ಈ ಸಲ ಕಪ್ ನಮ್ದೆ: ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ

Posted By:
Virat Kohli Confident that RCB will win the trophy this time

ಬೆಂಗಳೂರು, ಏಪ್ರಿಲ್ 04: ಕಳೆದ 10 ಐಪಿಎಲ್‌ ಸೀಸನ್‌ನಲ್ಲಿ ನಿರಾಸೆ ಅನುಭವಿಸಿರುವ ಆರ್‌ಸಿಬಿ ತಂಡ ಪ್ರತಿ ಬಾರಿಯಂತೆ ಈ ಬಾರಿಯೂ ಕಪ್ ಗೆಲ್ಲುವ ವಿಶ್ವಾಸದಿಂದ ಕಣಕ್ಕಳಿಯಲಿದೆ.

ಈಗಾಗಲೇ ಆರ್‌ಸಿಬಿ ಅಭಿಮಾನಿಗಳಿಗೆ ಕ್ರಿಕೆಟ್ ಜ್ವರ ಏರಿದ್ದು 'ಈ ಸಲ ಕಪ್ ನಮ್ದೆ' ಎಂಬ ಕೂಗುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಇದಕ್ಕೆ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೂಡಾ ಧನಿ ಗೂಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಈ ಬಾರಿ ಕಪ್ ಗೆಲ್ಲುವುದೇ ನನ್ನ ಗುರಿ' ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. 'ಈ ಸಲ ಕಪ್ ನಮ್ದೆ' ಎಂದು ಬೀಗುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ಕೊಹ್ಲಿ ಅವರ ಆತ್ಮವಿಶ್ವಾಸ ಗೆಲ್ಲುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಆರ್‌ಸಿಬಿಯ ಅಭಿಮಾನಿಗಳು ಐಪಿಎಲ್ ಕಪ್ ಗೆಲ್ಲಲು ಎಷ್ಟು ಕಾತರರಾಗಿದ್ದಾರೆಯೊ ಅವರಿಗಿಂತ ದುಪ್ಪಟ್ಟು ಕಾತರ, ನಿರೀಕ್ಷೆ ಮತ್ತು ಭರವಸೆ ನನಗಿಗೆ, ಈ ಬಾರಿ 120% ನಮ್ಮದೇ ಕಪ್ ಎಂದಿದ್ದಾರೆ ಕ್ಯಾಪ್ಟನ್ ಕೊಹ್ಲಿ.

ಇನ್ನು, ಆರ್‌ಸಿಬಿಯು ತನ್ನ ಅಭಿಮಾನಿಗಳನ್ನು ತಂಡದ ಸದಸ್ಯರೆಂದೇ ಪರಿಗಣಿಸಿರುವ ಕಾರಣ ಅವರಿಗೆಂದು ನಂ.12 ಸಂಖ್ಯೆಯ ಜರ್ಸಿಯನ್ನು ಬಿಡುಗಡೆ ಮಾಡಿದೆ. ಹಾಗೂ ಆ ಸಂಖ್ಯೆಯ ಜರ್ಸಿಯನ್ನು ಆರ್‌ಸಿಬಿಯ ಯಾವ ತಂಡದ್ ಆಟಗಾರನು ತೊಡುವುದಿಲ್ಲ, ಅದು ತಂಡದ 12ನೇ ಆಟಗಾರ ಎಂದೇ ಪರಿಗಣಿಸಲಾಗಿರುವ ಆರ್‌ಸಿಬಿ ಅಭಿಮಾನಿಗಳಿಗೆ ಮಾತ್ರ ಎಂದಿದ್ದಾರೆ ಕೊಹ್ಲಿ.

ಫ್ಯಾಂಟಸಿ ಲೀಗ್ ನಲ್ಲಿ ಆಡಲು ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, April 5, 2018, 13:45 [IST]
Other articles published on Apr 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ