ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ -19 ವಿಶ್ವಕಪ್: ಸಂಪೂರ್ಣ ವೇಳಾಪಟ್ಟಿ, ಮಾಹಿತಿ

 Under 19 Cricket World Cup 2020: Complete time table

ಅಂಡರ್-19 ವಿಶ್ವಕಪ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಈ ಮಹತ್ವದ ಟೂರ್ನಿಯ ಮೇಲೆ ಎಲ್ಲರ ಕಣ್ಣೂ ನೆಟ್ಟಿದೆ. ಜ್ಯೂನಿಯರ್ ಕ್ರಿಕೆಟ್‌ನ ಅತಿ ದೊಡ್ಡ ಟೂರ್ನಿಯಾಗಿರುವ ಈ ವಿಶ್ವಕಪ್‌ಅನ್ನು ದಕ್ಷಿಣ ಆಫ್ರಿಕಾ ಎರಡನೇ ಬಾರಿಗೆ ಆತಿಥ್ಯವಹಿಸುತ್ತಿದೆ.

ಹಾಲಿ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ಈ ಬಾರಿಯೂ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು ಪ್ರಶಸ್ತಿ ಗೆಲ್ಲುವ ಫೇವರೀಟ್ ತಂಡವಾಗಿದೆ. ನಾಲ್ಕು ಬಾರಿಯ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾವನ್ನು ಈ ಬಾರಿ ಪ್ರಿಯಮ್ ಗಾರ್ಗ್ ಮುನ್ನಡೆಸುತ್ತಿದ್ದು ತಂಡದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ವಿರಾಟ್ ಕೊಹ್ಲಿ ದಾಖಲೆ: 1000ದ ಸರದಾರನಾದ ಟೀಮ್ ಇಂಡಿಯಾ ನಾಯಕವಿರಾಟ್ ಕೊಹ್ಲಿ ದಾಖಲೆ: 1000ದ ಸರದಾರನಾದ ಟೀಮ್ ಇಂಡಿಯಾ ನಾಯಕ

ಟೀಮ್ ಇಂಡಿಯಾ 2000, 2008, 2012, 2018 ರಲ್ಲಿ ವಿಶ್ವಕಪ್ ಗೆದ್ದು ಅತಿ ಹೆಚ್ಚು ಬಾರಿ ಅಂಡರ್‌-19 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಮೊಹಮದ್ ಕೈಫ್, ವಿರಾಟ್ ಕೊಹ್ಲಿ, ಉನ್ಮುಕ್ತ್ ಚಾಂದ್ ಮತ್ತು ಪೃಥ್ವಿ ಶಾ ಟೀಮ್ ಇಂಡಿಯಾ ಅಂಡರ್-19 ವಿಶ್ವಕಪ್ ಗೆದ್ದಿರುವ ತಂಡದ ನಾಯಕರಾಗಿದ್ದಾರೆ.

ಟೂರ್ನಿಯ ಆರಂಭ ಮತ್ತು ಪ್ರತಿ ಪಂದ್ಯ ನಡೆಯುವ ಸಮಯ

ಟೂರ್ನಿಯ ಆರಂಭ ಮತ್ತು ಪ್ರತಿ ಪಂದ್ಯ ನಡೆಯುವ ಸಮಯ

ಐಸಿಸಿ ಅಂಡರ್ 19 ವಿಶ್ವಕಪ್ 17ನೇ ತಾರೀಕಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮತ್ತು ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆಯಲಿದೆ. ಪ್ರತಿ ಟೂರ್ನಿಯ ಪ್ರತೀ ಪಂದ್ಯವೂ ದಕ್ಷಿಣ ಆಫ್ರಿಕಾದ ಸ್ಥಳೀಯ ಕಾಲಮಾನ ಮುಂಜಾನೆ 10 ಗಂಟೆಗೆ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30 ಕ್ಕೆ ಪಂದ್ಯ ಆರಂಭವಾಗಲಿದೆ.

ತಂಡಗಳು ಮತ್ತು ಗ್ರೂಫ್

ತಂಡಗಳು ಮತ್ತು ಗ್ರೂಫ್

ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗಿಯಾಗುತ್ತಿದೆ. ಹೀಗಾಗಿ ನಾಲ್ಕು ವಿಭಾಗಗಳಾಗಿ ತಂಡಗಳನ್ನು ವಿಭಜಿಸಲಾಗಿದೆ.

ಗ್ರೂಪ್ 'ಎ': ಭಾರತ, ಜಪಾನ್, ನ್ಯೂಜಿಲೆಂಡ್, ಶ್ರೀಲಂಕಾ

ಗ್ರೂಪ್ 'ಬಿ': ಆಸ್ಟ್ರೇಲಿಯಾ, ಇಂಗ್ಲೆಂಡ್, ನೈಜೀರಿಯಾ, ವೆಸ್ಟ್ ಇಂಡೀಸ್

ಗ್ರೂಪ್ 'ಸಿ': ಬಾಂಗ್ಲಾದೇಶ, ಪಾಕಿಸ್ತಾನ, ಸ್ಕಾಟ್ಲೆಂಡ್, ಜಿಂಬಾಬ್ವೆ

ಗ್ರೂಪ್ 'ಡಿ': ಅಫ್ಘಾನಿಸ್ತಾನ, ಕೆನಡಾ, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್

ಹರ್ಭಜನ್ ಸಿಂಗ್ ಮಿಮಿಕ್ರಿ ಮಾಡಿ ಕಾಲೆಳೆದ ವಿರಾಟ್ ಕೊಹ್ಲಿ: ವೀಡಿಯೋ

ಎಲ್ಲೆಲ್ಲಿ ನಡೆಯುತ್ತಿದೆ ಪಂದ್ಯಗಳು

ಎಲ್ಲೆಲ್ಲಿ ನಡೆಯುತ್ತಿದೆ ಪಂದ್ಯಗಳು

ಅಂಡರ್-19 ವಿಶ್ವಕಪ್‌ಅನ್ನು ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಆಯೋಜನೆ ಮಾಡುತ್ತಿದೆ. ಈ ಬಾರಿ ಮೂರು ಭಿನ್ನ ತಾಣಗಳಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಕಿಂಬರ್ಲಿ, ಬ್ಲೂಮ್‌ಫಾಂಟೈನ್ ಮತ್ತು ಪೊಚೆಫ್‌ಸ್ಟ್ರೂಮ್ ನಲ್ಲಿ ಪಂದ್ಯ ಆಯೋಜನೆ ಮಾಡಲಾಗಿದೆ.

ನೇರ ಪ್ರಸಾರದ ತಾಣಗಳು

ನೇರ ಪ್ರಸಾರದ ತಾಣಗಳು

2020ರ ಅಂಡರ್-19 ವಿಶ್ವಕಪ್ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರವಾಗಲಿದೆ. ಸ್ಟಾರ್‌ಸ್ಪೋರ್ಟ್ಸ್ ಆ್ಯಂಡ್ರಾಯ್ಡ್ ಆ್ಯಪ್‌ನಲ್ಲೂ, ಹಾಟ್‌ಸ್ಟಾರ್‌ನಲ್ಲಿ ಪಂದ್ಯದ ನೇರ ಪ್ರಸಾವಾಗಲಿದೆ.

Story first published: Wednesday, January 8, 2020, 19:36 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X