ಭಾರತ vs ದ.ಆಫ್ರಿಕಾ: ದಿಲೀಪ್ ವೆಂಗ್‌ಸರ್ಕಾರ್ ದಾಖಲೆ ಮುರಿದ ವಿರಾಟ್

ಪುಣೆ, ಅಕ್ಟೋಬರ್ 11: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ (ಅಕ್ಟೋಬರ್ 11) ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್

ಶುಕ್ರವಾರ (ಅಕ್ಟೋಬರ್ 11) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್‌ನ ಎರಡನೇ ದಿನದಾಟದ ವೇಳೆ ಕೊಹ್ಲಿ ಅಪರೂಪದ ದಾಖಲೆಗಾಗಿ ಗುರುತಿಸಿಕೊಂಡರು.

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್‌, Live ಸ್ಕೋರ್‌ಕಾರ್ಡ್

1
46114

ಕೊಹ್ಲಿಯ ಈ ಸಾಧನೆ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅವರ ದಾಖಲೆಯನ್ನು ಮೀರಿಸಿದೆ.

ದಿಲೀಪ್ ಕೆಳಗಿಳಿಸಿದ ಕೊಹ್ಲಿ

ದಿಲೀಪ್ ಕೆಳಗಿಳಿಸಿದ ಕೊಹ್ಲಿ

ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತದ ಆಟಗಾರರಲ್ಲಿ ದಿಲೀಪ್ ವೆಂಗ್ ಸರ್ಕಾರ್ 6,868 ರನ್‌ನೊಂದಿಗೆ 7ನೇ ಸ್ಥಾನದಲ್ಲಿದ್ದರು. 116 ಪಂದ್ಯಗಳಲ್ಲಿ ದಿಲೀಪ್ ಈ ಸಾಧನೆ ಮೆರೆದಿದ್ದರು. ಆದರೆ ಕೊಹ್ಲಿ 6901 ರನ್‌ನೊಂದಿಗೆ ಈಗ 7ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿ ಕೇವಲ 81 ಪಂದ್ಯಗಳಲ್ಲಿ ಈ ರನ್ ಸಾಧನೆ ಮೆರೆದಿದ್ದಾರೆ.

26ನೇ ಟೆಸ್ಟ್ ಶತಕ

26ನೇ ಟೆಸ್ಟ್ ಶತಕ

ಪುಣೆ ಟೆಸ್ಟ್‌ನಲ್ಲಿ ಕೊಹ್ಲಿ ತನ್ನ 26ನೇ ಟೆಸ್ಟ್ ಶತಕ ಪೂರೈಸಿಕೊಂಡಿದ್ದಾರೆ. 81ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕೊಹ್ಲಿ 113ನೇ ಓವರ್‌ ವೇಳೆ 104 ರನ್ ಗಳಿಸಿ ಆಡುತ್ತಿದ್ದರು. 183 ಎಸೆತಗಳಿಗೆ 104 ರನ್‌ ಬಾರಿಸಿದ್ದ ಕೊಹ್ಲಿ 16 ಬೌಂಡರಿಗಳನ್ನೂ ಬಾರಿಸಿದ್ದರು.

ಅಗ್ರ ಸ್ಥಾನದಲ್ಲಿ ಸಚಿನ್, ದ್ರಾವಿಡ್

ಅಗ್ರ ಸ್ಥಾನದಲ್ಲಿ ಸಚಿನ್, ದ್ರಾವಿಡ್

ಭಾರತೀಯ ಆಟಗಾರರಲ್ಲಿ ಟೆಸ್ಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದವರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (200 ಪಂದ್ಯಗಳಲ್ಲಿ 15921 ರನ್) ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಕನ್ನಡಿಗ, ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ 163 ಪಂದ್ಯಗಳಲ್ಲಿ 13265 ರನ್ ದಾಖಲೆ ಹೊಂದಿದ್ದಾರೆ.

ಸೆಹ್ವಾಗ್‌ಗೆ 5ನೇ ಸ್ಥಾನ

ಸೆಹ್ವಾಗ್‌ಗೆ 5ನೇ ಸ್ಥಾನ

ಟೆಸ್ಟ್‌ ಅತ್ಯಧಿಕ ರನ್ ಪಟ್ಟಿಯ 3 ಮತ್ತು ಅನಂತರದ ಸ್ಥಾನಗಳಲ್ಲಿ ಸುನಿಲ್ ಗವಾಸ್ಕರ್ (125 ಪಂದ್ಯ, 10122 ರನ್), ವಿವಿಎಸ್ ಲಕ್ಷ್ಮಣ್ (134 ಪಂದ್ಯ, 8781 ರನ್), ವೀರೇಂದ್ರ ಸೆಹ್ವಾಗ್ (103 ಪಂದ್ಯ, 8503 ರನ್), ಸೌರವ್ ಗಂಗೂಲಿ (113 ಪಂದ್ಯ, 7212 ರನ್), ವಿರಾಟ್ ಕೊಹ್ಲಿ (81* ಪಂದ್ಯ, 6901* ರನ್), ದಿಲೀಪ್ ವೆಂಗ್ ಸರ್ಕಾರ್ (116 ಪಂದ್ಯ, 6868 ರನ್), ಮೊಹಮ್ಮದ್ ಅಝರುದ್ದೀನ್ (99 ಪಂದ್ಯ, 6215 ರನ್), ಗುಂಡಪ್ಪ ವಿಶ್ವನಾಥ್ (91 ಪಂದ್ಯ, 6080 ರನ್) ಇದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, October 11, 2019, 12:49 [IST]
Other articles published on Oct 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X