ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ ಎಸೆತದಲ್ಲಿ ಸಿಕ್ಸರ್: ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಟ್ರೆಂಟ್‌ ಬೋಲ್ಟ್‌

Trent boult

ನ್ಯೂಜಿಲೆಂಡ್‌ನ ಅನುಭವಿ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ತಂಡದ ಗೆಲುವಿನಲ್ಲಿ ಗಮನಾರ್ಹ ಕೊಡುಗೆ ನೀಡುತ್ತಾ ಬಂದಿದ್ದಾರೆ. ಆದ್ರೆ ಬೋಲ್ಟ್ ಇದುವರೆಗೂ ಬ್ಯಾಟಿಂಗ್‌ನಲ್ಲಿ ಅಂತಹ ದೊಡ್ಡ ಮಟ್ಟಿನ ಪ್ರದರ್ಶನವನ್ನ ನೀಡಿಲ್ಲ. ಇವರು ತಮ್ಮ ವೃತ್ತಿಜೀವನದಲ್ಲಿ ಒಂದು ಅರ್ಧಶತಕಗಳಿಸಿರೋದೆ ಹೆಚ್ಚು.

ಆದ್ರೆ ಗುರುವಾರ (ಡಿ. 26) ನಡೆದ ಸೂಪರ್‌ ಸ್ಮ್ಯಾಶ್‌ ಲೀಗ್‌ನಲ್ಲಿ ಬೊಂಬಾಟ್ ಪ್ರದರ್ಶನ ನೀಡುವ ಮೂಲಕ ಬ್ಯಾಟ್ಸ್‌ಮನ್‌ಗಳೇ ನಾಚುವಂತೆ ಬ್ಯಾಟ್ ಬೀಸಿದ್ದಾರೆ.

ದ.ಆಫ್ರಿಕಾ ವಿರುದ್ಧದ ಸರಣಿಗೆ ಮುನ್ನ ಟೀಮ್ ಇಂಡಿಯಾಗೆ ಅಮೂಲ್ಯ ಸಲಹೆ ನೀಡಿದ ವಾಸಿಂ ಜಾಫರ್ದ.ಆಫ್ರಿಕಾ ವಿರುದ್ಧದ ಸರಣಿಗೆ ಮುನ್ನ ಟೀಮ್ ಇಂಡಿಯಾಗೆ ಅಮೂಲ್ಯ ಸಲಹೆ ನೀಡಿದ ವಾಸಿಂ ಜಾಫರ್

ಸೂಪರ್ ಸ್ಮ್ಯಾಶ್ ಲೀಗ್‌ನಲ್ಲಿ ನಾರ್ತನ್ ಬ್ರೇವ್ ಪರ ಆಡುವ ಬೋಲ್ಟ್‌ ಸೂಪರ್ ಸ್ಮ್ಯಾಶ್‌ನ 1 ನೇ ಪಂದ್ಯದಲ್ಲಿ ಕ್ಯಾಂಟರ್ಬರಿ ಕಿಂಗ್ಸ್ ವಿರುದ್ಧ ಈ ಸೂಪರ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಗೆಲುವಿಗೆ ಕೊನೆಯ ಎಸೆತದಲ್ಲಿ ಆರು ರನ್‌ಗಳ ಅವಶ್ಯಕತೆಯಿತ್ತು. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ರೀತಿಯಲ್ಲಿ ಹಿಂಜರಿಯದೆ ಬ್ಯಾಟ್ ಬೀಸಿದ ಬೋಲ್ಟ್‌ ನಿರ್ಭಯವಾಗಿ ಕೊನೆಯ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಮೂಲಕ ಕ್ಯಾಂಟರ್ಬರಿ ಕಿಂಗ್ಸ್ ವಿರುದ್ಧ ನಾರ್ತನ್ ಬ್ರೇವ್ ಒಂದು ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಕೊನೆಯ ಓವರ್‌ನಲ್ಲಿ 7 ರನ್‌ಗಳ ಅಗತ್ಯವಿದ್ದು, ಒಂದೇ ಓವರ್‌ನಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಔಟಾಗಿ ಪೆವಿಲಿಯನ್‌ಗೆ ಬಂದಿದ್ದರಿಂದ ನಾರ್ತನ್ ಬ್ರೇವ್ ಗೆ ಪಂದ್ಯ ಗೆಲ್ಲುವುದು ಕಷ್ಟಕರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೊನೆಯ ಎಸೆತದಲ್ಲಿ 6 ರನ್‌ಗಳ ಅಗತ್ಯವಿತ್ತು. ಆದರೆ ಬೌಲ್ಟ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಕ್ಯಾಂಟರ್ಬರಿ ತಂಡದ ಗೆಲುವಿನ ನಿರೀಕ್ಷೆಯನ್ನು ಹುಸಿಗೊಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕ್ಯಾಂಟರ್ಬರಿ 17.2 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟ್ ಆಯಿತು. ನಾರ್ದರ್ನ್ ಡಿಸ್ಟ್ರಿಕ್ಟ್‌ಗಳಿಗೆ ಗುರಿ ದೊಡ್ಡದಾಗಿರಲಿಲ್ಲ, ಆದರೂ ಆದರೆ ಎದುರಾಳಿಯ ಅದ್ಭುತ ಬೌಲಿಂಗ್‌ಗೆ ಪೆವಿಲಿಯನ್ ಪರೇಡ್ ನಡೆಸಿತು. ಹೀಗಾಗಿ ಪಂದ್ಯ ಕೊನೆಯ ಓವರ್‌ವರೆಗೂ ಸಾಗಿತು. ಕ್ಯಾಂಟರ್ಬರಿಯ ಎಡ್ ನಟ್ಟಲ್ ಕೊನೆಯ ಓವರ್‌ನಲ್ಲಿ ಬೌಲ್ ಮಾಡಲು ಬಂದರು. ನಟಾಲ್ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರು.

ಅನುರಾಗ್ ವರ್ಮಾ ಮತ್ತು ಇಶ್ ಸೋಧಿ ಮೊದಲ ಎರಡು ಎಸೆತದಲ್ಲಿ ಬಲಿಯಾದರು. ನಾಲ್ಕನೇ ಎಸೆತದಲ್ಲಿ ಜೋ ವಾಕರ್ ಕೂಡ ಖಾತೆ ತೆರೆಯದೆ ಔಟಾದರು. ಆದರೆ ಕೊನೆಯ ಎಸೆತದಲ್ಲಿ ಬೌಲ್ಟ್ ಅದ್ಭುತ ಪ್ರದರ್ಶನ ನೀಡಿದರು. ಟ್ರೆಂಟ್ ಬೌಲ್ಟ್ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿದ್ರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಅಜೇಯ 7 ರನ್ ಗಳಿಸಿದರು. ಅವರು ಬ್ಯಾಟಿಂಗ್ ಮಾಡುವ ಮೊದಲು ಬೌಲಿಂಗ್‌ನಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು.

ರೋಹಿತ್‌ ಶರ್ಮಾ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ: ಟ್ರೆಂಟ್‌ಬೌಲ್ಟ್‌

ಮುಂಬೈ ಇಂಡಿಯನ್ಸ್‌ನ ಮಾಜಿ ಆಟಗಾರ ಮತ್ತು ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್, ರೋಹಿತ್ ನಾಯಕತ್ವದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆ ಎಂದು ನಂಬಿದ್ದಾರೆ. ಬೌಲ್ಟ್ ಅವರು 2020 ರಿಂದ ದೆಹಲಿ ಕ್ಯಾಪಿಟಲ್ಸ್‌ನಿಂದ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ್ರು. ಬೌಲ್ಟ್ ಈ ವೇಳೆಯಲ್ಲಿ ರೋಹಿತ್ ಅವರ ಕುರಿತು ಗಮನಿಸಿದ್ದು, ಅವರ ಬಗ್ಗೆ ಸಾಕಷ್ಟು ಅರ್ಥಮಾಡಿಕೊಂಡಿದ್ದೇನೆ ಎಂದಿದ್ದಾರೆ.

"ರೋಹಿತ್ ತುಂಬಾ ಅನುಭವಿ ಆಟಗಾರ. ಅವರು ಭಾರತ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ನೋಡಲು ರೋಮಾಂಚನವಾಗುತ್ತದೆ. ಮುಂಬೈ ಇಂಡಿಯನ್ಸ್‌ನಲ್ಲಿ ಅವರ ನಾಯಕತ್ವದಲ್ಲಿ ಆಡುವುದನ್ನು ನಾನು ಆನಂದಿಸಿದೆ. ಅವರ ನಾಯಕತ್ವ, ಅವರ ತಂತ್ರಗಳನ್ನು ಬೌಂಡರಿ ಲೈನ್ ಬಳಿಕ ಫೀಲ್ಡಂಗ್‌ಗೆ ನಿಂತಾಗ ಗಮನಿಸುತ್ತಿದ್ದೆ. ಅವರು ಭಾರತಕ್ಕೆ ಅತ್ಯಂತ ಯಶಸ್ವಿ ಆಟಗಾರರಾಗಿದ್ದು, ಅವರ ನಾಯಕತ್ವದಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ, "ಎಂದು ಬೌಲ್ಟ್ ಹೇಳಿದ್ದಾರೆ.

Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada

ರೋಹಿತ್ ಶರ್ಮಾ ಒತ್ತಡವನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕಂತೆ ಕಾರ್ಯತಂತ್ರವನ್ನು ರೂಪಿಸುವ ವಿಧಾನವನ್ನ ಅರಿತಿದ್ದಾರೆ ಎಂದು ಬೋಲ್ಟ್ ಮಾತು ಸೇರಿಸಿದ್ದಾರೆ.

Story first published: Friday, December 24, 2021, 19:34 [IST]
Other articles published on Dec 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X