ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ಟಾಪ್ 15 ಶತಕ ಪಟ್ಟಿಯಲ್ಲಿ ಸಚಿನ್, ಲಕ್ಷ್ಮಣ್, ಸೆಹ್ವಾಗ್

By Mahesh

ಮೆಲ್ಬೋರ್ನ್, ಸೆ.25: ಭಾರತದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಅವರು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಬೆಸ್ಟ್ ಶತಕಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 2000ರಿಂದ ಇಲ್ಲಿ ತನಕದ ಶ್ರೇಷ್ಠ ಪ್ರದರ್ಶನಗಳ ಪಟ್ಟಿಯಲ್ಲಿ ಸೆಹ್ವಾಗ್ ಅವರ 195ರನ್ ಗಳ ಆಟ 13ನೇ ಸ್ಥಾನ ಪಡೆದುಕೊಂಡಿದ್ದರು. ಈಗ ಟಾಪ್ 10ರೊಳಗೆ ಸಚಿನ್ ಹಾಗೂ ಲಕ್ಷ್ಮಣ್ ಅವರ ಹೆಸರು ಸೇರ್ಪಡೆಯಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾ ಟಾಪ್ 15 ಟೆಸ್ಟ್ ಇನ್ನಿಂಗ್ಸ್ ನ ಪಟ್ಟಿಯನ್ನು ಮೊದಲಿಗೆ ಪ್ರಕಟಿಸಲಾಗಿತ್ತು. ನಂತರ ಸಂಪೂರ್ಣ ಪಟ್ಟಿಯನ್ನು ಪ್ರಕಟಿಸಲಾಗಿದೆ. 13ನೇ ಸ್ಥಾನದಲ್ಲಿರುವ ಸೆಹ್ವಾಗ್ ಅವರು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 2003ರಲ್ಲಿ 195 ರನ್ (233 ಎಸೆತ, 25X4, 5X6) ಬಾರಿಸಿದ್ದರು.

ಸಚಿನ್ ತೆಂಡೂಲ್ಕರ್ ಅವರು ಸಿಡ್ನಿ ಕ್ರಿಕೆಟ್ ಮೈದಾನ (ಎಸ್ ಸಿಜಿ) ದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ ಅಜೇಯ 241 ರನ್ 8ನೇ ಸ್ಥಾನದಲ್ಲಿದೆ. ಲಕ್ಷ್ಮಣ್ ಅವರ 167ರನ್ 9ನೇ ಸ್ಥಾನದಲ್ಲಿದೆ.[ಆಸ್ಟ್ರೇಲಿಯಾದಲ್ಲಿ 'ಬೆಸ್ಟ್ ಇನ್ನಿಂಗ್ಸ್' ಪಟ್ಟಿಯಲ್ಲಿ ಸೆಹ್ವಾಗ್ ಶತಕ!]

'Best Test Tons in Australia since 2000

ಮೈಕಲ್ ಕ್ಲಾರ್ಕ್ ಅವರ ಭಾರತ ವಿರುದ್ಧ ಜನವರಿ 2012ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬಾರಿಸಿದ ಅಜೇಯ 329 ರನ್
ಶ್ರೇಷ್ಠ ಪ್ರದರ್ಶನ ಎಂದು ಪರಿಗಣಿಸಲಾಗಿದೆ. ಎರಡನೇ ಸ್ಥಾನದಲ್ಲಿ ಫಾಪ್ ಡು ಪ್ಲೆಸಿಸ್ ಅವರು ಆಡಿಲೇಡ್ ಒವಲ್ ನಲ್ಲಿ ನವೆಂಬರ್ 2012ರಲ್ಲಿ ಬಾರಿಸಿದ ಅಜೇಯ 110 ರನ್ ಎರಡನೇ ಸ್ಥಾನದಲ್ಲಿದೆ.

ಕುತೂಹಲದ ವಿಷಯವೆಂದರೆ ಆಸ್ಟ್ರೇಲಿಯಾದಲ್ಲಿ ಅನೇಕ ಉತ್ತಮ ಆಟ ಪ್ರದರ್ಶಿಸಿರುವ ರಾಹುಲ್ ದ್ರಾವಿಡ್ ಅವರ ಹೆಸರು ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. 2003ರಲ್ಲಿ ಅಡಿಲೇಡ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 233ರನ್ ಗಳಿಸಿ ಭಾರತಕ್ಕೆ 4 ವಿಕೆಟ್ ಗಳ ಜಯ ದೊರಕಿಸಿಕೊಟ್ಟಿದ್ದರು.

'Best Test Tons in Australia since 2000

ಟಾಪ್ 15 ಶ್ರೇಷ್ಠ ಪ್ರದರ್ಶನಗಳ ಪಟ್ಟಿ :
1. ಮೈಕಲ್ ಕ್ಲಾರ್ಕ್(ಆಸ್ಟ್ರೇಲಿಯಾ) ಅಜೇಯ 329 ರನ್ vs ಭಾರತ (ಸಿಡ್ನಿ, ಜನವರಿ 2012)- ಆಸ್ಟ್ರೇಲಿಯಾಕ್ಕೆ ಇನ್ನಿಂಗ್ಸ್ ಹಾಗೂ 68ರನ್ ಗಳ ಜಯ.
2. ಫಾಫ್ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ) ಅಜೇಯ 110 ರನ್ vs ಆಸ್ಟ್ರೇಲಿಯಾ (ಅಡಿಲೇಡ್, ನವೆಂಬರ್ 2012)- ಪಂದ್ಯ ಡ್ರಾ.
3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) 257 ರನ್ vs ಭಾರತ (ಮೆಲ್ಬೋರ್ನ್, ಡಿಸೆಂಬರ್ 2003)- ಆಸ್ಟ್ರೇಲಿಯಾಕ್ಕೆ 9 ವಿಕೆಟ್ ಗಳ ಜಯ.
4. ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 226 ರನ್ vs ಆಸ್ಟ್ರೇಲಿಯಾ (ಅಡಿಲೇಡ್, ನವೆಂಬರ್ 2005)- ವೆಸ್ಟ್ ಇಂಡೀಸ್ ಗೆ 7 ವಿಕೆಟ್ ಗಳ ಸೋಲು.

'Best Test Tons in Australia since 2000

5. ಮೈಕಲ್ ಕ್ಲಾರ್ಕ್ (ಆಸ್ಟ್ರೇಲಿಯಾ) 128 ರನ್ vs ಭಾರತ (ಅಡಿಲೇಡ್, ಡಿಸೆಂಬರ್ 2014)- ಆಸ್ಟ್ರೇಲಿಯಾಕ್ಕೆ 48ರನ್ ಗಳ ಜಯ.
6. ಸ್ಟೀವ್ ವಾ (ಆಸ್ಟ್ರೇಲಿಯಾ) 102 ರನ್ vs ಇಂಗ್ಲೆಂಡ್ (ಸಿಡ್ನಿ, ಜನವರಿ 2003)- ಆಸ್ಟ್ರೇಲಿಯಾಕ್ಕೆ 225ರನ್ ಗಳ ಸೋಲು.
7. ಜೆಪಿ ಡುಮುನಿ (ದಕ್ಷಿಣ ಆಫ್ರಿಕಾ) 166 ರನ್ vs ಆಸ್ಟ್ರೇಲಿಯಾ (ಮೆಲ್ಬೋರ್ನ್, ಡಿಸೆಂಬರ್ 2008)- ದಕ್ಷಿಣ ಆಫ್ರಿಕಾಕ್ಕೆ 9 ವಿಕೆಟ್ ಗಳ ಜಯ.
8. ಸಚಿನ್ ತೆಂಡೂಲ್ಕರ್ (ಭಾರತ) ಅಜೇಯ 241 ರನ್ vs ಆಸ್ಟ್ರೇಲಿಯಾ (ಸಿಡ್ನಿ, ಜನವರಿ 2004)- ಪಂದ್ಯ ಡ್ರಾ.
9. ವಿವಿಎಸ್ ಲಕ್ಷ್ಮಣ್ (ದಕ್ಷಿಣ ಆಫ್ರಿಕಾ) 167 ರನ್ vs ಆಸ್ಟ್ರೇಲಿಯಾ (ಸಿಡ್ನಿ, ಜನವರಿ 2000)- ಭಾರತಕ್ಕೆ ಇನ್ನಿಂಗ್ಸ್ ಹಾಗೂ 141 ರನ್ ಗಳ ಸೋಲು.

10. ಎಬಿ ಡಿ ವಿಲೆಯರ್ಸ್(ದಕ್ಷಿಣ ಆಫ್ರಿಕಾ) 106 ರನ್ vs ಆಸ್ಟ್ರೇಲಿಯಾ (ವಾಕಾ ಮೈದಾನ, ಡಿಸೆಂಬರ್ 2008)

11. ಕುಮಾರ್ ಸಂಗಕ್ಕಾರ (ಶ್ರೀಲಂಕಾ) 192 vs ಆಸ್ಟ್ರೇಲಿಯಾ (ಬೆಲ್ಲರಿವ್ ಓವಲ್, ಹೋಬಾರ್ಟ್, ನವೆಂಬರ್ 2007)
12. ಹಶೀಂ ಅಮ್ಲಾ (ದಕ್ಷಿಣ ಆಫ್ರಿಕಾ) 196 vs ಆಸ್ಟ್ರೇಲಿಯಾ (ವಾಕಾ ಮೈದಾನ, ಡಿಸೆಂಬರ್ 2012)
13. ವಿರೇಂದರ್ ಸೆಹ್ವಾಗ್ (ಭಾರತ) 195 vs ಆಸ್ಟ್ರೇಲಿಯಾ (ಎಂಸಿಜಿ, ಮೆಲ್ಬೋರ್ನ್, 2003)

14. ಸೈಮನ್ ಕಟಿಚ್ (ಆಸ್ಟ್ರೇಲಿಯಾ) 131 ನಾಟೌಟ್ vs ನ್ಯೂಜಿಲೆಂಡ್ (ಗಬ್ಬಾ, ಬ್ರಿಸ್ಬೇನ್, ನವೆಂಬರ್ 2008)

15. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 123 ನಾಟೌಟ್ vs ನ್ಯೂಜಿಲೆಂಡ್ (ಬೆಲ್ಲರಿವ್ ಓವಲ್, ಹೋಬಾರ್ಟ್, ಡಿಸೆಂಬರ್ 2011)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X