ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾರಿಯರ ಸೀರೆಯಲ್ಲೂ ಅರಳಿದ ಕ್ರಿಕೆಟ್ ಪ್ರೇಮ

ಬೆಂಗಳೂರು, ಮಾ. 26: ಕ್ರಿಕಟ್ ಎಫೆಕ್ಟ್ ಏನೂ ಬೇಕಾದರೂ ಮಾಡಬಹದು. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ಪಂದ್ಯ ನಡೆಯುತ್ತಿದ್ದರೆ ಇತ್ತ ಭಾರತದಲ್ಲಿ ಅಘೋಷಿತ ಬಂದ್. ನಾರಿ ಸೀರೆಯಲ್ಲಿ ಅರಳಿನಿಂತ ಕ್ರಿಕೆಟ್ ಪ್ರೇಮ. ಅಂಗಡಿ ಮುಂಗಟ್ಟು, ಕಟಿಂಗ್ ಶಾಪ್ ಎಲ್ಲ ಕಡೆಯೂ ಕುತ್ತಿಗೆ ಉದ್ದ ಮಾಡಿಕೊಂಡು ಮ್ಯಾಚ್ ವೀಕ್ಷಿಸುತ್ತಿರುವವರು ಒಂದು ಕ್ಷಣ ತಮ್ಮ ದೈನಂದಿನ ಜಂಜಾಟ ಮರೆತು ಹೊರಬಂದಿದ್ದೆಂತೂ ಸತ್ಯ.

ಭಾರತದ ಚೇಸಿಂಗ್ ಆರಂಬವಾಗಿದೆ. ಸದಾ ವಾಹನಗಳ ಸಂಚಾರದಿಂದ ಕೂಡಿರುತ್ತಿದ್ದ ಸೌತ್ ಎಂಡ್ ವೃತ್ತ ಖಾಲಿ ಖಾಲಿ. ಅಂಗಡಿಯಲ್ಲಿ ವ್ಯಾಪಾರ ಆಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ ಆದರೆ ಹೊರಗೆ ಜನರು ತುಂಬಿದ್ದರು ಎಂದರೆ ಅಂಗಡಿ ಒಳಗೆ ಟಿವಿ ಇದೆ ಎಂದೇ ಅರ್ಥ![ಗುರಿ ಬೆನ್ನು ಹತ್ತಿರುವ ಭಾರತ]

sari


ಕೆಲ ಕಾರ್ಪೋರೇಟ್ ಕಂಪನಿಗಳು ತಮ್ಮ ಸಿಬ್ಬಂದಿಗೆ ಪುಕ್ಕಟೆ ರಜೆಯನ್ನು ದಯಪಾಲಿಸಿವೆ. ಅಲ್ಲದೇ ಕಂಪನಿಯೊಳಗೆ ಪ್ರೊಜೆಕ್ಟರ್ ಅಳವಡಿಸಿ ಪಂದ್ಯ ನೋಡಲಿ ವ್ಯವಸ್ಥೆ ಮಾಡಿಕೊಟ್ಟಿವೆ.

ದೇಶಾದ್ಯಂತ ಜನರು ವಿಶ್ವಕಪ್ ಸೆಮಿಫೈನಲ್ ಜ್ವರದಲ್ಲಿ ಮುಳುಗಿದ್ದರೆ ಇಲ್ಲೊಬ್ಬ ಕಲಾವಿದ ನಾರಿಯ ಸೀರೆಯಲ್ಲಿ ವಿಶ್ವಕಪ್ ಕನಸನ್ನು ಅರಳಿಸಿದ್ದಾನೆ. ಅದಷ್ಟೋ ಕಾರ್ಪೋರೇಟ್ ಕಚೇರಿಗಳಿಗೆ ಕ್ರಿಕೆಟ್ ನೋಡಲೇಂದೇ ರಜೆ ನೀಡಲಾಗಿದೆ. ಈ ಸೀರೆ ಉಟ್ಟುಕೊಳ್ಳುವ ನಾರಿ ಎಲ್ಲಿದ್ದಾಳೋ ಗೊತ್ತಿಲ್ಲ? ಆದರೆ ಕ್ರಿಕಟ್ ಪ್ರೇಮಿಗಳಿಗೆ ಇದು ಇಷ್ಟವಾಗುವುದರಲ್ಲಿ ಅನುಮಾನವಿಲ್ಲ.
sari


ಮನೆಯಲ್ಲಿ ಕುಳಿತು ಒಂದು ಕೈಯಲ್ಲಿ ಪಾಪ್ ಕಾರ್ನ್ ಮತ್ತೊಂದು ಕೈಯಲ್ಲಿ ರಿಮೋಟ್ ಹಿಡಿದು ಪಂದ್ಯ ವೀಕ್ಷಣೆ ಮಾಡುವ ಮಜವೇ ಬೇರೆ. ಹಾ ಪಕ್ಕದಲ್ಲಿ ಸ್ನೇಹಿತರ ತಂಡ ಇದ್ದರೆಂತೂ ಗಲಾಟೆಯೋ ಗಲಾಟೆ.. ಪ್ರತಿಯೊಂದು ಬಾಲ್ ಗೂ ನಮ್ಮದೇ ಕಾಮೆಂಟರಿ, ಹಾಗೆ ಹೊಡಿಬಾರದಿತ್ತು ಎಂಬ ಅಭಿಪ್ರಾಯ, ಕ್ಯಾಚ್ ಬಿಟ್ಟವನಿಗೆ ಇಲ್ಲಿಂದಲೇ ಮಂಗಳಾರತಿ..

ಅಯ್ಯೋ ಈ ದರಿದ್ರ ಆಟ ಯಾವಾಗ ಮುಗಿಯತ್ತೋ ಎಂದು ಒಳಗಿನಿಂದಲೇ ಕೂಗಿಕೊಳ್ಳುವ ಅಮ್ಮ ಇದು ಇಂದಿನ ಭಾರತದ ನೈಜ ಚಿತ್ರಣ. ಪಂದ್ಯ ಗೆಲ್ಲಲಿ, ಬಿಡಲಿ ಒಂದು ದಿನದ ಕೆಲಸ ಹಾಳಾಯಿತಲ್ಲ ಎಂದು ಕಂಪನಿ ಮಾಲೀಕರು, ಅಂಗಡಿ ಶೇಟ್ರು ಕೈ ಕೈ ಹಿಸುಕಿಕೊಂಡಿದ್ದು ಯಾರಿಗೂ ಕಾಣಿಸಲಿಲ್ಲ.
cricket

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X