ಕೊಹ್ಲಿ ವಿಶ್ವದಲ್ಲೇ ಪ್ರಭಾವಶಾಲಿ ಬ್ಯಾಟ್ಸ್‌ಮನ್‌: ಪಾಕ್ ಮಾಜಿ ನಾಯಕ

ಪಾಕ್ ಆಟಗಾರನಿಂದ ವಿರಾಟ್ ಗೆ ಗೊಂದಲ!! | Oneindia Kannada

ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಮಿನುಗಿದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವು ಮಾತನಾಡುವುದಾದರೆ ಪ್ರಮುಖ ಮೂವರು ಆಟಗಾರರು ಸಿಗುತ್ತಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಆ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಬರುತ್ತಾರೆ.

ಟಿ20 ವಿಶ್ವಕಪ್‌ ನಿರ್ಧರಿಸಲು ಜೂನ್ 28ರವರೆಗೆ ಗಡುವು: ಗಂಗೂಲಿಟಿ20 ವಿಶ್ವಕಪ್‌ ನಿರ್ಧರಿಸಲು ಜೂನ್ 28ರವರೆಗೆ ಗಡುವು: ಗಂಗೂಲಿ

1970 ಮತ್ತು 80ರ ದಶಕದಲ್ಲಿ ದಂತಕತೆ ಸುನಿಲ್ ಗವಾಸ್ಕರ್ ಪಾರಮ್ಯ ಮೆರೆದರೆ, ಆ ಬಳಿಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ವಿಶ್ವದಗಲಕ್ಕೆ ಭಾರತೀಯ ಕ್ರಿಕೆಟ್‌ನ ಶಕ್ತಿ ಸಾರಿದ್ದರು. ಸಚಿನ್ ಯುಗ ಮುಗಿಯುತ್ತ ಬರುತ್ತಿದ್ದಾಗೆ ವಿರಾಟ್ ಕೊಹ್ಲಿ ಮಿಂಚಲಾರಂಭಿಸಿದ್ದರು. ಪ್ರಸ್ತುತ ಕೊಹ್ಲಿ, ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಈ ಯುಗದ ಭಾರತೀಯ ಐದು ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡಿದರೆ ಅಲ್ಲೂ ವಿರಾಟ್ ಮೊದಲಿಗರಾಗಿ ಕಾಣಿಸುತ್ತಾರೆ. ಸದ್ಯ ವಿರಾಟ್ ಎರಡನೇ ಬಾರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ತಂಡ ಮುನ್ನಡೆಸಲು ಸಜ್ಜಾಗಿದ್ದಾರೆ. ಜೂನ್ 3ರಂದು ಭಾರತ, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತದ ನಾಯಕನನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮನ್ ಬಟ್ ಶ್ಲಾಘಿಸಿದ್ದಾರೆ.

ಟೆಸ್ಟ್ ಚಾಂಪಿಯನ್‍ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು?ಟೆಸ್ಟ್ ಚಾಂಪಿಯನ್‍ಶಿಪ್: ಅಶ್ವಿನ್ ಹಾಗೂ ಜೆಮಿಸನ್ ನಡುವಿನ ಪೈಪೋಟಿಯಲ್ಲಿ ಗೆಲ್ಲುವವರಾರು?

'ಎಲ್ಲಾ ಕ್ರಿಕೆಟ್ ಮಾದರಿಗಳಲ್ಲೂ ವಿರಾಟ್ ಕೊಹ್ಲಿ ವಿಶ್ವದಲ್ಲೇ ಅತ್ಯಂತ ಪ್ರಭಾವಶಾಲಿ ಬ್ಯಾಟ್ಸ್‌ಮನ್‌ ಎಂದು ನಾನು ನಂಬಿದ್ದೇನೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಸಾಧನೆಯೇ ಇದಕ್ಕೆ ಸಾಕ್ಷಿ ಹೇಳುತ್ತವೆ. ಇದು ಅವರ ತಂಡಕ್ಕೆ ಗೆಲುವಿನ ಫಲಿತಾಂಶ ತರುವಲ್ಲೂ ನೆರವು ನೀಡಿದೆ,' ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮನ್ ಬಟ್ ಹೇಳಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 2, 2021, 12:47 [IST]
Other articles published on Jun 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X