ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಓಪನರ್ ಆಗಿ ರಾಹುಲ್ ಬದಲಿಗೆ ಪಂತ್?; ಬ್ಯಾಟಿಂಗ್ ಕೋಚ್ ಹೇಳಿದ್ದೇನು?

T20 World Cup 2022: Will Play Rishabh Pant To Replace KL Rahul As Opener Against South Africa?

ಬಲಗೈ ಬ್ಯಾಟರ್ ಮತ್ತು ಪ್ರಸ್ತುತ ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ 4 ಮತ್ತು 9 ಸ್ಕೋರ್‌ಗಳನ್ನು ದಾಖಲಿಸಿದ ಕಾರಣ ಬ್ಯಾಟಿಂಗ್ ಫಾರ್ಮ್‌ನಿಂದ ಹೊರಗುಳಿದಿರುವುದು ಸ್ಪಷ್ಟವಾಗಿದೆ.

ಕೆಎಲ್ ರಾಹುಲ್ ಅಗ್ರಕ್ರಮಾಂಕದಲ್ಲಿ ತಂಡಕ್ಕೆ ಅಗತ್ಯ ರನ್ ಗಳಿಸದೆ, ಕಳಪೆಯಾಗಿ ವಿಕೆಟ್ ಒಪ್ಪಿಸುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಟೂರ್ನಿಯಲ್ಲಿ ಈವರೆಗೆ ಅವರು ಮುಕ್ತವಾಗಿ ಸ್ಟ್ರೈಕ್ ತಿರುಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎಡಗೈ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಅಗ್ರ ಕ್ರಮಾಂಕದಲ್ಲಿ ಆಡುವಂತೆ ಒತ್ತಾಯಗಳು ಕೇಳಿಬರುತ್ತಿವೆ. ರಿಷಭ್ ಪಂತ್ ಬೆಂಚ್ ಕಾಯಿಸುತ್ತಿರುವುದರಿಂದ ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್ ಆಗಿ ಆದ್ಯತೆ ನೀಡಲಾಗುತ್ತಿದೆ.

ಟಿ20 ವಿಶ್ವಕಪ್: ಟೀಂ ಇಂಡಿಯಾ ಫಾರ್ಮ್ ಬಗ್ಗೆ ಅಚ್ಚರಿ ಹೇಳಿಕೆ ಇಂಜಮಾಮ್-ಉಲ್-ಹಕ್ಟಿ20 ವಿಶ್ವಕಪ್: ಟೀಂ ಇಂಡಿಯಾ ಫಾರ್ಮ್ ಬಗ್ಗೆ ಅಚ್ಚರಿ ಹೇಳಿಕೆ ಇಂಜಮಾಮ್-ಉಲ್-ಹಕ್

ಭಾರತ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲು ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೆಎಲ್ ರಾಹುಲ್ ಬದಲಿಗೆ ರಿಷಭ್ ಪಂತ್ ಅವರನ್ನು ಆರಂಭಿಕರಾಗಿ ಪ್ರಯತ್ನಿಸಬಹುದೇ ಎಂದು ಪ್ರಶ್ನೆ ಕೇಳಲಾಯಿತು.

ನಾವು ಸಾಧ್ಯವಾದಾಗಲೆಲ್ಲಾ ರನ್ ಗಳಿಸಲು ಬಯಸುತ್ತೇವೆ

ನಾವು ಸಾಧ್ಯವಾದಾಗಲೆಲ್ಲಾ ರನ್ ಗಳಿಸಲು ಬಯಸುತ್ತೇವೆ

ಈ ಪ್ರಶ್ನೆಗೆ ಉತ್ತರಿಸಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, "ಇಲ್ಲ, ನಾವು ನಿಜವಾಗಿಯೂ ಆ ಬಗ್ಗೆ ಯೋಚಿಸುತ್ತಿಲ್ಲ. ಎರಡು ಪಂದ್ಯಗಳು ನಡೆದಿವೆ. ಅದೇನೇ ಇದ್ದರೂ ಅದು ಸಾಕಷ್ಟು ವ್ಯತ್ಯಾಸ ಮಾಡಿದೆ ಎಂದು ನಾನು ಭಾವಿಸುವುದಿಲ್ಲ. ಕೆಎಲ್ ರಾಹುಲ್ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಅವರು ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ, ಅಲ್ಲದೆ, ನಾವು ಈ ಸಮಯದಲ್ಲಿ ಅಂತಹ ಯಾವುದೇ ವಿಷಯವನ್ನು ನೋಡುತ್ತಿಲ್ಲ," ಎಂದರು.

ಟಿ20 ಪಂದ್ಯಗಳಲ್ಲಿ ಭಾರತದ ಹೊಸ ಆಕ್ರಮಣಕಾರಿ ವಿಧಾನದ ಕುರಿತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮಾತನಾಡುತ್ತಾ, "ನಾವು ಹೊಂದಿಕೊಳ್ಳಲು ನೋಡುತ್ತಿದ್ದೇವೆ. ಸಹಜವಾಗಿ ಒಂದು ಉದ್ದೇಶದಿಂದ ಆಡುವುದು ಯಾವಾಗಲೂ ಗುರಿಯಾಗಿರುತ್ತದೆ. ನಾವು ಸಾಧ್ಯವಾದಾಗಲೆಲ್ಲಾ ರನ್ ಗಳಿಸಲು ಬಯಸುತ್ತೇವೆ. ಆದರೆ ನಂತರ ನಾವು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ," ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ಅಜೇಯ 82 ಮತ್ತು ಅಜೇಯ 62 ರನ್‌

ವಿರಾಟ್ ಕೊಹ್ಲಿ ಅಜೇಯ 82 ಮತ್ತು ಅಜೇಯ 62 ರನ್‌

"ಆಸ್ಟ್ರೇಲಿಯಾದ ಪಿಚ್‌ಗಳು 200, 200-ಪ್ಲಸ್ ವಿಕೆಟ್‌ಗಳು ಎಂದು ನಾನು ಭಾವಿಸುವುದಿಲ್ಲ, ಆದ್ದರಿಂದ ನಾವು ಹೊಂದಿಕೊಳ್ಳುವ ಅಗತ್ಯವಿದೆ. ಇಲ್ಲಿಯವರೆಗೆ ಆ ವಿಷಯದಲ್ಲಿ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ," ಎಂದು ವಿಕ್ರಮ್ ರಾಥೋರ್ ಹೇಳಿದರು.

ವಿರಾಟ್ ಕೊಹ್ಲಿ ಅವರು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಅಜೇಯ 82 ಮತ್ತು ಅಜೇಯ 62 ರನ್‌ಗಳನ್ನು ದಾಖಲಿಸಿದ ಕಾರಣ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

+1.425ರ ನೆಟ್ ರನ್‌ರೇಟ್‌ನೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ

+1.425ರ ನೆಟ್ ರನ್‌ರೇಟ್‌ನೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ

ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಭಾರತದ ಬ್ಯಾಟಿಂಗ್ ಕೋಚ್, "ಆಟದ ಪರಿಸ್ಥಿತಿಗಳು ಕೊಹ್ಲಿಯನ್ನು ಪ್ರೇರೆಪಿಸಿದವು ಅಥವಾ ಪರಿಸ್ಥಿತಿಯು ಅವರನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಆಡಲು ಒತ್ತಾಯಿಸಿದ್ದರಿಂದ ಅವರು ಅದನ್ನು ಮಾಡಿದ್ದಾರೆ. ಅವರು ತಮ್ಮ ಪಂದ್ಯವನ್ನು ಬದಲಾಯಿಸಲು ಅಥವಾ ಅವರ ಆಟವನ್ನು ಯಾವುದೇ ತಂಡಕ್ಕೆ ಹೊಂದಿಕೊಳ್ಳಲು ಸಾಕಷ್ಟು ಉತ್ತಮ ಆಟಗಾರರಾಗಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ ಅದ್ಭುತವಾಗಿ ಆಡಿದ್ದಾರೆ ಮತ್ತು ಅವರು ಅದೇ ರೀತಿ ಆಡುವುದನ್ನು ಮುಂದುವರಿಸುತ್ತಾರೆ ಎಂದು ನಮಗೆ ತಿಳಿದಿದೆ," ಎಂದರು.

ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ನಂತರ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ನೆದರ್ಲ್ಯಾಂಡ್ಸ್ ತಂಡವನ್ನು 56 ರನ್‌ಗಳಿಂದ ಸೋಲಿಸಿತು. ತನ್ನ ಎರಡೂ ಪಂದ್ಯಗಳನ್ನು ಗೆದ್ದ ನಂತರ, ಭಾರತವು ತನ್ನ ಸೂಪರ್ 12 ಗುಂಪಿನಲ್ಲಿ ನಾಲ್ಕು ಅಂಕಗಳು ಮತ್ತು +1.425ರ ನೆಟ್ ರನ್‌ರೇಟ್‌ನೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ರಿಷಭ್ ಪಂತ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಿಲೀ ರೊಸೊವ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ಹೆನ್ರಿಚ್ ಕ್ಲಾಸೆನ್, ತಬ್ರೈಜ್ ಶಮ್ಸಿ, ರೆಕ್ಸ್ ಜಾನ್ಸೆನ್.

Story first published: Saturday, October 29, 2022, 16:16 [IST]
Other articles published on Oct 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X