ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಲೀಗ್ ಹಂತದಲ್ಲೇ ಹೊರಬಿದ್ದ SRH ತಂಡದಿಂದ ಈ ನಾಲ್ವರಿಗೆ ಗೇಟ್‌ಪಾಸ್‌ ಸಾಧ್ಯತೆ!

SRH

ಐಪಿಎಲ್ 2022ರ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸಂಪೂರ್ಣ ವಿಫಲವಾಯಿತು. ಕನಿಷ್ಠ ಪ್ಲೇಆಫ್‌ಗೂ ಅರ್ಹತೆ ಪಡೆದಿಲ್ಲ. ಆಡಿದ 14 ಪಂದ್ಯಗಳಲ್ಲಿ ಕೇವಲ 6 ಗೆಲುವು ಸಾಧಿಸಿ 8ನೇ ಸ್ಥಾನಕ್ಕೆ ತಲುಪಿದೆ.

ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ಸರಣಿ ಸೋಲಿನೊಂದಿಗೆ ಋತುವನ್ನು ಆರಂಭಿಸಿತು.ಆನಂತರ ಐದು ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿತು. ಆದರೆ ಮತ್ತೆ ಸತತ 5 ಪಂದ್ಯಗಳನ್ನು ಸೋತಿದ್ದು ಪ್ಲೇ ಆಫ್ ಹಾದಿಯನ್ನ ಮುಚ್ಚಿಸಿತು. ನಾಯಕ ಕೇನ್ ವಿಲಿಯಮ್ಸನ್ ಅವರ ಬ್ಯಾಟಿಂಗ್ ವೈಫಲ್ಯವು ತಂಡದ ಯಶಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು.

ನಾಯಕ ವಿಲಿಯಮ್ಸನ್ 13 ಪಂದ್ಯಗಳಲ್ಲಿ 19.63 ಸರಾಸರಿಯಲ್ಲಿ ಕೇವಲ 216 ರನ್ ಗಳಿಸಿದರು. ಈ ಋತುವಿನಲ್ಲಿ ಸನ್‌ರೈಸರ್ಸ್ ಮಿಂಚದಿದ್ರೂ ಸಹ ಉಮ್ರಾನ್ ಮಲಿಕ್, ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಅವರಂತಹ ಆಟಗಾರರ ಸಾಮರ್ಥ್ಯ ತಿಳಿದಿದೆ. ಆದರೆ, ಇತರ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ನಾಲ್ಕು ಸನ್‌ರೈಸರ್ಸ್‌ ಹೈದ್ರಾಬಾದ್ ತಂಡದಿಂದ ಈ ನಾಲ್ವರು ಆಟಗಾರರು ಮುಂದಿನ ಸೀಸನ್ ಆಡುವುದು ಅನುಮಾನವಾಗಿದೆ.

ಸೀನ್ ಅಬಾಟ್

ಸೀನ್ ಅಬಾಟ್

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಆಸ್ಟ್ರೇಲಿಯಾದ ಸೀನ್ ಅಬಾಟ್ ಅವರನ್ನು 2.40 ಕೋಟಿ ರೂಪಾಯಿಗೆ ಖರೀದಿಸಿದೆ. ಬಿಬಿಎಲ್ ಅನುಭವ, ಅಲ್ಲಿನ ಪ್ರದರ್ಶನದ ಆಧಾರದ ಮೇಲೆ ಸನ್ ರೈಸರ್ಸ್ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕೇವಲ ಒಂದು ಪಂದ್ಯವನ್ನು ಆಡಿದ ಅವರು ಪ್ರತಿ ಓವರ್‌ಗೆ 11.75 ರಂತೆ 47 ರನ್‌ಗಳನ್ನು ನೀಡಿದರು.

ಬ್ಯಾಟಿಂಗ್ ನಲ್ಲೂ ಅವರು ಗಳಿಸಿದ್ದು ಏಳು ರನ್ ಮಾತ್ರ. ಹೀಗಾಗಿ ಸನ್‌ರೈಸರ್ಸ್ ಮ್ಯಾನೇಜ್‌ಮೆಂಟ್ ಅವರನ್ನು ಕೈಬಿಡುವ ನಿರೀಕ್ಷೆಯಿದೆ. ಅವರ ಬದಲಿಗೆ ಉತ್ತಮ ವಿದೇಶಿ ಆಲ್‌ರೌಂಡರ್‌ನನ್ನು ತೆಗೆದುಕೊಳ್ಳಲು ಬಯಸಿದೆ.

ಫಜಲ್ ಹಕ್ ಫಾರೂಕಿ

ಫಜಲ್ ಹಕ್ ಫಾರೂಕಿ

ಅಫ್ಘಾನಿಸ್ತಾನದ ಫಜಲ್ ಹಕ್ ಫಾರೂಕಿಯನ್ನು ಸನ್‌ರೈಸರ್ಸ್ ತೊರೆಯಬೇಕೆಂದು ಬಯಸಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಅವರನ್ನು ಖರೀದಿಸಿದ್ದರಿಂದ ಫಾರೂಕಿ ಮೇಲೆ ನಂಬಿಕೆ ಇಡಲಾಗಿತ್ತು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 6 ಎಕಾನಮಿ ಹೊಂದಿರುವ ಈತ 6 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಏಳು ವಿಕೆಟ್ ಪಡೆದಿದ್ದಾರೆ.

ಹೀಗಾಗಿ ಸನ್ ರೈಸರ್ಸ್ ಭಾರೀ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಅವರು ಆಡಿದ ಮೂರು ಪಂದ್ಯಗಳನ್ನು ಆಡಿದ್ದು, 9.16 ರ ಎಕಾನಮಿಯೊಂದಿಗೆ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಕ್ರಮಾಂಕದಲ್ಲಿ ಅವರ ಬದಲಿಗೆ ಉತ್ತಮ ಆಲ್‌ರೌಂಡರ್ ಖರೀದಿಸಲು ಸನ್‌ರೈಸರ್ಸ್ ನಿರೀಕ್ಷೆಯಿದೆ.

Ind vs SA: ಕೆ.ಎಲ್ ರಾಹುಲ್ ಮತ್ತು ರಾಹುಲ್ ದ್ರಾವಿಡ್ ಮುಂದಿರುವ ಮೂರು ಸವಾಲುಗಳು

ಶ್ರೇಯಸ್ ಗೋಪಾಲ್

ಶ್ರೇಯಸ್ ಗೋಪಾಲ್

ಸನ್ ರೈಸರ್ಸ್ ತಂಡವು ಶ್ರೇಯಸ್ ಗೋಪಾಲ್ ಅವರನ್ನು ಸ್ಪೆಷಲಿಸ್ಟ್ ಸ್ಪಿನ್ ಆಲ್ ರೌಂಡರ್ ಆಗಿ ನೇಮಿಸಿಕೊಂಡಿದೆ. ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಮತ್ತು ಜಗದೀಶ್ ಸುಚಿತ್ ಆಯ್ಕೆಯಾಗಿದ್ದಾರೆ. ಕೇವಲ ಒಂದು ಪಂದ್ಯವನ್ನಾಡಿದ ಶ್ರೇಯಸ್ ಗೋಪಾಲ್ 11.33ರ ಎಕಾನಮಿಯೊಂದಿಗೆ 34 ರನ್ ನೀಡಿದರು, ಗಳಿಸಿದ್ದು ಒಂದು ವಿಕೆಟ್.

ಕೇವಲ 9 ರನ್ ಗಳಿಸಿ ಬ್ಯಾಟಿಂಗ್ ಮಾಡುವಲ್ಲಿಯೂ ಶ್ರೇಯಸ್ ವಿಫಲರಾದರು. ಸನ್ ರೈಸರ್ಸ್ ಇದೇ ಕ್ರಮಾಂಕದಲ್ಲಿ ಶ್ರೇಯಸ್ ಅವರನ್ನು ತಂಡದಿಂದ ಬಿಟ್ಟು ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವಿರುವ ಭಾರತದ ಆಲ್ ರೌಂಡರ್ ರನ್ನು ನೇಮಿಸಿಕೊಳ್ಳುವ ಭರವಸೆ ಇದೆ.

ಶೇನ್ ವಾರ್ನ್ ಎಸೆದಿದ್ದ ಬಾಲ್ ಆಫ್ ದಿ ಸೆಂಚುರಿಯನ್ನು ಸ್ಮರಿಸಿದ ICC | #Cricket | OneIndia Kannada
ಅಬ್ದುಲ್ ಸಮದ್

ಅಬ್ದುಲ್ ಸಮದ್

ವಿಧ್ವಂಸಕ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಅವರನ್ನು ಬಿಡುಗಡೆ ಮಾಡಲು ಸನ್‌ರೈಸರ್ಸ್ ಯೋಜಿಸುತ್ತಿದೆ. ಈ ಯುವ ಹಿಟ್ಟರ್‌ನಲ್ಲಿ ಹೆಚ್ಚಿನ ನಂಬಿಕೆ ಇರಿಸಿದರೂ ಮತ್ತು ಅವರಿಗೆ ಸರಣಿ ಅವಕಾಶಗಳನ್ನು ನೀಡಿದರೂ, ಅವರು ಪಂದ್ಯ ವಿಜೇತ ಇನ್ನಿಂಗ್ಸ್‌ಗಳನ್ನು ಆಡಲು ವಿಫಲರಾದರು. ಐಪಿಎಲ್ 2022 ರ ಮೆಗಾ ಹರಾಜಿಗೂ ಮುನ್ನ ಈ ಯುವ ಹಿಟ್ಟರ್ ಅನ್ನು ಉಳಿಸಿಕೊಳ್ಳುವ ಹೆಚ್ಚಿನ ಭರವಸೆಯನ್ನು ಸನ್‌ರೈಸರ್ಸ್ ಹೊಂದಿತ್ತು.

ಆದ್ರೆ ಈ ಸೀಸನ್‌ನಲ್ಲಿ ಆತ ವಿಫಲರಾಗಿದ್ದು, ಸತತ ಎರಡು ಪಂದ್ಯಗಳಲ್ಲಿ ಅವಕಾಶ ನೀಡಿ ನಂತರ ಬದಿಗಿಟ್ಟಿತು. ಕಾಂಬಿನೇಷನ್ ಸೆಟ್ ಆಗಿದ್ದರಿಂದ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿಲ್ಲ. ಈ ಕ್ರಮದಲ್ಲಿ ಅವರಿಗೆ ಅವಕಾಶ ನೀಡುವುದು ಉತ್ತಮ ಎಂದು ಸನ್‌ರೈಸರ್ಸ್ ಭಾವಿಸಿದೆ.

Story first published: Friday, June 3, 2022, 22:33 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X