ಎಂಎಸ್ ಧೋನಿ ಪುತ್ರಿ ಜೀವಾ ಹಾಡು ಸೂಪರ್

Posted By:

ಬೆಂಗಳೂರು, ಡಿಸೆಂಬರ್ 03 : ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರು ತಮ್ಮ ವೃತ್ತಿ ಬದುಕಿನ ಅಂತ್ಯಕಾಲ ಎದುರಿಸುತ್ತಿರಬಹುದು ಆದರೆ, ಅವರ ಪುತ್ರಿ ಜೀವಾ ತುಂಟಾಟದ ವೃತ್ತಿ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಜೀವಾ ಮುದ್ದು ಮುದ್ದಾಗಿ ಹಾಡುವ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಹಿಂದೆ ಮಲಯಾಳಂ ಹಾಡನ್ನು ತೊದಲು ದನಿಯಲ್ಲಿ ಹೇಳಿದ್ದ ಎರಡೂವರೆ ವರ್ಷ ವಯಸ್ಸಿನ ಜೀವಾ ಈಗ ಮತ್ತೊಮ್ಮೆ ಜನಪ್ರಿಯ ಮಲಯಾಳಂ ಸಿನಿಮಾ ಗೀತೆಯನ್ನು ಹಾಡಿದ್ದಾರೆ. ಡಿಸೆಂಬರ್ 01ರಂದು ಇನ್ಸ್ಟಾಗ್ರಾಮ್ ಸೇರಿದ ಈ ಹಾಡು 1.6 ಲಕ್ಷ ಕ್ಕೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ.

WATCH: MS Dhoni's daughter Ziva comes up with another Malayalam song

1964 ರಲ್ಲಿ ತೆರೆ ಕಂಡ 'ಒಮಾಕುಟ್ಟನ್' ಮಲಯಾಳಂ ಸಿನಿಮಾದ 'ಕಣಿಕಾನು ನೇರಮ್...' ಹಾಡನ್ನು ಜೀವಾ ಮುದ್ದಾಗಿ ಹಾಡಿದ್ದಾರೆ. ಪುಟ್ಟ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಜೀವಾ ಹಾಡುವ ರೀತಿ ಎಲ್ಲರಿಗೂ ಅಚ್ಚುಮೆಚ್ಚಾಗಿದೆ.

ಚಳಿ, ಜ್ವರ ಹುಷಾರಿಲ್ಲದಿದ್ದರೂ ಚಳಿಗಾಲಕ್ಕಾಗಿ ಈ ಹಾಡು ನಿಮಗಾಗಿ ಎಂಬ ಅಡಿಬರಹದೊಂದಿಗೆ ಟ್ವೀಟ್ ಮಾಡಲಾಗಿದೆ.

ಈ ಹಿಂದೆ ಅಪ್ಪ ಧೋನಿ ಜತೆ ಬೇಸನ್ ಲಾಡು ಶೇರ್ ಮಾಡಿಕೊಂಡಿದ್ದು, ಪಿಯಾನೋ ನುಡಿಸಿದ್ದು, ಚಪಾತಿ ಮಾಡಿದ್ದು, ಕೊಹ್ಲಿ ಜತೆ ಮಾತನಾಡಿದ್ದು ಹೀಗೆ ಜೀವಾ ತುಂಟಾಟದ ವಿಡಿಯೋಗಳು ಗಮನ ಸೆಳೆದಿವೆ.

Story first published: Sunday, December 3, 2017, 10:07 [IST]
Other articles published on Dec 3, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ