3 ವರ್ಷದ ಶಿಕ್ಷೆ ಕಠಿಣ, ಉಮರ್ ಇದನ್ನು ಪ್ರಶ್ನಿಸಲಿದ್ದಾನೆ: ಕಮ್ರಾಮ್ ಅಕ್ಮಲ್

ಬುಕ್ಕಿಗಳ ಸಂಪರ್ಕವನ್ನು ವರದಿ ಮಾಡದ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ 3 ವರ್ಷದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಉಮರ್ ಅಕ್ಮಲ್ ಸೋದರ ಕಮ್ರಾನ್ ಅಕ್ಮಲ್ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ವರ್ಷದ ಶಿಕ್ಷೆ ಅತ್ಯಂತ ಕಠಿಣ ಶಿಕ್ಷೆಯಾಗಿದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಉಮರ್ ಅಕ್ಮಲ್‌ಗೆ ಮೂರು ವರ್ಷದ ನಿಷೇಧ ಶಿಕ್ಷೆಯನ್ನು ನೀಡಿದ್ದು ಅತ್ಯಂತ ಕಠಿಣ ಶಿಕ್ಷೆಯಾಗಿದೆ. ಇದನ್ನು ಉಮರ್ ಅಕ್ಮಲ್ ಪ್ರಶ್ನಿಸಲಿದ್ದಾನೆ ಎಂದು ಉಮರ್ ಸೋದರ ಕಮ್ರಾನ್ ಅಕ್ಮಲ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಶಿಕ್ಷೆಯನ್ನು ಪ್ರಕಟಿಸಿದ ಬಳಿಕ ಹೇಳಿಕೆಯನ್ನು ನೀಡಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆ

ಪಿಸಿಬಿ ಪ್ರಕಟಿಸಿದ ನಿರ್ಧಾರದ ಬಳಿಕ ಕಮ್ರಾನ್ ಪ್ರತಿಕ್ರಿಯಿಸಿದರು. 'ಈ ಕಠಿಣ ಶಿಕ್ಷೆ ನನಗೆ ಸಾಕಷ್ಟು ಆಶ್ಚರ್ಯವನ್ನುಂಟು ಮಾಡುತ್ತಿದೆ, ಉಮರ್ ಅಕ್ಮಲ್ ಸಾಧ್ಯವಿರುವ ಎಲ್ಲಾ ವೇದಿಕೆಯಲ್ಲೂ ಈ ಶಿಕ್ಷೆಯ ವಿರುದ್ಧ ಮನವಿಯನ್ನು ಮಾಡಲಿದ್ದಾನೆ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.

ಇದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ, ಇದೇ ರೀತಿಯ ಪ್ರಕರಣದಲ್ಲಿ ಬೇರೆ ಆಟಗಾರರಿಗೆ ಕಿರು ಅವಧಿಯ ಶಿಕ್ಷೆಯನ್ನು ನೀಡಲಾಗಿದೆ ಎಂದು ಕಮ್ರಾನ್ ಅಕ್ಮಲ್ ಮೊಹಮದ್ ಇರ್ಫಾನ್ ಮತ್ತು ಮೊಹಮದ್ ನವಾಜ್ ಪ್ರಕರಣವನ್ನು ಪ್ರಸ್ತಾಪ ಮಾಡಿದರು ಕಮ್ರಾನ್ ಅಕ್ಮಲ್.

2010ರಲ್ಲಿ ಸಿಎಸ್‌ಕೆ ತನ್ನನ್ನು ಡ್ರಾಪ್ ಮಾಡಿದ್ದಕ್ಕೆ ಕಾರಣ ಹೇಳಿದ ಅಶ್ವಿನ್2010ರಲ್ಲಿ ಸಿಎಸ್‌ಕೆ ತನ್ನನ್ನು ಡ್ರಾಪ್ ಮಾಡಿದ್ದಕ್ಕೆ ಕಾರಣ ಹೇಳಿದ ಅಶ್ವಿನ್

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಫಿಕ್ಸಿಂಗ್ ಮಾಡಿಕೊಳ್ಳುವ ಕಾರಣಕ್ಕೆ ಎರಡು ಬಾರಿ ಬುಕ್ಕಿಗಳು ಉಮರ್ ಅಕ್ಮಲ್ ಅವರನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ವರದಿ ಮಾಡದ ಕಾರಣಕ್ಕೆ ಸ್ಪಷ್ಟನೆಯನ್ನು ನೀಡುವಂತೆ ನೋಟೀಸ್ ನೀಡಲಾಗಿತ್ತು ಮತ್ತು ತಕ್ಷಣವೇ ಅಮಾನತು ಮಾಡಲಾಗಿತ್ತು. ಈ ನೋಟಿಸ್‌ಗೆ ಸಮರ್ಪಕ ಉತ್ತರ ಬಾರದ ಕಾರಣ ಪ್ರಕರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಕಮ್ರಾನ್ ವಿರುದ್ಧ ಪಿಸಿಬಿ ಕ್ರಮವನ್ನು ಕೈಗೊಂಡಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 28, 2020, 12:56 [IST]
Other articles published on Apr 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X