ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 500 ರೂ. ದಂಡ ತೆತ್ತಿದ್ದೇಕೆ ಗೊತ್ತಾ?

Virat Kohli fined Rs 500 for washing car with drinking water

ಹೊಸದಿಲ್ಲಿ, ಜೂನ್‌ 07: ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅವರ ಕಾರನ್ನು ಮನೆ ಕೆಲಸದವ ಕುಡಿಯುವ ನೀರಿನಿಂದ ತೊಳೆದಿರುವುದು ತಿಳಿದು ಬಂದ ವಿಚಾರದಲ್ಲಿ ಗುರುಗ್ರಾಮದ ಮುನ್ಸಿಪಲ್‌ ಕಾರ್ಪೊರೇಷನ್‌ ಕೊಹ್ಲಿಗೆ 500 ರೂ. ದಂಡ ವಿಧಿಸಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಗುರುಗ್ರಾಮದ ಡಿಎಲ್‌ಎಫ್‌ ಫೇಸ್‌-1ನಲ್ಲಿರುವ ವಿರಾಟ್‌ ಕೊಹ್ಲಿ ಅವರ ನಿವಾಸದಲ್ಲಿ ಅರ್ಧ ಡಜನ್‌ಗೂ ಹೆಚ್ಚು ಕಾರುಗಳಿದ್ದು, ಮನೆ ಕೆಲಸದವರು ಕುಡಿಯುವ ನೀರು ಬಳಕೆ ಮಾಡಿ ಕಾರುಗಳನ್ನು ತೊಳೆಯಲಾತ್ತಿದ್ದು, ಸಾವಿರಾರು ಲೀಟರ್‌ ಕುಡಿಯುವ ನೀರು ಪೋಲಾಗುತ್ತಿದೆ. ಎಂದು ಪಕ್ಕದ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಮುನ್ಸಿಪಾಲ್‌ ಕಾರ್ಪೊರೇಷನ್‌ ಈ ಕ್ರಮ ಕೈಗೊಂಡಿದೆ.

ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!ಮೈದಾನಕ್ಕೆ ನುಗ್ಗಿದ ಸ್ಮಿಮ್‌ ಸೂಟ್‌ ಸುಂದರಿಗೆ 11 ಲಕ್ಷ ರೂ. ದಂಡ!

ಉತ್ತರ ಭಾರತದಲ್ಲಿ ಈ ಬಾರಿ ಒಣ ಹವೆ ಹೆಚ್ಚಿದ್ದು, ಕುಡಿಯುವ ನೀರಿನ ಕೊರೆತೆ ಹೆಚ್ಚಾಗಿದೆ. ಹೀಗಾಗಿ ಗುರುಗ್ರಾಮದ ಈ ಭಾಗದಲ್ಲಿ ಕುಡಿಯುವ ನೀರನ್ನು ಪೋಲು ಮಾಡುವವರ ವಿರುದ್ಧ ಅಲ್ಲಿನ ಮುನ್ಸಿಪಾಲ್‌ ಕಾರ್ಪೊರೇಷನ್ ಕಠಿಣ ಕ್ರಮ ಕೈಗೊಳ್ಳುತ್ತಿದೆ.

ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!

ವಿರಾಟ್‌ ಕೊಹ್ಲಿ ಸದ್ಯ ಇಂಗ್ಲೆಂಡ್‌ನಲ್ಲಿದ್ದು, 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಭಾರತ ತಂಡದ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್‌ಗಳ ಜಯ ದಾಖಲಿಸಿ ಶುಭಾರಂಭ ಮಾಡಿದ್ದು, ಜೂನ್‌ 9ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧ ಪೈಪೋಟಿ ನಡೆಸಲಿದೆ.

Story first published: Friday, June 7, 2019, 21:16 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X