ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ ನಾಯಕತ್ವ ವಹಿಸಿದ ಭಾರತೀಯ ಮೂಲದ 3 ವಿದೇಶಿ ತಂಡದ ನಾಯಕರು

South africa

ವಿಶ್ವದಲ್ಲಿ ಟೀಂ ಇಂಡಿಯಾಗೆ ಇರುವಷ್ಟು ಕ್ರಿಕೆಟ್ ಅಭಿಮಾನಿಗಳು ಮತ್ಯಾವ ದೇಶದ ತಂಡಕ್ಕೂ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಭಾರತದ ಕ್ರಿಕೆಟ್‌ ಎಷ್ಟು ದೊಡ್ಡ ಕ್ರೀಡೆಯಾಗಿ ಬೆಳೆದಿದೆ ಅಂದ್ರೆ ಇದು ಕೇವಲ ಕ್ರೀಡೆಯಾಗಿರದೆ ಅಭಿಮಾನಿಗಳ ಮನದಲ್ಲಿ ಧರ್ಮವಾಗಿದೆ.

1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದ ಬಳಿಕ ಭಾರತದ ಕ್ರಿಕೆಟ್‌ ಅಭಿಮಾನಿಗಳ ಸಂಖ್ಯೆಯು ಹಲವು ಪಟ್ಟು ಹೆಚ್ಚಾಯಿತು ಎಂದ್ರೆ ತಪ್ಪಾಗಲಾರದು. ಲಕ್ಷಾಂತರ ಮಕ್ಕಳು ಭಾರತದ ಪರ ಆಡಬೇಕೆಂಬ ಕನಸನ್ನು ಕಟ್ಟಿಕೊಂಡರು. ಇದರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಒಬ್ಬರು. ಆದ್ರೆ ರಾಷ್ಟ್ರೀಯ ತಂಡದ ಪರ ಆಡಲು ಕೆಲವೇ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ ಎಂಬುದು ಅಷ್ಟೇ ಸತ್ಯ.

ಟೀಂ ಇಂಡಿಯಾಗೆ ಆಯ್ಕೆಯಾಗುವುದು ಅಷ್ಟು ಸುಲಭದ ಮಾತಲ್ಲ. ಭಾರತದ ಜೆರ್ಸಿ ತೊಡಲು ಆಟಗಾರು ಸಾಕಷ್ಟು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ತಾಳ್ಮೆಯ ಜೊತೆಗೆ ಪ್ರತಿಭೆಯು ಇರಬೇಕಾಗುತ್ತದೆ. ಹಾಗಿದ್ರೆ ಮಾತ್ರ ಬಿಸಿಸಿಐ ಕಾಂಟ್ರ್ಯಾಕ್ಟ್‌ ಗಿಟ್ಟಿಸಲು ಸಾಧ್ಯವಾಗಿದೆ.

ಇನ್ನು ಕ್ರಿಕೆಟ್ ಟ್ಯಾಲೆಂಟ್ ಇದ್ರೂ ಅವಕಾಶ ಸಿಗದೆ ಅದೆಷ್ಟೋ ಯುವಕರು ಬೇರೆ ದೇಶಕ್ಕೆ ಹೋಗಿ ಅಲ್ಲಿ ಕ್ರಿಕೆಟ್ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಉದಾಹರಣೆಗಳು ಇವೆ. ಅದೇ ರೀತಿಯಲ್ಲಿ ಭಾರತೀಯ ಮೂಲದ ಕುಟುಂಬದಲ್ಲಿ ಬೆಳೆದ ಅಥವಾ ಸಂಬಂಧವನ್ನ ಹೊಂದಿರುವ ಆಟಗಾರರು ವಿದೇಶಿ ತಂಡದಲ್ಲಿ ಆಡಿರುವುದನ್ನು ಕಂಡಿದ್ದೇವೆ. ಹೀಗೆ ಭಾರತೀಯ ಮೂಲದ ಆಟಗಾರನೊಬ್ಬ ವಿದೇಶ ತಂಡದ ನಾಯಕತ್ವ ನಿಭಾಯಿಸಿ ಭಾರತದ ವಿರುದ್ಧವೇ ಆಡಿದ್ದ ಮೂವರು ಆಟಗಾರರ ಕುರಿತಾಗಿ ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ. ಮುಂದೆ ಓದಿ..

ನಾಸಿರ್ ಹುಸೇನ್

ನಾಸಿರ್ ಹುಸೇನ್

ಇಂಗ್ಲೆಂಡ್ ಕ್ರಿಕೆಟ್‌ನ ಓರ್ವ ಉತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ನಾಸಿರ್ ಹುಸೇನ್ ಕೂಡ ಒಬ್ಬರು. ಭಾರತೀಯ ಮೂಲದ ನಾಸಿರ್ ಹುಸೇನ್ 28 ಮಾರ್ಚ್‌ 1968ರಂದು ಚೆನ್ನೈನಲ್ಲಿ ಜನಿಸಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಆಡಲು ಅವಕಾಶ ಪಡೆದ ನಾಸಿರ್ ಹುಸೇನ್ ಇಂಗ್ಲೆಂಡ್ ಕಂಡಂತಹ ಓರ್ವ ಉತ್ತಮ ಬ್ಯಾಟರ್ ಆಗಿದ್ದಾರೆ.

ಈ ಬಲಗೈ ಬ್ಯಾಟರ್ ಇಂಗ್ಲೆಂಡ್ ಪರ 96 ಟೆಸ್ಟ್ ಪಂದ್ಯ ಮತ್ತು 88 ಏಕದಿನ ಪಂದ್ಯಗಳನ್ನಾಡಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ 37.18ರ ಸರಾಸರಿಯಲ್ಲಿ 5764 ರನ್ ಕಲೆಹಾಕಿದ್ದಾರೆ. ಇನ್ನು ಏಕದಿನ ಫಾರ್ಮೆಟ್‌ನಲ್ಲಿ ನಾಸಿರ್ 30.29ರ ಸರಾಸರಿಯಲ್ಲಿ 2332 ರನ್ ಸಿಡಿಸಿದ್ದಾರೆ.

54 ವರ್ಷದ ನಾಸಿರ್ ಹುಸೇನ್ ಇಂಗ್ಲೆಂಡ್ ತಂಡವನ್ನು 56 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ 28 ಪಂದ್ಯಗಳನ್ನು ಗೆದ್ದಿದೆ. ಇದರಲ್ಲಿ ಕೆಲವು ಪಂದ್ಯಗಳಲ್ಲಿ ಭಾರತ ವಿರುದ್ಧವೂ ನಾಯಕತ್ವ ವಹಿಸಿರುವು ಹುಸೇನ್‌ ನಾಯಕತ್ವದ 2002ರ ನ್ಯಾಟ್‌ವೆಸ್ಟ್ ಸೀರೀಸ್ ಫೈನಲ್ ಬಹಳ ಖ್ಯಾತಿ ಹೊಂದಿದೆ. ಇದರಲ್ಲಿ ಟೀಂ ಇಂಡಿಯಾ ಆಂಗ್ಲರ ಗರ್ವಭಂಗ ಮಾಡಿ ಸರಣಿಯನ್ನ ಗೆದ್ದು ಬೀಗಿತ್ತು.

Ind vs Ire 2nd T20: ಅಂತಿಮ 11 ಆಟಗಾರರ ಆಯ್ಕೆ ಮಾಡುವುದೇ ಹಾರ್ದಿಕ್‌ಗೆ ದೊಡ್ಡ ಸವಾಲು!

ಹಶೀಮ್ ಆಮ್ಲಾ

ಹಶೀಮ್ ಆಮ್ಲಾ

ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹಶೀಮ್ ಆಮ್ಲಾ ಕೂಡ ಭಾರತದೊಂದಿಗೆ ಸಂಬಂಧ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಹಶೀಮ್ ಆಮ್ಲಾ ಪ್ರೊಟಿಸ್ ಕಂಡತಂಹ ಗ್ರೇಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರು. ಬಲಗೈ ಬ್ಯಾಟರ್ ಹಶೀಮ್ ಆಮ್ಲಾ 124 ಟೆಸ್ಟ್‌, 181 ಏಕದಿನ ಮತ್ತು 44 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟಾರೆ ಮೂರು ಫಾರ್ಮೆಟ್‌ನಲ್ಲಿ 18672 ರನ್ ಕಲೆಹಾಕಿದ್ದಾರೆ.

2015ರಲ್ಲಿ ಹಶೀಮ್ ಆಮ್ಲಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಂಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು ಪ್ರವಾಸಿ ಹರಿಣಗಳ ತಂಡವನ್ನ 3-0 ಅಂತರದಲ್ಲಿ ಸೋಲಿಸಿತ್ತು.

ರೋಹಿತ್ ಬದಲು ಕೊಹ್ಲಿ ನಾಯಕನಾಗಲಿ, ಈತ ನಾಯಕನಾಗುವಷ್ಟು ದೊಡ್ಡವನಲ್ಲ ಎಂದ ಕನೇರಿಯಾ

ಕೇಶವ ಮಹಾರಾಜ್

ಕೇಶವ ಮಹಾರಾಜ್

ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಪೂರ್ವಜರು ಭಾರತದವರೇ ಆಗಿದ್ದಾರೆ. ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಕೇಶವ್ ವಂಶಸ್ತರು ವಾಸವಾಗಿದ್ದರು. ಕೇಶವ್ ತಂದೆ ದೇಶೀಯ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು.

ಇತ್ತೀಚೆಗಷ್ಟೇ ಭಾರತ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಾಗಿತ್ತು. ಈ ಸರಣಿಯಲ್ಲಿ ನಾಯಕ ಟೆಂಬಾ ಬವುಮಾ ನಾಲ್ಕನೇ ಟಿ20ಯಲ್ಲಿ ಗಾಯಗೊಂಡ ಪರಿಣಾಮ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನ ಮುನ್ನಡೆಸುವ ಅವಕಾಶ ಕೇಶವ್‌ಗೆ ಲಭಿಸಿತ್ತು.

ಆದಾಗ್ಯೂ, ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಜೂನ್ 19ರಂದು ನಡೆದ ಭಾರತ- ದಕ್ಷಿಣ ಆಫ್ರಿಕಾ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿತು. ಪರಿಣಾಮ ಐದು ಪಂದ್ಯಗಳ ಟಿ20 ಸರಣಿಯು 2-2ರಿಂದ ಸಮಬಲಗೊಂಡಿದ್ದು, ಅಭಿಮಾನಿಗಳು ನಿರಾಸೆಗೊಂಡರು. ಆದ್ರೆ ಪ್ರೊಟಿಸ್ ಪರ ಭಾರತೀಯ ಮೂಲದ ಆಟಗಾರ ಟೀಂ ಇಂಡಿಯಾ ವಿರುದ್ಧ ತಂಡವನ್ನ ಮುನ್ನಡೆಸಿದ ಲಿಸ್ಟ್‌ಗೆ ಕೇಶವ್ ಸೇರಿದ್ದಾರೆ.

Story first published: Wednesday, June 29, 2022, 10:08 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X