ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ತಂಡ ಸೇರಿದ ಕನ್ನಡಿಗ ವಿನಯ್ ಕುಮಾರ್!

Vinay Kumar named as talent scout team of Mumbai Indians
Vinay Kumar ಈಗ Mumbai indians ತಂಡದ ಪ್ರತಿಭೆ ಹೆಚ್ಚಿಸಿದ್ದಾರೆ | Oneindia Kannada

ಬೆಂಗಳೂರು: ಭಾರತ ತಂಡದ ಮತ್ತು ಕರ್ನಾಟಕ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನಯ್ ಕುಮಾರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (ಎಂಐ) ಸೇರಿಕೊಂಡಿದ್ದಾರೆ. ತಂಡದ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಅವರನ್ನು ಮುಂಬೈ ಗುರುವಾರ (ಜುಲೈ 29) ಹೆಸರಿಸಿದೆ. ಈ ಹಿಂದೆ ಮುಂಬೈ ಪರ ಆಡಿದ್ದ ವಿನಯ್ ಮತ್ತೆ ಅದೇ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!ಒಲಿಂಪಿಕ್ಸ್‌ನಲ್ಲಿ ಗೆದ್ದ ಪದಕಗಳನ್ನು ಅಥ್ಲೀಟ್‌ಗಳು ಕಚ್ಚೋದ್ಯಾಕೆ ಗೊತ್ತಾ?!

ಬೌಲಿಂಗ್ ಆಲ್ ರೌಂಡರ್ ಆಗಿದ್ದ ವಿಜಯ್ ಕುಮಾರ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 17 ವರ್ಷಗಳ ವೃತ್ತಿ ಬದುಕು ಕಂಡಿದ್ದರು. ಕರ್ನಾಟಕ ತಂಡದ ನಾಯಕರೂ ಆಗಿದ್ದ ವಿನಯ್, ಎರಡು ಬಾರಿ ರಣಜಿ ಟ್ರೋಫಿ ಕೂಡ ಗೆದ್ದಿದ್ದರು. 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಾಗ ಆ ತಂಡದಲ್ಲಿ ವಿನಯ್ ಕೂಡ ಇದ್ದರು.

2021ರಲ್ಲಿ ನಿವೃತ್ತಿ ಘೋಷಣೆ

2021ರಲ್ಲಿ ನಿವೃತ್ತಿ ಘೋಷಣೆ

2021ರಲ್ಲಿ ವಿನಯ್ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು. 37ರ ಹರೆಯದ ವಿಜಯ್ ಕುಮಾರ್ ಮುಂಬೈ ಇಂಡಿಯನ್ಸ್‌ನ ನಿರ್ವಹಣಾ ಮಂಡಳಿ ಮತ್ತು ಕೋಚಿಂಗ್ ವಿಭಾಗದ ಜೊತೆಗಿದ್ದು ತಂಡಕ್ಕೆ ಬಲ ತುಂಬಲಿದ್ದಾರೆ. ಎಂಐ ತಂಡದಲ್ಲಿ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಜೊತೆ ಪಾರ್ಥಿವ್ ಪಟೇಲ್ ಕೂಡ ಇರಲಿದ್ದಾರೆ.

ವಿನಯ್ ಕುಮಾರ್ ಪ್ರತಿಕ್ರಿಯೆ

ವಿನಯ್ ಕುಮಾರ್ ಪ್ರತಿಕ್ರಿಯೆ

ತಂಡದ ಟ್ಯಾಲೆಂಟ್ ಸ್ಕೌಟ್ ಆಗಿ ವಿನಯ್ ಆಯ್ಕೆಯಾಗಿರುವುದನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದೆ. "ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೇರಿಕೊಂಡಿರುವುದು ಖುಷಿಯಾಗಿದೆ," ಎಂದು ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸೆಪ್ಟೆಂಬರ್‌ 19ರಿಂದ ಐಪಿಎಲ್ ಆರಂಭ

ಸೆಪ್ಟೆಂಬರ್‌ 19ರಿಂದ ಐಪಿಎಲ್ ಆರಂಭ

ಕೋವಿಡ್-19 ಕಾರಣದಿಂದ ಅರ್ಧಕ್ಕೆ ನಿಲ್ಲಿಸಲ್ಪಟ್ಟ 2021ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಐಪಿಎಲ್ ದ್ವಿತೀಯ ಹಂತದ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ದ್ವಿತೀಯ ಹಂತದ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

Story first published: Thursday, July 29, 2021, 18:47 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X