ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿಯ ಫೇವರಿಟ್ ಮೂರನೇ ಕ್ರಮಾಂಕದ ಮೇಲೆ ಈ ಮೂವರ ಕಣ್ಣು!

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮಾರ್ಡನ್ ಡೇ ಕ್ರಿಕೆಟ್‌ನ ಲೆಜೆಂಡ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟೇ ಏಕೆ ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್‌ಮನ್‌ಗಳಲ್ಲಿ ಕೂಡ ಒಬ್ಬರು. ಶತಕದ ಮೇಲೆ ಶತಕ ಸಿಡಿಸುತ್ತಿದ್ದ ವಿರಾಟ್ ಕೊಹ್ಲಿ ಈಗಾಗಲೇ 70 ಅಂತರಾಷ್ಟ್ರೀಯ ಶತಕಗಳ ಸರದಾರ.

43 ಏಕದಿನ ಶತಕಗಳು ಮತ್ತು 27 ಟೆಸ್ಟ್ ಶತಕಗಳನ್ನ ದಾಖಲಿಸಿರುವ ವಿರಾಟ್ ಕೊಹ್ಲಿ ಸಾಮರ್ಥ್ಯ ಎಂತಹದ್ದು ಎಂಬುದು ಇಡೀ ಕ್ರಿಕೆಟ್ ಲೋಕಕ್ಕೆ ತಿಳಿದಿದೆ. ಕ್ರಿಕೆಟ್‌ನ ಮೂರು ಫಾರ್ಮೆಟ್‌ನಲ್ಲಿ 50ಕ್ಕೂ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಆಟಗಾರನಾಗಿರುವ ವಿರಾಟ್ ಕೊಹ್ಲಿ, ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸಿದ್ದಾರೆ.

2019ರಿಂದ ಒಂದೇ ಒಂದು ಅಂತರಾಷ್ಟ್ರೀಯ ಶತಕ ದಾಖಲಿಸಲು ವಿಫಲಗೊಂಡಿರುವ ವಿರಾಟ್ ಕೊಹ್ಲಿ 71ನೇ ಶತಕ ಸಿಡಿಸಲು ಸಾಧ್ಯವಾಗಿಲ್ಲ. ವಿರಾಟ್ ಕೊನೆಯದಾಗಿ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್‌ನಲ್ಲಿ ಮತ್ತೆ ವಿಫಲರಾದರು.

ಒಂದು ವೇಳೆ ವಿರಾಟ್ ಕೊಹ್ಲಿಯ ಇದೇ ಫಾರ್ಮ್ ಮುಂದುವರಿದರೆ ತಂಡದಲ್ಲಿ ಹೆಚ್ಚು ದಿನ ಮುಂದುವರಿಯಲು ಸಾಧ್ಯವಿಲ್ಲ. ಆದ್ದರಿಂದ, ಭಾರತವು ಮೂರನೇ ಕ್ರಮಾಂಕದ ಬದಲಿ ಬಗ್ಗೆ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಬದಲಿಗೆ ನಾಲ್ವರು ಮೂರನೇ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅದು ಯಾರೆಂದು ಈ ಕೆಳಗೆ ನೋಡೋಣ.

ಶುಭಮನ್ ಗಿಲ್‌

ಶುಭಮನ್ ಗಿಲ್‌

ಭವಿಷ್ಯದಲ್ಲಿ ಭಾರತಕ್ಕೆ ಮೂರನೇ ಸ್ಥಾನವನ್ನು ಪರಿಗಣಿಸಲು ಶುಭಮನ್ ಗಿಲ್ ಅತ್ಯಂತ ಸಂಭಾವ್ಯ ಆಟಗಾರರಾಗಿದ್ದಾರೆ. ಗಿಲ್ ಈಗಾಗಲೇ ವಿರಾಟ್ ಕೊಹ್ಲಿಯ ಬದಲಿ ಆಟಗಾರ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಶುಭ್ಮನ್ ಗಿಲ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಬದಲಿಗೆ ಪ್ರತಿಭಾವಂತ ಆಟಗಾರ. ಅಂಡರ್-19 ವಿಶ್ವಕಪ್ ಮೂಲಕ ಶ್ರೇಷ್ಠ ತಾರೆಯಾಗಿ ಬೆಳೆದರು. ತಾಳ್ಮೆಯ ಆಟದ ಜೊತೆಗೆ ಆಕ್ರಮಣಾಕಾರಿಯಾಗಿ ಆಟವಾಡಬಲ್ಲ ಶುಭಮನ್ ಗಿಲ್‌ ಪ್ರತಿಭಾವಂತ ಆಟಗಾರನಾಗಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿಯ ಫೇವರಿಟ್ ಮೂರನೇ ಕ್ರಮಾಂಕಕ್ಕೆ ಶುಭಮನ್ ಸ್ಪರ್ಧೆ ನೀಡುವ ಆಟಗಾರ.

ಮುಂಬೈ ತೊರೆಯಲು ರೆಡಿಯಾದ ಮತ್ತೊಬ್ಬ ಪ್ಲೇಯರ್: NOCಗಾಗಿ ಕಾಯುತ್ತಿರುವ ಸಿದ್ದೇಶ್ ಲಾಡ್‌

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

ಶ್ರೇಯಸ್ ದೊಡ್ಡ ಸ್ಟಾರ್ ಅಲ್ಲದಿದ್ದರೂ ಕ್ಲಾಸಿಕ್ ಬ್ಯಾಟಿಂಗ್ ಶೈಲಿಯೊಂದಿಗೆ ಉತ್ತಮ ಬ್ಯಾಟ್ಸ್‌ಮನ್. ಅವರು ಭವಿಷ್ಯದ ಟೀಂ ಇಂಡಿಯಾದ ಮೂರನೇ ಕ್ರಮಾಂಕದ ಸ್ಥಾನವನ್ನು ಪಡೆಯುವ ಅತ್ಯಂತ ಸಂಭಾವ್ಯ ಆಟಗಾರರಾಗಿದ್ದಾರೆ. ಈತ ಒಂದು ಕಾಲದಲ್ಲಿ ಭಾರತದ ವಿಶ್ವಾಸಾರ್ಹ ನಂಬರ್ 4 ಬ್ಯಾಟ್ಸ್‌ಮನ್ ಆಗಿದ್ದರು.

ಆದರೆ ಸೂರ್ಯಕುಮಾರ್ ಯಾದವ್ ಆಗಮನದಿಂದ 4ನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ಸ್ಥಾನ ಕೈತಪ್ಪಿತು. ಆದ್ದರಿಂದ, ಅವರು ಈಗ ಮೂರನೇ ಸ್ಥಾನದಲ್ಲಿರುವ ನಿರೀಕ್ಷೆಯಿದೆ. ಶಾರ್ಟ್ ಬಾಲ್ ಗಳು ಶ್ರೇಯಸ್ ಅವರ ದೌರ್ಬಲ್ಯ ಎಂದೇ ಹೇಳಬಹುದು. ಆದರೆ ಅದನ್ನು ಮೀರಿಸುವ ಪ್ರತಿಭೆ ಶ್ರೇಯಸ್ ಅವರಲ್ಲಿದೆ. ಭಾರತ ತಂಡದಲ್ಲಿ ಇನ್ನೂ ಸಕ್ರಿಯ ಆಟಗಾರ ಎಂದು ಪರಿಗಣಿಸಲ್ಪಟ್ಟಿರುವ ಶ್ರೇಯಸ್ ಭವಿಷ್ಯದಲ್ಲಿ ಕೊಹ್ಲಿ ಬದಲಿಗೆ ಮೂರನೇ ಸ್ಥಾನದಲ್ಲಿದ್ದರೆ ಆಶ್ಚರ್ಯವೇನಿಲ್ಲ.

ಕೊಹ್ಲಿ ಐಪಿಎಲ್ ಸಂಭಾವನೆ: 2008ರಿಂದ 2022ರವರೆಗಿನ ಹಣದ ಸಂಪೂರ್ಣ ಪಟ್ಟಿ; ಲಕ್ಷಗಳಿಂದ ಕೋಟಿ!

ದೀಪಕ್ ಹೂಡಾ

ದೀಪಕ್ ಹೂಡಾ

ದೀಪಕ್ ಹೂಡಾ ಭಾರತ ತಂಡದಲ್ಲಿ ಭರವಸೆಯ ಸ್ಫೋಟಕ ಬ್ಯಾಟ್ಸ್‌ಮನ್‌. ಯಾವುದೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಬಲ್ಲ ಹೂಡಾ, ಪಾರ್ಟ್‌ ಟೈಂ ಸ್ಪಿನ್ನರ್ ಆಗಿಯೂ ತಂಡಕ್ಕೆ ಉಪಯುಕ್ತ. ಮೂರನೇ ಕ್ರಮಾಂಕದಲ್ಲಿ ಅವಕಾಶ ಸಿಕ್ಕಾಗ ಹೂಡಾ ಉತ್ತಮ ಪ್ರದರ್ಶನ ನೀಡಿದರು. ಪ್ರಸ್ತುತ ಭಾರತದ ಯಾವುದೇ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಲ್ಲ. ಆದ್ದರಿಂದ ಭಾರತವು ಹುಡಾವನ್ನು ಹೆಚ್ಚು ಬೆಂಬಲಿಸುತ್ತದೆ. ದೀಪಕ್ ಹೂಡ ಭಾರತಕ್ಕೆ ಭವಿಷ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಪರಿಗಣಿಸುವ ಸಂಭಾವ್ಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

Story first published: Tuesday, August 16, 2022, 21:51 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X