ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಜಯ್ ಹಜಾರೆ ಟ್ರೋಫಿ: ಸ್ಫೋಟಕ ದ್ವಿಶತಕ ಚಚ್ಚಿದ ಸಂಜು ಸ್ಯಾಮ್ಸನ್!

Vijay Hazare Trophy: Sanju Samson hits double-century

ಬೆಂಗಳೂರು, ಅಕ್ಟೋಬರ್ 12: ಕೇರಳದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ವಿಜಯ್ ಹಜಾರೆ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆಲೂರಿನ ಕೆಎಸ್‌ಸಿಎ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಅಕ್ಟೋಬರ್ 12ರಂದು ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಸ್ಯಾಮ್ಸನ್ ಗಮನ ಸೆಳೆದರು.

ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!

ಕೇರಳ vs ಗೋವಾ ನಡುವಿನ ಎಲೈಟ್ ಗ್ರೂಪ್ 'ಎ' ಮತ್ತು 'ಬಿ' ಪಂದ್ಯದಲ್ಲಿ ಕೇರಳ ಪರ ಮೈದಾನಕ್ಕಿಳಿದಿದ್ದ ಸ್ಯಾಮ್ಸನ್ ಅಜೇಯ 212 ರನ್ ಬಾರಿಸಿದ್ದಾರೆ. ಸಂಜು ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇರಳ ಗರಿಷ್ಠ ರನ್ ಕಲೆ ಹಾಕಿದೆ.

ಪಿಚ್‌ನಲ್ಲಿ ಡ್ಯಾನ್ಸ್ ಮಾಡಿದ ರವೀಂದ್ರ ಜಡೇಜಾ: ವೈರಲ್ ವಿಡಿಯೋಪಿಚ್‌ನಲ್ಲಿ ಡ್ಯಾನ್ಸ್ ಮಾಡಿದ ರವೀಂದ್ರ ಜಡೇಜಾ: ವೈರಲ್ ವಿಡಿಯೋ

ಈ ಪಂದ್ಯದಲ್ಲಿನ ದ್ವಿಶತಕ ಸಾಧನೆ ಸಂಜು ಅವರನ್ನು ದಾಖಲೆ ಸಾಲಿನಲ್ಲಿ ತಂದು ನಿಲ್ಲಿಸಿದೆ.

ವೈಯಕ್ತಿಕ ಅತ್ಯಧಿಕ ರನ್

ವೈಯಕ್ತಿಕ ಅತ್ಯಧಿಕ ರನ್

ವಿಜಯ್ ಹಜಾರೆ ಟ್ರೋಫಿ ಟೋರ್ನಿ ಇತಿಹಾಸದಲ್ಲಿ ಸಂಜು ಬಾರಿಸಿದ 212 ರನ್ ಅತ್ಯಧಿಕ ವೈಯಕ್ತಿಕ ರನ್ ಆಗಿ ಗುರುತಿಸಿಕೊಂಡಿದೆ. ಸ್ಯಾಮ್ಸನ್ 212 ರನ್‌ಗೆ ಬಳಸಿಕೊಂಡಿದ್ದು 129 ಎಸೆತಗಳು. ಅಂದ್ಹಾಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೊದಲ ದ್ವಿಶತಕ ಬಾರಿಸಿದ್ದು ಉತ್ತರಖಂಡ ತಂಡದ ಕರಣ್‌ವೀರ್ ಕೌಸಾಲ್.

ಸಚಿನ್ ಶತಕದಾಟ

ಸಚಿನ್ ಶತಕದಾಟ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕೇರಳ, ರಾಬಿನ್ ಉತ್ತಪ್ಪ 10, ವಿಷ್ಣು ವಿನೋದ್ 7, ಸ್ಯಾಮ್ಸನ್ 212, ಸಚಿನ್ ಬೇಬಿ 127, ಮೊಹಮ್ಮದ್ ಅಝರುದ್ದೀನ್ 2 ರನ್‌ ಸೇರ್ಪಡೆಯೊಂದಿಗೆ 50 ಓವರ್‌ಗೆ 3 ವಿಕೆಟ್ ಕಳೆದು 377 ರನ್ ಬಾರಿಸಿದೆ.

ರೋಹಿತ್ 3 ಬಾರಿ ದ್ವಿಶತಕ

ರೋಹಿತ್ 3 ಬಾರಿ ದ್ವಿಶತಕ

ವಿಜಯ್ ಹಜಾರೆ ಟ್ರೋಫಿ ಅಥವಾ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಆಟಗಾರರ ಸಾಲಿನಲ್ಲಿ ಸಂಜು ಸ್ಯಾಮ್ಸನ್ 6ನೇ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 3 ಬಾರಿ ದ್ವಿಶತಕ ಬಾರಿಸಿದ್ದರು.

6ನೇ ಆಟಗಾರ ಸ್ಯಾಮ್ಸನ್

6ನೇ ಆಟಗಾರ ಸ್ಯಾಮ್ಸನ್

ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ (3 ಸಾರಿ), ಶಿಖರ್ ಧವನ್, ಕರಣ್ ಕೌಸಾಲ್, ಸಂಜು ಸ್ಯಾಮ್ಸನ್ ಇದ್ದಾರೆ.

Story first published: Saturday, October 12, 2019, 15:51 [IST]
Other articles published on Oct 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X