ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನೀಶ್ ಪಾಂಡೆಗೆ ಸ್ಲೆಡ್ಜ್‌ ಮಾಡಿದ ಕೊಹ್ಲಿ: ಪಾಂಡೆ ಕೊಟ್ಟ ಉತ್ತರ ಏನ್ ಗೊತ್ತಾ?

virat pandey

ಅಬುಧಾಬಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋತಿದ್ದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಇದೇ ಪಂದ್ಯದಲ್ಲಿ ತನ್ನ ಟೀಮ್ ಇಂಡಿಯಾದ ಸಹ ಆಟಗಾರ, ಅಂಡರ್‌-19ನಿಂದಲೂ ಒಟ್ಟಿಗೆ ಆಡಿದ್ದ ಮನೀಶ್‌ ಪಾಂಡೆಗೆ , ಕೊಹ್ಲಿ ಸ್ಲೆಡ್ಜ್‌ ಮಾಡಿದ್ದು ನಿಮಗೆ ತಿಳಿದಿದೆಯೇ? ಬಹುತೇಕರಿಗೆ ಗೊತ್ತಿಲ್ಲ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಕೆಟ್ಟ ಆರಂಭವನ್ನು ಪಡೆಯಿತು. ಓಪನರ್ ಆಗಿ ಕಣಕ್ಕಿಳಿದಿದ್ದ ಕೊಹ್ಲಿ ಬೇಗನೆ ಔಟಾದ್ರೆ, ಟೂರ್ನಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ ಕಲೆಹಾಕಿರುವ ದೇವದತ್ ಪಡಿಕ್ಕಲ್ ಕೂಡ ಬಹುಮುಖ್ಯವಾದ ಪಂದ್ಯದಲ್ಲಿ ತಂಡಕ್ಕೆ ಆಧಾರವಾಗಲಿಲ್ಲ ಕೇವಲ ಒಂದು ರನ್‌ಗೆ ಪೆವಿಲಿಯನ್‌ ಸೇರಿಕೊಂಡ್ರು. ಆ್ಯರೋನ್ ಫಿಂಚ್ ಆಟವು 32 ರನ್‌ಗಳಿಗೆ ಮುಕ್ತಾಯವಾಯಿತು.

ಫಿಂಚ್ ಔಟಾದ ಬಳಿಕ ಕಣಕ್ಕಿಳಿದ ಮೋಯಿನ್ ಅಲಿ ಇನ್ನೇನು ರನ್‌ಗಳಿಸಬಹುದು ಅನ್ನೋದನ್ನು ಯೋಚಿಸುವ ಮೊದಲೇ ವಿಕೆಟ್ ಒಪ್ಪಿಸಿದ್ರು. ಶಬಾಜ್ ನದೀಮ್ ಓವರ್‌ನಲ್ಲಿ ಫ್ರೀ ಹಿಟ್‌ನಲ್ಲಿ ಮೋಹಿನ್ ಅಲಿ ರನ್‌ಔಟ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ಆರ್‌ಸಿಬಿ ಪರ ಏಕಾಂಗಿಯಾಗಿ ಹೋರಾಟ ನಡೆಸಿದ ಎಬಿಡಿ ವಿಲಿಯರ್ಸ್ ಕೊನೆಯ ಎರಡು ಓವರ್ ಇರುವಂತೆ 56ರನ್‌ಗೆ ಔಟಾಗಿದ್ದು ತಂಡಕ್ಕೆ ನುಂಗಲಾರದ ತುತ್ತಾಯಿತು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 131ರನ್ ಕಲೆಹಾಕಿತು.

ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವುದು ಪರಿಹಾರವಲ್ಲ: ವೀರೇಂದ್ರ ಸೆಹ್ವಾಗ್ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸುವುದು ಪರಿಹಾರವಲ್ಲ: ವೀರೇಂದ್ರ ಸೆಹ್ವಾಗ್

132ರನ್ ಗುರಿ ಬೆನ್ನತ್ತಿದ ಎಸ್‌ಆರ್‌ಹೆಚ್ ಕೂಡ ಮೊದಲ ಓವರ್‌ನಲ್ಲೇ ಗೋಸ್ವಾಮಿ ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್ ಕೂಡ 17ರನ್‌ಗೆ ಸಿರಾಜ್‌ಗೆ ಔಟಾದ್ರು.
ಮೂರನೇ ಓವರ್‌ನಲ್ಲಿ ಒನ್-ಡೌನ್ ಬ್ಯಾಟ್ಸ್‌ಮನ್‌ ಆಗಿ ಬಂದ ಆನ್-ಕ್ರೀಸ್ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ, ಸಿರಾಜ್ ಎಸೆದ ಎರಡನೇ ಎಸೆತದಲ್ಲಿ ಡಿಫೆನ್ಸ್ ಆಡಿದರು. ಚೆಂಡನ್ನು ಫೀಲ್ಡಿಂಗ್ ಮಾಡಿದ ವಿರಾಟ್ ಬ್ಯಾಟ್ಸ್‌ಮನ್‌ಗೆ ಕೆಟ್ಟ ಹೊಡೆತದಿಂದ ತಪ್ಪು ಮಾಡಲು ಪ್ರೇರೇಪಿಸಿದರು. ಮನೀಶ್ ಪಾಂಡೆಗೆ ಸ್ಲೆಡ್ಜ್ ಮಾಡಲು ಪ್ರಯತ್ನಿಸಿದರು.

ಸಿರಾಜ್‌ಗೆ ಚೆಂಡನ್ನು ಹಿಂತಿರುಗಿಸುವಾಗ, ಕೊಹ್ಲಿ, "ಆಜ್ ನಹಿ ಮಾರೆಗಾ ಶಾಟ್" ಚಲೋ ಎಂದು ಕೂಗಿದರು, ಇದರರ್ಥ "ಅವನು ಇಂದು ಯಾವುದೇ ಶಾಟ್ ಹೊಡೆಯುವುದಿಲ್ಲ" ನಡೆಯಿರಿ ಎಂದು ಕೊಹ್ಲಿ ಪಾಂಡೆಯನ್ನು ಕೆಣಕಿದರು.

ಇದರಿಂದ ಕುಪಿತಗೊಂಡ ಪಾಂಡೆ ನಂತರದ ಎಸೆತದಲ್ಲೇ ಸಿಕ್ಸರ್‌ ಬಾರಿಸುವ ಮೂಲಕ ವಿರಾಟ್‌ಗೆ ತಕ್ಕ ಉತ್ತರ ನೀಡಿದರು. ಆನಂತರ ವಿರಾಟ್, ಪಾಂಡೆಯನ್ನು ಕೆಣಕಲು ಹೋಗಲಿಲ್ಲ. ಆದರೂ ಮನೀಶ್ ಪಾಂಡೆ ಆಟ 24ರನ್‌ಗೆ ಮುಕ್ತಾಯವಾಯಿತು. ನಂತರ ಕಣಕ್ಕಿಳಿದ ಕೇನ್ ವಿಲಿಯಮ್ಸನ್ ತನ್ನ ತಾಳ್ಮೆಯ ಆಟದೊಂದಿಗೆ ಅಜೇಯ 50 ರನ್‌ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

Story first published: Saturday, November 7, 2020, 20:34 [IST]
Other articles published on Nov 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X