ಟಿ20ಗಾಗಿ ಟೆಸ್ಟ್ ಕ್ರಿಕೆಟ್ ತ್ಯಾಗ ಕೂಡದು: ಇಂಝಮಾಮ್ ಉಲ್ ಹಕ್

ಕರಾಚಿ: ಟೆಸ್ಟ್ ಕ್ರಿಕೆಟ್‌ಗೆ ಮತ್ತು ಟಿ20 ಕ್ರಿಕೆಟ್‌ಗೆ ಇರುವ ಅಸಮತೋಲನ, ಭಿನ್ನತೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ದಂತಕತೆ ಇಂಝಮಾಮ್ ಉಲ್ ಹಕ್ ಮಾತನಾಡಿದ್ದಾರೆ. ಟಿ20ಗೆ ಟೆಸ್ಟ್ ಕ್ರಿಕೆಟ್ ಯಾವತ್ತಿಗೂ ತ್ಯಾಗ ಮಾಡುವಂತಾಗಬಾರದು ಎಂದು ಇಂಝಮಾಮ್ ಹೇಳಿದ್ದಾರೆ.
ಯುಟ್ಯೂಬ್ ಚಾನೆಲ್‌ನ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡ ಇಂಝಮಾಮ್ ಉಲ್ ಹಕ್, ಟಿ20 ಕ್ರಿಕೆಟ್‌ನಲ್ಲಿ ಭರಪೂರ ಮನರಂಜನೆ ಸಿಗುತ್ತದೆಯಾದರೂ ಕ್ರಿಕೆಟ್‌ನ ನಿಜವಾದ ಸೌಂದರ್ಯವಿರೋದು ಟೆಸ್ಟ್ ಕ್ರಿಕೆಟ್‌ನಲ್ಲಿ ಎಂದು ಅಭಿಪ್ರಾಯಿಸಿದ್ದಾರೆ.
'ಪ್ರಸ್ತುತ ಹೆಚ್ಚಿನವರು ಟಿ20 ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸುತ್ತಾರೆ. ಹೌದು ಟಿ20 ಕ್ರಿಕೆಟ್ ಹೆಚ್ಚು ಮನರಂಜನೆ ನೀಡುತ್ತದೆ. ಆದರೆ ಕ್ರಿಕೆಟ್‌ನ ನಿಜವಾದ ಸೌಂದರ್ಯ ಅಡಗಿರೋದೆ ಟೆಸ್ಟ್ ಕ್ರಿಕೆಟ್‌ನಲ್ಲಿ. ಇದರಲ್ಲಿ ನೀವು ಗುಣಮಟ್ಟದ ಬ್ಯಾಟ್ಸ್‌ಮನ್‌ಗಳನ್ನು ಕಂಡುಕೊಳ್ಳುತ್ತೀರಿ,' ಎಂದು ಹಕ್ ತಿಳಿಸಿದ್ದಾರೆ.
51ರ ಹರೆಯದ ಇಂಝಮಾಮ್ ಜನಿಸಿದ್ದು ಪಂಜಾಬ್‌ನ ಮುಲ್ತಾನ್‌ನಲ್ಲಿ. ಪಾಕ್‌ನ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿದ್ದ ಹಕ್ 120 ಟೆಸ್ಟ್ ಪಂದ್ಯಗಳಲ್ಲಿ 8830 ರನ್, 378 ಏಕದಿನ ಪಂದ್ಯಗಳಲ್ಲಿ 11739 ರನ್ ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications