ನನ್ನ ಜೀವನದಲ್ಲೇ ಇಂತ ಇನ್ನಿಂಗ್ಸ್ ನೋಡಿಲ್ಲ ಎಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್

ವಿರಾಟ್ ಕೊಹ್ಲಿ ತಮ್ಮ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಿದ ರೀತಿಗೆ ಆಸ್ಟ್ರೇಲಿಯಾದ ದಂತಕಥೆ, ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಮಂತ್ರಮುಗ್ದರಾಗಿದ್ದಾರೆ. ಅವರು ವಿರಾಟ್ ಕೊಹ್ಲಿಯನ್ನು ತಮ್ಮ ಕಾಲದ "ಅತ್ಯಂತ ಸಂಪೂರ್ಣ ಭಾರತೀಯ ಬ್ಯಾಟ್ಸ್‌ಮನ್" ಎಂದು ಹಾಡಿ ಹೊಗಳಿದ್ದಾರೆ.

ಟಿ20 ಕ್ರಿಕೆಟ್‌ ಮಾದರಿ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಸೂಕ್ತರಲ್ಲ ಎಂದು ಹಲವರು ಟೀಕಿಸಿದ್ದರು, ಎಲ್ಲರ ಟೀಕೆ, ಅನುಮಾನಗಳಿಗೆ ಪ್ರತಿಕ್ರಿಯೆ ಎನ್ನುವಂತೆ ವಿರಾಟ್ ಕೊಹ್ಲಿ ಮೆಲ್ಬೋರ್ನ್ ಅಂಗಳದಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82 ರನ್ ಗಳಿಸುವ ಮೂಲಕ ಭಾರತವನ್ನು ಗೆಲ್ಲಿಸಿದ್ದರು.

T20 World Cup: 19ನೇ ಓವರ್ ಶಾಪದ ಬಗ್ಗೆ ಭುವನೇಶ್ವರ್ ಕುಮಾರ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?T20 World Cup: 19ನೇ ಓವರ್ ಶಾಪದ ಬಗ್ಗೆ ಭುವನೇಶ್ವರ್ ಕುಮಾರ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ?

ವಿರಾಟ್ ಕೊಹ್ಲಿ ಇನ್ನಿಂಗ್ಸ್ ಅನ್ನು "ದೇವರ ಹಾಡು" ಎಂದು ಬಣ್ಣಿಸಿದ ಗ್ರೇಗ್ ಚಾಪೆಲ್, "ವಿರಾಟ್ ಕೊಹ್ಲಿಯಂತೆ ಬ್ಯಾಟಿಂಗ್ ಕಲೆಯ ಸೊಗಸನ್ನು ರಾಜಿ ಮಾಡಿಕೊಳ್ಳದೆ ಎದುರಾಳಿಯನ್ನು ಕ್ರೂರವಾಗಿ ಛಿದ್ರಗೊಳಿಸಲು, ಹಿಂದಿನ ಕಾಲದ ಬ್ಯಾಟಿಂಗ್ ದಿಗ್ಗಜರಿಗೂ ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

"ಕೊಹ್ಲಿ ನನ್ನ ಕಾಲದ ಅತ್ಯಂತ ಸಂಪೂರ್ಣ ಭಾರತೀಯ ಬ್ಯಾಟ್ಸ್‌ಮನ್. ಶ್ರೇಷ್ಠ ಚಾಂಪಿಯನ್‌ಗಳು ಮಾತ್ರ ತಮ್ಮ ಕಲ್ಪನೆಯನ್ನು ಸಾಕಾರಗೊಳಿಸುವ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಕೊಹ್ಲಿಗೆ ಅದು ಇದೆ. ಬಹುಶಃ ಟೈಗರ್ ಪಟೌಡಿ ಮಾತ್ರ ಇದೇ ರೀತಿಯ ಆಟದ ಸಮೀಪಕ್ಕೆ ಬಂದಿದ್ದಾರೆ," ಚಾಪೆಲ್ 'ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಅಂಕಣದಲ್ಲಿ ಬರೆದಿದ್ದಾರೆ.

ಬಲಿಷ್ಠ ಬೌಲಿಂಗ್ ವಿರುದ್ದ ಅವರ ಆಟ ಅಮೋಘ

ಬಲಿಷ್ಠ ಬೌಲಿಂಗ್ ವಿರುದ್ದ ಅವರ ಆಟ ಅಮೋಘ

ವಿರಾಟ್ ಕೊಹ್ಲಿ ಪಾಕಿಸ್ತಾನದ ಬಲಿಷ್ಠ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಿದರು. ಯಾವ ಬೌಲರ್ ವಿರುದ್ಧ ಹೇಗೆ ಆಡಬೇಕು ಎಂದು ಆಲೋಚಿಸಿ ಅದಕ್ಕೆ ತಕ್ಕಂತೆ ಬ್ಯಾಟ್ ಮಾಡಿದರು ಎಂದು ಚಾಪೆಲ್ ಹೇಳಿದ್ದಾರೆ.

ವಿಶ್ವಕಪ್ ವಿಜೇತ ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಸಂಪೂರ್ಣ ಸ್ಟ್ರೋಕ್‌ಪ್ಲೇ ವಿಷಯದಲ್ಲಿ ಕೊಹ್ಲಿಗೆ ಹತ್ತಿರವಾಗಬಹುದು ಎಂದು ಚಾಪೆಲ್ ಹೇಳಿದರು.

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಓಪನರ್ ಆಗಿ ರಾಹುಲ್ ಬದಲಿಗೆ ಪಂತ್?; ಬ್ಯಾಟಿಂಗ್ ಕೋಚ್ ಹೇಳಿದ್ದೇನು?

 ನಾನು ಇದುವರೆಗೂ ಇಂತ ಇನ್ನಿಂಗ್ಸ್ ನೋಡಿಲ್ಲ

ನಾನು ಇದುವರೆಗೂ ಇಂತ ಇನ್ನಿಂಗ್ಸ್ ನೋಡಿಲ್ಲ

ಪಾಕಿಸ್ತಾನ ವಿರುದ್ಧ ಕೊಹ್ಲಿಯ ಇನ್ನಿಂಗ್ಸ್ ಟಿ20 ಕ್ರಿಕೆಟ್ ಅನ್ನು "ಕಾನೂನು ಬದ್ಧಗೊಳಿಸಿದೆ" ಎಂದು ಚಾಪೆಲ್ ಹೇಳಿದರು. "ನಾನು ನನ್ನ ಜೀವಮಾನದಲ್ಲೇ ಈ ರೀತಿಯ ಬ್ಯಾಟಿಂಗ್ ಕಲೆಯನ್ನು ಪ್ರದರ್ಶಿಸಿದ ಇನ್ನಿಂಗ್ಸ್‌ ಅನ್ನು ನೋಡಿರಲಿಲ್ಲ.

"ಕಳೆದ 15 ವರ್ಷಗಳಲ್ಲಿ ನಾನು ನೋಡಿರುವ ಅತ್ಯಂತ ಕಲಾ ಪ್ರಕಾರದ ಇನ್ನಿಂಗ್ಸ್ ಇದು. ಟಿ20 ಕ್ರಿಕೆಟ್ ಎಂದರೆ ಬಡಿ ಮನರಂಜನೆ ಎಂದು ತಳ್ಳಿಹಾಕಲು ಸಾಧ್ಯವಿಲ್ಲ." ಎಂದು ಗ್ರೇಗ್ ಚಾಪೆಲ್ ಹೇಳಿದ್ದಾರೆ.

ಆತನ ಬ್ಯಾಟಿಂಗ್ ಕೌಶಲ್ಯ ಅತ್ಯುತ್ತಮವಾಗಿದೆ

ಆತನ ಬ್ಯಾಟಿಂಗ್ ಕೌಶಲ್ಯ ಅತ್ಯುತ್ತಮವಾಗಿದೆ


"ಆಧುನಿಕ ಆಟದಲ್ಲಿ ಅನೇಕ ಅತ್ಯುತ್ತಮ ಹಿಟ್ಟರ್‌ಗಳ ಬಗ್ಗೆ ನಾನು ಯೋಚಿಸಬಲ್ಲೆ, ಅವರು ಇದೇ ರೀತಿಯ ಗೆಲುವನ್ನು ಬಹುಶಃ ಸಾಧಿಸಬಹುದು, ಆದರೆ ಪಾಕಿಸ್ತಾನದ ವಿರುದ್ಧ ಕೊಹ್ಲಿ ಮಾಡಿದ ರೀತಿಯಲ್ಲಿ ಯಾರೂ ಅದನ್ನು ಶುದ್ಧ ಬ್ಯಾಟಿಂಗ್ ಕೌಶಲ್ಯದಿಂದ ಮಾಡಿಲ್ಲ" ಎಂದು ಅವರು ಹೇಳಿದರು.

"ಈ ಹಿಂದೆ ಆಡಮ್ ಗಿಲ್‌ಕ್ರಿಸ್ಟ್ ಮಾತ್ರ ಹತ್ತಿರ ಕೊಹ್ಲಿ ಸಮೀಪ ಬಂದಿದ್ದಾರೆ ಎಂದು ಹೇಳಿದರು. ಟೆಸ್ಟ್ ಕ್ರಿಕೆಟ್‌ನ ಪ್ರಬಲ ಆಟಗಾರನಿಂದ ಈ ಇನ್ನಿಂಗ್ಸ್ ಬಂದಿರುವುದು ಚಾಪೆಲ್ ಅವರನ್ನು ಭಾವಪರವಶರನ್ನಾಗಿಸಿದೆ.

"ಇದು ಅವರ ವೃತ್ತಿಜೀವನದ ಅತ್ಯುತ್ತಮ ಟಿ20 ಇನ್ನಿಂಗ್ಸ್ ಆಗಿದೆ, ಮತ್ತು ಯಾವುದೇ ಸ್ವರೂಪದಲ್ಲಿ ಇದು ಅತ್ಯಂತ ತೃಪ್ತಿದಾಯಕವಾಗಿದೆ. ಅವರು ಸಂಪೂರ್ಣವಾಗಿ ಲಯದಲ್ಲಿದ್ದರು." ಎಂದು ಹೇಳಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, October 29, 2022, 19:10 [IST]
Other articles published on Oct 29, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X