ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನ ವಿರುದ್ಧ ವೆ.ಇಂಡೀಸ್‌ ಸೋಲು, ವಿಶ್ವಕಪ್‌ ಹಾದಿ ಕಠಿಣ

By Manjunatha
West Indies loose to Afghanistan in world cup qualifier match

ಹರಾರೆ, ಮಾರ್ಚ್‌ 16: ಎರಡು ಬಾರಿ ವರ್ಲ್ಡ್‌ಕಪ್ ಚಾಂಪಿಯನ್ ವೆಸ್ಟ್‌ ಇಂಡೀಸ್ ತಂಡವು ಐಸಿಸಿ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ತಂಡದ ವಿರುದ್ಧ ಸೋಲು ಕಂಡಿದೆ.

ಐಸಿಸಿ ಏಕದಿನ ಪಂದ್ಯದ ರ್ಯಾಂಕಿಂಗ್ ನಲ್ಲಿ ಕುಸಿತ ಕಂಡ ಕಾರಣ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೆ ನೇರ ಅಹರ್ತೆ ಕಳೆದುಕೊಂಡ ವೆಸ್ಟ್‌ ಇಂಡೀಸ್ ತಂಡವು ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ವರ್ಲ್ಡ್‌ಕಪ್ ಅರ್ಹತಾ ಸುತ್ತಿನ ಪಂದ್ಯಾವಳಿಯ ಸೂಪರ್‌ ಸಿಕ್ಸ್ ವಿಭಾಗದಲ್ಲಿ ನಿನ್ನೆ ಅಫ್ಗಾನಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋಲುಂಡಿದೆ.

ಅಫ್ಘಾನಿಸ್ತಾನದ ವಿರುದ್ಧ ಸೋಲುವ ಮೂಲಕ ವಿಶ್ವಕಪ್ ಪ್ರವೇಶಿಸುವ ಹಾದಿಯನ್ನು ಕಠಿಣ ಮಾಡಿಕೊಂಡಿದೆ. ಅರ್ಹತಾ ಸುತ್ತಿನ ಪ್ರಥಮ ಸುತ್ತಿನಲ್ಲಿ ಎಲ್ಲಾ ಪಂದ್ಯಗಳನ್ನೂ ಗೆದ್ದು ಸೂಪರ್ ಸಿಕ್ಸ್ ಹಂತಕ್ಕೆ ತಲುಪಿದ್ದ ವೆಸ್ಟ್‌ ಇಂಡೀಸ್ ಇಲ್ಲಿಯೂ ಎರಡು ಪಂದ್ಯಗಳನ್ನು ಗೆದ್ದು ಉತ್ಸಾಹದಲ್ಲಿತ್ತು ಆದರೆ ಮೂರನೇ ಪಂದ್ಯದಲ್ಲಿ ಕಂಡ ಸೋಲು, ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸುವುದನ್ನು ಕಠಿಣವಾಗಿಸಿದೆ.

ಈಗ ಸೂಪರ್ ಸಿಕ್ಸ್‌ ಹಂತದಲ್ಲಿ ವೆಸ್ಟ್ ಇಂಡೀಸ್ 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಎರಡು ಪಂದ್ಯ ಗೆದ್ದು ಒಂದು ಪಂದ್ಯವನ್ನು ಸೋತಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಆ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ನಿರಾಯಾಸವಾಗಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಅಕಸ್ಮಾತ್ ಸೋತಲ್ಲಿ ಈ ಬಾರಿ ವಿಶ್ವಕಪ್‌ಗೆ ಅನರ್ಹತೆ ಹೊಂದಲಿದ್ದಾರೆ. ಉಳಿದ ಎರಡರಲ್ಲಿ ಒಂದು ಪಂದ್ಯ ಮಾತ್ರ ಗೆದ್ದಲ್ಲಿ ಪಾಯಿಂಟ್ಸ್‌ ಲೆಕ್ಕಾಚಾರ ಹಾಕಬೇಕಾಗುತ್ತದೆ.

ವೆಸ್ಟ್‌ ಇಂಡೀಸ್‌ನ ಮುಂದಿನ ಎರಡು ಪಂದ್ಯಗಳು ಜಿಂಬಾಬ್ವೆ ಮತ್ತು ಸ್ಟಾಟ್‌ಲೆಂಡ್‌ ವಿರುದ್ಧ ಇವೆ. ಜಿಂಬಾಬ್ವೆಯು ಆಡಿದ ಎರಡು ಪಂದ್ಯದಲ್ಲಿ ಒಂದನ್ನು ಗೆದ್ದು ಒಂದನ್ನು ಟೈ ಮಾಡಿಕೊಂಡು ವಿಶ್ವಾಸದಲ್ಲಿದೆ. ಸ್ಕಾಟ್‌ಲೆಂಡ್ ಇಡೀ ಟೂರ್ನಿಯಲ್ಲಿ ಈ ವರೆಗೆ ಒಂದೂ ಪಂದ್ಯ ಸೋಲದೆ ಆತ್ಮವಿಶ್ವಾಸದಲ್ಲಿದೆ ಹಾಗಾಗಿ ವೆಸ್ಟ್‌ ಇಂಡೀಸ್‌ ಎರಡೂ ಪಂದ್ಯಗಳನ್ನು ಎಚ್ಚರಿಕೆಯಿಂದ ಆಡಲೇಬೇಕಿದೆ.

ಅಪ್ಘಾನಿಸ್ಥಾನ ತಂಡವು 3 ಪಂದ್ಯದಲ್ಲಿ ಎರಡರಲ್ಲಿ ಸೋತಿದ್ದು, ಉಳಿದ ಎರಡೂ ಪಂದ್ಯವನ್ನು ಗೆದ್ದು ಪಾಯಿಂಟ್ಸ್‌ ಲೆಕ್ಕಾಚಾರದಲ್ಲಿ ವಿಶ್ವಕಪ್‌ಗೆ ಅರ್ಹತೆ ಗಳಿಸುವ ಸಾಧ್ಯತೆ ಇದೆ. ಪ್ರಸ್ತುತ ಸೂಪರ್ ಸಿಕ್ಸ್ ಹಂತದಲ್ಲಿ ಸ್ಟಾಟ್‌ಲೆಂಡ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ಎರಡನೇ ಸ್ಥಾನದಲ್ಲಿದೆ. ಐದು ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸುವ ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಳಿಸಲಿವೆ.

Story first published: Friday, March 16, 2018, 14:20 [IST]
Other articles published on Mar 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X