ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ 2022: 16 ಆಟಗಾರರ ತಂಡವನ್ನು ಪ್ರಕಟಿಸಿದ ನಮೀಬಿಯಾ

T20 World cup: Namibia announced 16-member squad for ICC T20 World Cup in Australia

ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕೊಪ್ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಈ ಮಹತ್ವದ ಟೂರ್ನಿಯಲ್ಲಿ ಭಾಗಿಯಾಗುವ ಅವಕಾಶವನ್ನು ಈ ಬಾರಿ ನಮೀಬಿಯಾ ತಂಡ ಗಳಿಸಿಕೊಂಡಿದ್ದು ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ 16 ಆಟಗಾರರ ತಂಡವನ್ನು ಇಂದು ಪ್ರಕಟಿಸಲಾಗಿದೆ.

ಯುವ ಹಾಗೂ ಅನುಭವಿಗಳನ್ನು ಒಳಗೊಂಡಿರುವ ತಂಡವನ್ನು ಗೆರ್ಹಾರ್ಡ್ ಎರಾಸ್ಮಸ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿಯೂ ಭಾಗಿಯಾಗಿದ್ದ ನಮೀಬಿಯಾ ತಂಡ ಗಮನಾರ್ಹ ಪ್ರದರ್ಶನ ನೀಡಿತ್ತು. ಇದೀಗ ಮತ್ತೆ ಆಸ್ಟ್ರೇಲಿಯಾದಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ ನಮೀಬಿಯಾ ಪಡೆ.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ಆಫ್ರಿಕಾದ ದಕ್ಷಿಣ ಭಾಗದ ಈ ರಾಷ್ಟ್ರ ಪ್ರತಿಷ್ಠಿತ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ತಂಡವನ್ನು ಪ್ರಕಟಿಸಿದ ಆರನೇ ದೇಶವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ಟೂರ್ನಿಗೆ ತಮ್ಮ ತಂಡಗಳನ್ನು ಪ್ರಕಟಿಸಿದ್ದವು.

ಶ್ರೀಲಂಕಾ, ನೆದರ್ಲ್ಯಾಂಡ್ಸ್ ಮತ್ತು ಯುಎಇ ಜೊತೆಗೆ ನಮೀಬಿಯಾ ಮೊದಲ ಸುತ್ತಿನಲ್ಲಿ ಗುಂಪಿನ 'ಎ'ಯಲ್ಲಿ ಸ್ಥಾನ ಪಡೆದಿದೆ. ಈಗಲ್ಸ್ ಎಂದು ಕರೆಯಲ್ಪಡುವ ನಮೀಬಿಯಾ ಕ್ರಿಕೆಟ್ ತಂಡ ಅಕ್ಟೋಬರ್ 16 ರಂದು ಶ್ರೀಲಂಕಾ ವಿರುದ್ಧ ಮತ್ತು ಬಳಿಕ ಅಕ್ಟೋಬರ್ 18 ರಂದು ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಈಗಲ್ಸ್ ತಮ್ಮ ಸುತ್ತಿನ 1 ರ ಅಂತಿಮ ಪಂದ್ಯದಲ್ಲಿ ಯುಎಇ ವಿರುದ್ಧ ಸೆಣಸಲಿದೆ.

ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!ಟಿ20 ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್ ಹುದ್ದೆಗೆ ಮಾರ್ಕ್ ಬೌಚರ್ ರಾಜೀನಾಮೆ!

2021ರಲ್ಲಿ ಯುಎಇನಲ್ಲಿ ನಡೆದ ವಿಶ್ವಕಪ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಕಠಿಣ ತಂಡಗಳಿದ್ದ ಗುಂಪಿನಲ್ಲಿದ್ದರೂ ಸೂಪರ್ 12 ಗೆ ತಲುಪಿದ ನಮೀಬಿಯಾ ಉತ್ತಮ ಪ್ರದರ್ಶನ ನೀಡಿತ್ತು. ಶ್ರೀಲಂಕಾ, ಐರ್ಲೆಂಡ್ ಮತ್ತು ನೆದರ್‌ಲ್ಯಾಂಡ್‌ ತಂಡಗಳಿದ್ದ ಗುಂಪಿನಲ್ಲಿದ್ದರೂ ಎರಾಸ್ಮಸ್ ನೇತೃತ್ವದ ತಂಡವು ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್ ತಂಡಗಳನ್ನು ಸೋಲಿಸಿ ಸೂಪರ್ 12 ಗೆ ಪ್ರವೇಶಿಸಿತು. ಈ ಮೂಲಕ ಬಲಿಷ್ಠ ತಂಡಗಳ ವಿರುದ್ಧ ಆಡುವ ಅವಕಾಶ ಪಡೆದುಕೊಂಡಿತ್ತು.

ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿತ್, ದಿವಾನ್ ಲಾ ಕಾಕ್, ಸ್ಟೀಫನ್ ಬಾರ್ಡ್, ನಿಕೋಲ್ ಲಾಫ್ಟಿ ಈಟನ್, ಜಾನ್ ಫ್ರಿಲಿಂಕ್, ಡೇವಿಡ್ ವೈಸ್, ರೂಬೆನ್ ಟ್ರಂಪೆಲ್ಮನ್, ಝೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ಟಾಂಗೆನಿ ಲುಂಗಮೆನಿ, ಮೈಕೆಲ್ ವ್ಯಾನ್ ಲಿಂಗೆನ್, ಬೆನ್ ಶಿಕೊನ್‌ಗೊಸ್ಟ್, ಬೆನ್ ಬ್ಯುಕೆನ್‌ಗೊಸ್ಟ್ , ಲೋಹಾನ್ ಲೌರೆನ್ಸ್, ಹೆಲಾವೊ ಯಾ ಫ್ರಾನ್ಸ್.

Story first published: Wednesday, September 14, 2022, 10:18 [IST]
Other articles published on Sep 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X