ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ತಿಂಗಳ ಆಟಗಾರ ಪ್ರಶಸ್ತಿಗೆ ಮೊದಲ ಬಾರಿ ನಾಮನಿರ್ದೇಶನಗೊಂಡ ಕೊಹ್ಲಿ; ಮಹಿಳೆಯರಲ್ಲಿ ಜೆಮಿಮಾ, ದೀಪ್ತಿ

Virat Kohli Was Nominated For The ICC Player Of The Month Award For the First Time

ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಅಕ್ಟೋಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಪ್ರಶಸ್ತಿ ಘೋಷಣೆಯಾದ ನಂತರ ಇದು ವಿರಾಟ್ ಕೊಹ್ಲಿಯ ಮೊದಲ ನಾಮನಿರ್ದೇಶನವಾಗಿದೆ.

ಏಷ್ಯಾಕಪ್ ವಿಜೇತ ಜೋಡಿಯಾದ ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಗುರುವಾರ ಐಸಿಸಿ ಅಕ್ಟೋಬರ್ ತಿಂಗಳ "ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಅವರು ಭಾರತೀಯ ಮಹಿಳಾ ತಂಡದ ಏಷ್ಯಾಕಪ್ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ ಶಾರ್ಟ್‌ಲಿಸ್ಟ್ ಆಗಿದ್ದಾರೆ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆದ ಏಷ್ಯಾಕಪ್‌ನಿಂದ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮತ್ತೆ ಫಾರ್ಮ್‌ಗೆ ಮರಳಿದರು ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಅರ್ಧಶತಕಗಳನ್ನು ಸಿಡಿಸುವುದನ್ನು ಮುಂದುವರೆಸಿದರು.

Virat Kohli Was Nominated For The ICC Player Of The Month Award For the First Time

ವಿರಾಟ್ ಕೊಹ್ಲಿ ಕ್ರಮವಾಗಿ ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ವಿರುದ್ಧ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ, ವಿರಾಟ್ ಕೊಹ್ಲಿ 205 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ತೋರಿಸಿದರು. ಈ ತಿಂಗಳಿನಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಆಗಿತ್ತು. ಈ ಪಂದ್ಯದಲ್ಲಿ ಮೆನ್ ಇನ್ ಬ್ಲೂ ಕೊನೆಯ ಎಸೆತದಲ್ಲಿ ಪಾಕಿಸ್ತಾನ ನೀಡಿದ್ದ 160 ರನ್‌ಗಳನ್ನು ಬೆನ್ನಟ್ಟಲು ಸಹಾಯ ಮಾಡಿದರು.

31 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತವನ್ನು 53 ಎಸೆತಗಳಲ್ಲಿ 82 ರನ್‌ಗಳ ಅವಿಸ್ಮರಣೀಯ ಸ್ಕೋರ್‌ನಿಂದ, ಅಂತಿಮ ಎಸೆತದಲ್ಲಿ 160 ರನ್‌ಗಳ ಗುರಿಯನ್ನು ಬೆನ್ನಟ್ಟುವವರೆಗೂ ಕ್ರೀಸ್‌ನಲ್ಲಿದ್ದರು.

ವಿರಾಟ್ ಕೊಹ್ಲಿಯಂತೆ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಕೂಡ ಮೊದಲ ಬಾರಿಗೆ ಪುರುಷರ ಶಾರ್ಟ್‌ಲಿಸ್ಟ್‌ನಲ್ಲಿ ಹೆಸರಿಸಲ್ಪಟ್ಟಿದ್ದಾರೆ ಮತ್ತು ಅವರು ಭಾರತದ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ತಿಂಗಳನ್ನು ಪ್ರಾರಂಭಿಸಿದರು. ಮೂರು ಏಕದಿನ ಪಂದ್ಯಗಳಲ್ಲಿ 117 ರನ್ ಮತ್ತು ಎರಡು ಟಿ20 ಪಂದ್ಯಗಳಲ್ಲಿ 125 ರನ್ ಗಳಿಸಿದರು. ಇದರಲ್ಲಿ ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ 79 ಎಸೆತಗಳಲ್ಲಿ 106 ರನ್‌ಗಳ ಅಮೋಘ ಪ್ರದರ್ಶನ ಸೇರಿದೆ.

ಈ ಬಿರುಸಿನ ಬ್ಯಾಟಿಂಗ್ ಫಾರ್ಮ್ ಅನ್ನು ಟಿT20 ವಿಶ್ವಕಪ್‌ಗೂ ಮುಂದುವರೆಸಿದ್ದಾರೆ. ನವೆಂಬರ್ ತಿಂಗಳ ಅವಧಿಯಲ್ಲಿ ಅವರ ಅತ್ಯಂತ ಮಹತ್ವದ ಕೊಡುಗೆಯೆಂದರೆ, ಸವಾಲಿನ ಪರ್ತ್ ಟ್ರ್ಯಾಕ್‌ನಲ್ಲಿ ಭಾರತ ವಿರುದ್ಧ ಯಶಸ್ವಿ ರನ್ ಚೇಸ್‌ನಲ್ಲಿ ಆರ್ಧಶತಕ ಬಾರಿಸಿದರು.

ಸಿಕಂದರ್ ರಝಾ ಅವರು 2022ರಲ್ಲಿ ಪ್ರದರ್ಶನಕ್ಕಾಗಿ ಅತ್ಯುತ್ತಮ ಫಾರ್ಮ್ ಮೂಲಕ ಹೋಗುತ್ತಿದ್ದಾರೆ ಮತ್ತು ಮೂರು ತಿಂಗಳಲ್ಲಿ ಎರಡನೇ ಬಾರಿಗೆ ನಾಮನಿರ್ದೇಶನಗೊಂಡಿದ್ದಾರೆ. ಪ್ರತಿಭಾವಂತ ಆಲ್‌ರೌಂಡರ್ ಆಗಸ್ಟ್‌ನಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರು ಮತ್ತು ಟಿ20 ವಿಶ್ವಕಪ್‌ನ ಸೂಪರ್ 12 ಹಂತಗಳ ಮೂಲಕ ಜಿಂಬಾಬ್ವೆಯ ಅರ್ಹತೆ ಗಳಿಸುವಲ್ಲಿ ಪ್ರಮುಖ ಆಟಗಾರರಾಗಿದ್ದರು.

ಈ ಸ್ಪರ್ಧೆಯಲ್ಲಿ ವಿರಾಟ್ ಕೊಹ್ಲಿ ತಮ್ಮ ಉತ್ತಮ ಓಟವನ್ನು ಮುಂದುವರಿಸುತ್ತಾರೆ ಎಂದು ಭಾರತ ಆಶಿಸುತ್ತಿದೆ. ಅವರು ಫಾರ್ಮ್‌ನಲ್ಲಿದ್ದರೆ, ಅದು ಭಾರತ ತಂಡವನ್ನು ಸಂತೋಷವಾಗಿರಿಸುತ್ತದೆ ಮತ್ತು ಎರಡನೇ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವನ್ನು ಹೆಚ್ಚಿಸುತ್ತದೆ.

Story first published: Thursday, November 3, 2022, 17:42 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X