ತವರು ನೆಲದಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಡಿದ ಡ್ವೇನ್ ಬ್ರಾವೋ

ಗಯಾನ: ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಕೆರಿಬಿಯನ್ ನೆಲದಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಆಗಸ್ಟ್ 3ರ ಮಂಗಳವಾರ ಗಯಾನದ ಪ್ರವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ವೆಸ್ಟ್‌ ಇಂಡೀಸ್ ನಡುವಿನ ನಾಲ್ಕನೇ ಮತ್ತು ಕೊನೇಯ ಟಿ20ಐ ಪಂದ್ಯವೇ ಬ್ರಾವೋ ಪಾಲಿನ ಕೊನೇಯ ತವರಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ ಎಂದು ಸ್ವತಃ ಬ್ರಾವೋ ಘೋಷಿಸಿದ್ದಾರೆ. ಬ್ರಾವೋ ಈ ಪಂದ್ಯದೊಂದಿಗೆ 86ನೇ ಟಿ20ಐ ಪಂದ್ಯ ಆಡಿದಂತಾಗುತ್ತದೆ.

ಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿಚೇತೇಶ್ವರ್ ಪೂಜಾರ ಕುರಿತ ಟೀಕೆಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ ವಿರಾಟ್ ಕೊಹ್ಲಿ

ಎರಡು ಬಾರಿ ಟಿ20 ವಿಶ್ವಕಪ್‌ ವಿಜೇತ ಆಟಗಾರರಾಗಿರುವ ಡ್ವೇನ್ ಬ್ರಾವೋ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಂದರೆ ಮುಂಬರಲಿರುವ ಟಿ20 ವಿಶ್ವಕಪ್‌ ಟೂರ್ನಿ ಬ್ರಾವೋ ಪಾಲಿಗೆ ಕೊನೇಯ ಅಂತಾರಾಷ್ಟ್ರೀಯ ಟೂರ್ನಿಯಾಗಿರಲಿದೆ. ಆ ಲೆಕ್ಕದಲ್ಲಿ, ಗಯಾನಾ ಪಂದ್ಯ ತವರು ನೆಲದಲ್ಲಿ ಬ್ರಾವೋ ಪಾಲಿಗೆ ಕೊನೇ ಅಂತಾರಾಷ್ಟ್ರೀಯ ಪಂದ್ಯ ಹೌದು.

ವಿಡಿಯೋದಲ್ಲಿ ಮಾತನಾಡಿದ ಕೀರನ್ ಪೊಲಾರ್ಡ್

ವಿಡಿಯೋದಲ್ಲಿ ಮಾತನಾಡಿದ ಕೀರನ್ ಪೊಲಾರ್ಡ್

ಪಾಕಿಸ್ತಾನ ವಿರುದ್ಧ ಗಯಾನಾ ಸ್ಟೇಡಿಯಂನಲ್ಲಿ ನಡೆದಿದ್ದ ನಾಲ್ಕನೇ ಮತ್ತು ಕೊನೇಯ ಟಿ20ಐ ಪಂದ್ಯ ತವರು ನೆಲದಲ್ಲಿ ತನ್ನ ಕೊನೇ ಅಂತಾರಾಷ್ಟ್ರೀಯ ಪಂದ್ಯವೆಂದು ಬ್ರಾವೋ ಅವರು ತಂಡದ ನಾಯಕ ಕೀರನ್ ಪೊಲಾರ್ಡ್ ಅವರಲ್ಲಿ ಹೇಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ಪೊಲಾರ್ಡ್ ಈ ಸಂಗತಿ ಹೇಳಿಕೊಂಡಿದ್ದಾರೆ. ವೆಸ್ಟ್‌ ಇಂಡೀಸ್ ಕ್ರಿಕೆಟ್ ಅಧಿಕೃತ ಟ್ವಿಟರ್ ಖಾತೆಯ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪೊಲಾರ್ಡ್, "ನಾನಿವತ್ತು ನಮ್ಮ ಒಬ್ಬ ಶ್ರೇಷ್ಠ ಆಟಗಾರನಿಗೆ ಶುಭ ಹಾರೈಸಲು ಈ ಅವಕಾಶ ಬಳಸಿಕೊಳ್ಳುತ್ತೇನೆ. ಮೂರೂ ಮಾದರಿಗಳಲ್ಲಿ ಈತ ಆಡಿದ್ದು, ಎರಡರಲ್ಲಿ ಈ ಮೊದಲೇ ನಿವೃತ್ತಿಯಾಗಿದ್ದಾರೆ. ಆದರೆ ಬ್ರಾವೋ ತನ್ನ ಕೊನೇ ಆಟವನ್ನು ಕೆರಿಬಿಯನ್ ಮಣ್ಣಿನಲ್ಲಿ ಆಡುತ್ತಿದ್ದಾರೆ," ಎಂದು ವಿಡಿಯೋದಲ್ಲಿ ಪೊಲಾರ್ಡ್ ಹೇಳಿದ್ದರು. ಹೀಗಾಗಿ ವೆಸ್ಟ್‌ ಇಂಡೀಸ್-ಪಾಕಿಸ್ತಾನ ನಾಲ್ಕನೇ ಟಿ20ಐ ಪಂದ್ಯ ಬ್ರಾವೋ ಪಾಲಿಗೆ ತವರಿನಲ್ಲಿ ಕೊನೇಯ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ.

ಎರಡು ವಿಶ್ವಕಪ್‌ಗಳಲ್ಲಿ ಜಯ

ವೆಸ್ಟ್‌ ಇಂಡೀಸ್ ಪ್ರಕಾರ, ಬ್ರಾವೋ ತನ್ನ ವೃತ್ತಿ ಬದುಕಿನ ಆರಂಭದಿಂದಲೂ ಸಿಂಹದ ಹಟವಿದ್ದವರು. ಟಿ20ಐನಲ್ಲಿ ಎರಡು ವಿಶ್ವಕಪ್‌ ಗೆದ್ದ ತಂಡದಲ್ಲಿದ್ದಿದ್ದು ಬ್ರಾವೋ ಅವರ ಅತ್ಯುತ್ತಮದ ಸಾಧನೆಯೆನಿಸಿದೆ. ಮೊದಲ ವಿಶ್ವಕಪ್‌ ಗೆಲುವು 2012ರಲ್ಲಿ ಬ್ರಾವೋ ಹುಟ್ಟುಹಬ್ಬದಂದೇ ಸಿಕ್ಕಿತ್ತು. ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದಿದ್ದ ಪಂದ್ಯದಲ್ಲಿ ವಿಂಡೀಸ್ ಚಾಂಪಿಯನ್‌ ಆಗಿ ಮಿನುಗಿತ್ತು. ಮತ್ತೊಂದು ವಿಶ್ವಕಪ್‌ ಪಂದ್ಯ ಗೆದ್ದಿದ್ದು 2016ರಲ್ಲಿ ಇಂಗ್ಲೆಂಡ್ ವಿರುದ್ಧ. ಈ ಪಂದ್ಯ ಕೋಲ್ಕತ್ತಾದಲ್ಲಿ ನಡೆದಿತ್ತು. 7 ಅಕ್ಟೋಬರ್‌ 1983ರಲ್ಲಿ ಜನಿಸಿರುವ ಬ್ರಾವೋಗೀಗ 37ರ ಹರೆಯದ. ಬಲಗೈ ಬ್ಯಾಟ್ಸ್‌ಮನ್‌ ಆಗಿ ಬ್ರಾವೋ ಗುರುತಿಸಿಕೊಂಡಿದ್ದರು. ಅಂದ್ಹಾಗೆ ಪಾಕ್-ವಿಂಡೀಸ್ ನಾಲ್ಕನೇ ಟಿ20ಐ ಪಂದ್ಯ ಮಳೆಯ ಕಾರಣ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತು.

ಟೀಮ್ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್ | Oneindia Kannada
ಬ್ರಾವೋ ವೃತ್ತಿ ಜೀವನದ ಅಂಕಿ-ಅಂಶಗಳು

ಬ್ರಾವೋ ವೃತ್ತಿ ಜೀವನದ ಅಂಕಿ-ಅಂಶಗಳು

40 ಟೆಸ್ಟ್‌ ಪಂದ್ಯಗಳನ್ನಾಡಿರುವ ಡ್ವೇನ್ ಬ್ರಾವೊ, 2200 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕ, 13 ಅರ್ಧ ಶತಕಗಳು ಸೇರಿವೆ. ಇನ್ನು ಟೆಸ್ಟ್‌ನಲ್ಲಿ 86 ವಿಕೆಟ್‌ ಗಳಿಸಿದ್ದಾರೆ. 164 ಏಕದಿನ ಪಂದ್ಯಗಳಲ್ಲಿ 2968 ರನ್, 2 ಶತಕ, 10 ಅರ್ಧ ಶತಕ, 199 ವಿಕೆಟ್‌ ಗಳಿಸಿದ್ದಾರೆ. 86 ಟಿ20ಐ ಪಂದ್ಯಗಳಲ್ಲಿ 1229 ರನ್, 76 ವಿಕೆಟ್ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್ ಪರ ಆಡಿದ್ದಾರೆ. ಸಿಡ್ನಿ ಸಿಕ್ಸರ್ಸ್, ಚಿತ್ತಗಾಂಗ್ ಕಿಂಗ್ಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಟ್ರಿನ್ಬಾಗೊ ನೈಟ್ ರೈಡರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಡಾಲ್ಫಿನ್ಸ್, ಕೇಪ್ ಕೋಬ್ರಾಸ್, ಲಾಹೋರ್ ಕಲಂದಾರ್ಸ್, ಗುಜರಾತ್ ಲಯನ್ಸ್, ಸರ್ರೆ, ಪ್ರಿಟೋರಿಯಾ ಮೇವರಿಕ್ಸ್, ಕಾಮಿಲ್ಲಾ ವಿಕ್ಟೋರಿಯನ್ಸ್, ಪೇಶವರ್ ಜಲ್ಮಿ, ವಿನ್ನಿ ಹೀಗೆ ಅನೇಕ ತಂಡಗಳ ಪರ ಬ್ರಾವೋ ಆಡಿದ್ದಾರೆ. ಐಪಿಎಲ್‌ನಲ್ಲಿ ಬ್ರಾವೋ 144 ಪಂದ್ಯಗಳಲ್ಲಿ 1510 ರನ್, 156 ವಿಕೆಟ್ ದಾಖಲೆ ಹೊಂದಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, August 4, 2021, 18:05 [IST]
Other articles published on Aug 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X