ಕೂಡ ಟೀಕೆ ಮಾಡಲ್ಲ, ಅವರನ್ನು ಬದಲಾಯಿಸಲೂ ಯಾಕೆ ಒತ್ತಾಯಿಸಲ್ಲ ಎಂದು ಹೇಳಿದ್ದಾರೆ.

"ಇತರ ಆಟಗಾರರೂ ವಿಫಲರಾಗಿದ್ದಾರೆ. ಆದರೆ ಅವರು ಪ್ರಮುಖ ಆಟಗಾರರು ಎಂದು ನಾವು ಅವರ ಬಗ್ಗೆ ಮಾತನಾಡುವುದಿಲ್ಲ. ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಸ್ಥಾನವು ಕಷ್ಟಕರವಾಗಿದೆ. ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಆ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ್ದಾರೆ; ಅವರ ನಂತರ, ಹಾರ್ದಿಕ್ ಪಾಂಡ್ಯ ಮಾತ್ರ ಫಿನಿಶರ್ ಪಾತ್ರವನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈಗ ನಮ್ಮಲ್ಲಿ ಕಾರ್ತಿಕ್ ಕೂಡ ಇದ್ದಾರೆ ಮತ್ತು ನಾವು ಅವರಿಗೆ ಅವಕಾಶ ನೀಡಬೇಕು," ಎಂದು ಅವರು ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Saturday, November 5, 2022, 14:19 [IST]
Other articles published on Nov 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X