ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಕೈ ಚೆಲ್ಲಿರುವ ಟಾಪ್ 4 ಆಟಗಾರರು

Top 4 Fielders Who Dropped Most Catches In IPL History

ಐಪಿಎಲ್ 14 ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಏಪ್ರಿಲ್ 9 ರಂದು ಮೊದಲನೇ ಪಂದ್ಯ ನಡೆಯಲಿದ್ದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಾಡಲಿವೆ. ಐಪಿಎಲ್ ನಲ್ಲಿ ಹೊಸ ಹೊಸ ದಾಖಲೆಗಳನ್ನು ನಿರ್ಮಿಸುವ ಆಟಗಾರರು ಕೆಟ್ಟ ದಾಖಲೆಗಳನ್ನೂ ಸಹ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅದರಲ್ಲಿ ಅತಿ ಹೆಚ್ಚು ಬಾರಿ ಕ್ಯಾಚ್ ಗಳನ್ನು ಕೈ ಚೆಲ್ಲಿರುವ ಕೆಟ್ಟ ದಾಖಲೆಯೂ ಸಹ ಒಂದು.

ಕಳೆದ 13 ಐಪಿಎಲ್ ಸೀಸನ್ ಗಳಲ್ಲಿ ಅತಿ ಹೆಚ್ಚು ಬಾರಿ ಕ್ಯಾಚನ್ನು ಕೈಚೆಲ್ಲಿರುವ ಟಾಪ್ 4 ಆಟಗಾರರ ಪಟ್ಟಿ ಮುಂದೆ ಇದೆ ಓದಿ.

ಟಾಪ್ 1 : ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ಅತ್ಯದ್ಭುತ ಫೀಲ್ಡರ್ ಆದರೆ ಅವರು ಇಡೀ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಕ್ಯಾಚ್ ಗಳನ್ನು ಕೈಚೆಲ್ಲಿದ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದುವರೆಗೂ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅವರು ಕೈಚೆಲ್ಲಿರುವ ಕ್ಯಾಚ್ ಗಳ ಸಂಖ್ಯೆ 15.

ಟಾಪ್ 2 : ರವೀಂದ್ರ ಜಡೇಜಾ
ಪ್ರಸ್ತುತ ಟೀಮ್ ಇಂಡಿಯಾದಲ್ಲಿರುವ ಆಟಗಾರರ ಪೈಕಿ ಅತ್ಯುತ್ತಮ ಫೀಲ್ಡರ್ ಯಾರು ಎಂದರೆ ಎಲ್ಲರ ಬಾಯಲ್ಲೂ ಬರುವುದು ಒಂದೇ ಉತ್ತರ ಅದು ರವೀಂದ್ರ ಜಡೇಜಾ. ಅಂತಹ ಕೀರ್ತಿಗೆ ಪಾತ್ರರಾಗಿರುವ ಜಡೇಜಾ ಅವರು ಐಪಿಎಲ್ ನಲ್ಲಿ ಅತಿ ಹೆಚ್ಚು ಕ್ಯಾಚ್ ಕೈಚೆಲ್ಲಿದ ಎರಡನೇ ಆಟಗಾರ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಇದುವರೆಗೂ ಐಪಿಎಲ್ ನಲ್ಲಿ ರವೀಂದ್ರ ಜಡೇಜಾ ಅವರು ಕೈಚೆಲ್ಲಿರುವ ಕ್ಯಾಚ್ ಗಳ ಸಂಖ್ಯೆ 14.

ಟಾಪ್ 3 : ರಾಬಿನ್ ಉತ್ತಪ್ಪ
ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ರಾಬಿನ್ ಉತ್ತಪ್ಪ ಅವರು ಸಹ ಅತಿ ಹೆಚ್ಚು ಕ್ಯಾಚ್ ಬಿಟ್ಟಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ. ವಿಕೆಟ್ ಕೀಪರ್ ಕೂಡ ಆಗಿರುವ ರಾಬಿನ್ ಉತ್ತಪ್ಪ ಅವರು ಇದುವರೆಗೂ ಐಪಿಎಲ್ ನಲ್ಲಿ ಕೈಚೆಲ್ಲಿರುವ ಕ್ಯಾಚ್ ಗಳ ಸಂಖ್ಯೆ 12.

ಟಾಪ್ 4 : ಹರ್ಭಜನ್ ಸಿಂಗ್
ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯಲಿರುವ ಹರ್ಭಜನ್ ಸಿಂಗ್ ಅವರು ಇಲ್ಲಿಯವರೆಗೂ ಐಪಿಎಲ್ ನಲ್ಲಿ ಒಟ್ಟು 12 ಕ್ಯಾಚ್ ಗಳನ್ನು ಕೈ ಚೆಲ್ಲಿದ್ದಾರೆ.

Story first published: Saturday, March 13, 2021, 15:45 [IST]
Other articles published on Mar 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X