ಈ ವಿಶೇಷ ದಾಖಲೆಗಳಲ್ಲಿ ಸಚಿನ್, ಧೋನಿಗಿಂತ ವಿರಾಟ್ ಕೊಹ್ಲಿಯೇ ನಂಬರ್ ಒನ್!

ಕ್ರಿಕೆಟ್ ಜಗತ್ತಿನಲ್ಲಿ ಕಿಂಗ್ ಎಂದೇ ಹೆಸರು ಮಾಡಿರುವ ವಿರಾಟ್ ಕೊಹ್ಲಿ ಅವರಿಗೆ ಇಂದು ( ನವೆಂಬರ್‌ 5 ) ಜನ್ಮದಿನದ ಸಂಭ್ರಮ. ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ಯುವತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಯೋಜನೆಯಂತೆ ಯಾವುದೂ ನಡೆಯುತ್ತಿಲ್ಲ ಎಂಬುದು ಸತ್ಯ. ಮೊದಲಿಗೆ ಪಾಕಿಸ್ತಾನ ವಿರುದ್ಧ ಸೋತ ಟೀಮ್ ಇಂಡಿಯಾ ನಂತರ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಕೂಡ ಸೋಲನ್ನು ಅನುಭವಿಸುವುದರ ಮೂಲಕ ಇದೀಗ ಸೆಮಿಫೈನಲ್ ಹಂತ ಪ್ರವೇಶಿಸುವಲ್ಲಿ ಮುಗ್ಗರಿಸುವ ಹಂತದಲ್ಲಿದೆ.

ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಆಟಗಾರರ ತಂಡ ಪ್ರಕಟಿಸಿದ ನ್ಯೂಜಿಲೆಂಡ್‌; ಬಲಿಷ್ಠರಿಗೇ ಸ್ಥಾನವಿಲ್ಲ!ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಆಟಗಾರರ ತಂಡ ಪ್ರಕಟಿಸಿದ ನ್ಯೂಜಿಲೆಂಡ್‌; ಬಲಿಷ್ಠರಿಗೇ ಸ್ಥಾನವಿಲ್ಲ!

ಹೀಗೆ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ ಎಂದು ಹಲವಾರು ಟೀಕೆಗಳು ಮತ್ತು ಟ್ರೋಲ್ಸ್ ವಿರಾಟ್ ಕೊಹ್ಲಿ ವಿರುದ್ಧ ಕೇಳಿಬರುತ್ತಿವೆ. ಆದರೆ ವಿರಾಟ್ ಕೊಹ್ಲಿ ಸ್ವತಃ ಈ ಹಿಂದೆ ನಡೆದಿದ್ದ ಒಂದು ಸಂದರ್ಶನದಲ್ಲಿ ಹೇಳಿಕೊಂಡಿರುವ ಹಾಗೆ ಅವರು ಯಾವುದೇ ಟೀಕೆಗಳಿಗೆ ಕಿವಿಗೊಡುವುದಿಲ್ಲ. ಹೌದು, ವಿರಾಟ್ ಕೊಹ್ಲಿ ತಮ್ಮನ್ನು ಟೀಕಿಸುವವರ ಕುರಿತು ಎಲ್ಲಿಯೂ ತುಟಿ ಬಿಚ್ಚಿ ಮಾತನಾಡುವುದಿಲ್ಲ ಬದಲಾಗಿ ತಮ್ಮ ಬ್ಯಾಟ್ ಮೂಲಕ ಉತ್ತರ ನೀಡುವ ಸ್ವಭಾವ ಕೊಹ್ಲಿಯದ್ದು. ಹೀಗೆ ತಮ್ಮ ಬ್ಯಾಟಿಂಗ್ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವುದು ಮಾತ್ರವಲ್ಲದೇ ಮುರಿಯಲು ತೀರಾ ಕಷ್ಟ ಪಡಬೇಕಾದಂತ ಹಲವಾರು ದಾಖಲೆಗಳನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ.

ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ಹೀಗೆ ವಿರಾಟ್ ಕೊಹ್ಲಿ ನಿರ್ಮಿಸಿರುವ ಹಲವಾರು ದಾಖಲೆಗಳಲ್ಲಿ ಕೆಲವೊಂದಷ್ಟು ವಿಶೇಷ ದಾಖಲೆಗಳಿದ್ದು, ಆ ದಾಖಲೆಗಳಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿ ಅವರನ್ನು ಮೀರಿಸಿದ್ದಾರೆ. ವಿರಾಟ್ ಕೊಹ್ಲಿ ಹುಟ್ಟುಹಬ್ಬದ ದಿನವಾದ ಇಂದು ಕೊಹ್ಲಿ ಸಚಿನ್ ತೆಂಡೂಲ್ಕರ್ ಮತ್ತು ಎಂಎಸ್ ಧೋನಿಯನ್ನು ಹಿಂದಿಕ್ಕಿರುವ ವಿಶೇಷ ದಾಖಲೆಗಳ ಕುರಿತು ತಿಳಿಯೋಣ. ಕೊಹ್ಲಿಯ ಈ ವಿಶೇಷ ದಾಖಲೆಗಳ ಪೈಕಿ ಕೆಲವೊಂದಿಷ್ಟು ಅಂಕಿಅಂಶಗಳು ಈ ಕೆಳಕಂಡಂತಿವೆ ನೋಡಿ..

ತಂಡ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಆಟಗಾರ ಕೊಹ್ಲಿ

ತಂಡ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿರುವ ಆಟಗಾರ ಕೊಹ್ಲಿ

ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯುವುದು ಸುಲಭದ ಮಾತಲ್ಲ. ಆದರೆ ಅವರ ಒಂದು ವಿಶೇಷ ಮತ್ತು ವಿಶಿಷ್ಟ ದಾಖಲೆಯನ್ನು ವಿರಾಟ್ ಕೊಹ್ಲಿ ಈ ಹಿಂದೆಯೇ ಸರಿಗಟ್ಟುವುದರ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಹೌದು, ತಮ್ಮ ತಂಡ ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಬಾರಿಸಿ ಪ್ರಮುಖ ಪಾತ್ರ ವಹಿಸಿರುವ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದು ಈ ದಾಖಲೆಯನ್ನು ಹೊಂದಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಸರಿಗಟ್ಟಿದ್ದಾರೆ. ಹೀಗೆ ತಮ್ಮ ತಂಡಗಳು ಗೆದ್ದ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ

1. ವಿರಾಟ್ ಕೊಹ್ಲಿ: 35 ಶತಕಗಳು

2. ಸಚಿನ್ ತೆಂಡೂಲ್ಕರ್: 33 ಶತಕಗಳು

3. ರಿಕಿ ಪಾಂಟಿಂಗ್‌: 25 ಶತಕಗಳು

4. ಹಶೀಮ್ ಆಮ್ಲಾ: 24 ಶತಕಗಳು

5. ಸನತ್ ಜಯಸೂರ್ಯ: 24 ಶತಕಗಳು

ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿರುವ ಭಾರತೀಯ ಆಟಗಾರ ಕೊಹ್ಲಿ

ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿರುವ ಭಾರತೀಯ ಆಟಗಾರ ಕೊಹ್ಲಿ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ ಇಲ್ಲಿಯವರೆಗೂ ಯಾವುದೇ ಪ್ರತಿಷ್ಠಿತ ಐಸಿಸಿ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಆದರೆ ತಂಡದ ಓರ್ವ ಜವಾಬ್ದಾರಿಯುತ ನಾಯಕನಾಗಿ ವಿರಾಟ್ ಕೊಹ್ಲಿ ತಮ್ಮ ತಂಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂಬುದಕ್ಕೆ ಈ ದಾಖಲೆಯೇ ಸಾಕ್ಷಿ. ಹೌದು, ಟೀಮ್ ಇಂಡಿಯಾ ನಾಯಕರ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ಕ್ರಿಕೆಟ್ ರನ್‌ಗಳನ್ನು ಕಲೆ ಹಾಕಿರುವ ಆಟಗಾರ ಎಂಬ ಖ್ಯಾತಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಹೀಗೆ ಅತಿ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿರುವ ಭಾರತೀಯ ಕ್ರಿಕೆಟ್ ನಾಯಕರ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ ನೋಡಿ..

1. ವಿರಾಟ್ ಕೊಹ್ಲಿ - 12684 ರನ್

2. ಎಂಎಸ್ ಧೋನಿ - 11207 ರನ್

3. ಮೊಹಮ್ಮದ್ ಅಜರುದ್ದೀನ್ - 8095 ರನ್

4. ಸೌರವ್ ಗಂಗೂಲಿ - 7643 ರನ್

5. ಸಚಿನ್ ತೆಂಡೂಲ್ಕರ್ - 4508 ರನ್

Toss ಗೆದ್ದಿದ್ದು ನನಗೆ ಸಿಕ್ಕ ದೊಡ್ಡ ಉಡುಗೊರೆ | Oneindia Kannada
ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ಭಾರತೀಯ ಕ್ರಿಕೆಟಿಗ

ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟ ಭಾರತೀಯ ಕ್ರಿಕೆಟಿಗ

ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ನಾಯಕನಾಗಿ ಗೆಲ್ಲಿಸಿಕೊಟ್ಟ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ಭಾರತೀಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಹೌದು, ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ನಾಯಕ ಎಂಬ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ನಾಯಕನಾಗಿ ಭಾರತಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಟಾಪ್ 5 ಕ್ರಿಕೆಟಿಗರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ - 37 ಪಂದ್ಯಗಳಲ್ಲಿ ಜಯ

2. ಎಂ ಎಸ್ ಧೋನಿ - 27 ಪಂದ್ಯಗಳಲ್ಲಿ ಜಯ

3. ಸೌರವ್ ಗಂಗೂಲಿ - 21 ಪಂದ್ಯಗಳಲ್ಲಿ ಜಯ

4. ಮೊಹಮ್ಮದ್ ಅಜರುದ್ದೀನ್ - 14 ಪಂದ್ಯಗಳಲ್ಲಿ ಜಯ

5. ಸುನಿಲ್ ಗವಾಸ್ಕರ್ - 9 ಪಂದ್ಯಗಳಲ್ಲಿ ಜಯ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, November 5, 2021, 17:45 [IST]
Other articles published on Nov 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X