ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್ ಸರಣಿ ಕುರಿತು ಪ್ರತಿಕ್ರಿಯಿಸಿದ ಗಂಗೂಲಿ; ನವೆಂಬರ್‌ 15ರ ಕ್ರಿಕೆಟ್‍ ಸುದ್ದಿಗಳು

What happened in the cricket world on November 15

ನವೆಂಬರ್‌ 15ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿದ್ಯಮಾನಗಳು ಜರುಗಿದ್ದು, ಒಂದೆಡೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಮುಗಿದ ನಂತರ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕುರಿತು ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೇನ್ ವಿಲಿಯಮ್ಸನ್ ಬಗ್ಗೆ ವಿಶೇಷ ಬರಹವನ್ನು ಬರೆದುಕೊಂಡಿದ್ದರೆ, ಮತ್ತೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 8 ವರ್ಷಗಳಿಂದ ನಡೆಯದೇ ಇರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಸರಣಿ ಪುನರಾರಂಭಿಸುವುದರ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹೀಗೆ ನವೆಂಬರ್ 15ರ ಕೆಲ ಪ್ರಮುಖ ಕ್ರಿಕೆಟ್ ಸುದ್ದಿಗಳ ಪಟ್ಟಿ ಈ ಕೆಳಕಂಡಂತಿದೆ.

* ವಿಶ್ವಕಪ್ ಗೆದ್ದ ಬಳಿಕ ಆಸ್ಟ್ರೇಲಿಯಾದ ಸಂಭ್ರಮಾಚರಣೆ ಮುಗ್ಗಿಲು ಮುಟ್ಟಿತ್ತು. ನ್ಯೂಜಿಲೆಂಡ್ ತಂಡದ ಆಟಗಾರರು ಹತಾಶರಾಗಿ ಡ್ರೆಸ್ಸಿಂಗ್ ರೂಂನತ್ತ ಹೆಜ್ಜೆ ಹಾಕಿದ್ರೆ, ಕಾಂಗರೂಗಳ ಸಂತಸಕ್ಕೆ ಯಾವುದೇ ಕಡಿವಾಣವೇ ಇರಲಿಲ್ಲ. ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್‌ ಸ್ಟೋಯ್ನಿಸ್ ಸಂಭ್ರಮಿಸುತ್ತಾ, ತಮ್ಮದೇ ಶೂಗಳಲ್ಲಿ ಬಿಯರ್ ಹಾಕಿಕೊಂಡು ಕುಡಿದುಬಿಟ್ರು.ಇದು ನೋಡುಗರಿಗೆ ಆಶ್ಚರ್ಯ ಮೂಡಿಸಿದ್ರೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವರ ತೀವ್ರ ಟೀಕೆಗೆ ಗುರಿಯಾಯಿತು.ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಕೂಡ ಟಿ 20 ವಿಶ್ವಕಪ್ ವಿಜಯವನ್ನು ಆಚರಿಸುವ ಆಸ್ಟ್ರೇಲಿಯಾದ ವಿಧಾನವನ್ನು "ಸ್ವಲ್ಪ ಅಸಹ್ಯಕರ" ಎಂದು ಬಣ್ಣಿಸಿದ್ದಾರೆ. ನವೆಂಬರ್ 14 ರಂದು ನಡೆದ ಫೈನಲ್‌ನಲ್ಲಿ ಆಸ್ಟ್ರೇಲಿಯಾವು ನ್ಯೂಜಿಲೆಂಡ್‌ಗೆ ಎಂಟು ವಿಕೆಟ್‌ಗಳ ಸೋಲನ್ನು ನೀಡಿ ತಮ್ಮ ಚೊಚ್ಚಲ ಟಿ20 ವಿಶ್ವಕಪ್‌ ಗೆದ್ದುಕೊಂಡಿತು.

* ಫಾರ್ಮ್ ಇಲ್ಲದೆ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಈಗಾಗಲೇ ತಂಡದಲ್ಲೂ ಸ್ಥಾನವಿಲ್ಲದೆ ಬೇಸರದಲ್ಲಿದ್ದ ಬೆನ್ನಲ್ಲೇ ಅವರ ಐದು ಕೋಟಿ ರೂಪಾಯಿ ವಾಚನ್ನು ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿದ್ದಾರೆ. ತಡರಾತ್ರಿ ಭಾರತಕ್ಕೆ ಆಗಮಿಸಿದಾಗ ಕಸ್ಟಮ್ಸ್ ಇಲಾಖೆಯಿಂದ 5 ಕೋಟಿ ಮೌಲ್ಯದ ಎರಡು ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ ಅವರಿಂದ 5 ಕೋಟಿ ಮೌಲ್ಯದ 2 ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ವರದಿಗಳಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆಯು ಅವುಗಳನ್ನು ಜಪ್ತಿ ಮಾಡಿದೆ.

ಟಿ20 ವಿಶ್ವಕಪ್ 2021: ವಾರ್ನರ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದರ ಕುರಿತು ತುಟಿಬಿಚ್ಚಿದ ಇರ್ಫಾನ್ ಪಠಾಣ್ಟಿ20 ವಿಶ್ವಕಪ್ 2021: ವಾರ್ನರ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿದ್ದರ ಕುರಿತು ತುಟಿಬಿಚ್ಚಿದ ಇರ್ಫಾನ್ ಪಠಾಣ್

* ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಭರ್ಜರಿ ಆಟ ಪ್ರದರ್ಶಿಸಿದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಮುಂಚೆ ಐಸಿಯುನಲ್ಲಿ ಇದ್ದರೂ ಎಂಬುದು ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ್ದಂತು ಸುಳ್ಳಲ್ಲ. ಇದೀಗ ಈ ಘಟನೆ ಕುರಿತು ಸ್ವತಃ ಮಾತನಾಡಿರುವ ಮೊಹಮ್ಮದ್ ರಿಜ್ವಾನ್ ''ನನಗೆ ಹುಷಾರಿರಲಿಲ್ಲ, ನಾನು ಆಸ್ಪತ್ರೆಗೆ ಹೋಗುತ್ತಿದ್ದೆ ಮತ್ತು ನನ್ನ ಕುಟುಂಬ ಹೋಟೆಲ್‌ನಲ್ಲಿತ್ತು. ನಾನು ಹೋಟೆಲ್‌ನಲ್ಲಿ ಇಸಿಜಿಗಾಗಿ ಕೆಳಗೆ ಹೋಗಿದ್ದಾಗ, ಆಸ್ಪತ್ರೆಗೆ ತೆರಳಬೇಕಾಯಿತು. ಆಗ ನಾವು ಆಸ್ಪತ್ರೆಗೆ ಹೋದಾಗ ನನಗೆ ಉಸಿರಾಡಲು ಸಾಧ್ಯವಾಗಲಿಲ್ಲ ಎಂದು ನಾನು ಅವರಿಗೆ ಹೇಳಿದೆ. ಮತ್ತು ನನ್ನ ಎರಡು ಟ್ಯೂಬ್‌ಗಳು ಸಹ ಸ್ಥಗಿತಗೊಂಡಿವೆ ಎಂದು ವೈದ್ಯರು ಹೇಳಿದರು. ಅವರು ನನಗೆ ಏನಾಯಿತು ಎಂದು ಪೂರ್ತಿ ಹೇಳುತ್ತಿರಲಿಲ್ಲ. ನಂತರ ನಾನು ನರ್ಸ್‌ಗೆ ಕೇಳಿದೆ ಮತ್ತು ನಾನು 20 ನಿಮಿಷ ತಡವಾಗಿದ್ದರೆ, ಅನಾಹುತವೇ ಆಗುತ್ತಿತ್ತು ಎಂದು ಅವರು ಹೇಳಿದರು.

ಭಾರತ vs ನ್ಯೂಜಿಲೆಂಡ್: ಟೆಸ್ಟ್ ಸರಣಿಗೆ ರಣತಂತ್ರದೊಂದಿಗೆ ನಾವು ಸಿದ್ಧ: ಅಕ್ಷರ್ ಪಟೇಲ್ ಭಾರತ vs ನ್ಯೂಜಿಲೆಂಡ್: ಟೆಸ್ಟ್ ಸರಣಿಗೆ ರಣತಂತ್ರದೊಂದಿಗೆ ನಾವು ಸಿದ್ಧ: ಅಕ್ಷರ್ ಪಟೇಲ್

ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿಪಕ್ಷೀಯ ಟಿ20 ಮತ್ತು ಟೆಸ್ಟ್ ಸರಣಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಬಲಿಷ್ಠ ತಂಡಗಳ ಕಾದಾಟಕ್ಕೆ ಭಾರತವು ವೇದಿಕೆಯಾಗಿದೆ. ವಿಶ್ವಕ್ರಿಕೆಟ್‌ನಲ್ಲಿ ಅಗ್ರಕ್ರಮಾಂಕದ ಎರಡು ಟೆಸ್ಟ್‌ ತಂಡಗಳ ಮುಖಾಮುಖಿ ನೋಡಲು ಕ್ರಿಕೆಟ್‌ ಪ್ರೇಮಿಗಳು ಕಾತುರರಾಗಿದ್ದಾರೆ. ಜೊತೆಗೆ ಎರಡು ತಂಡಗಳು ಪ್ರಬಲ ಸ್ಪರ್ಧೆಯನ್ನೊಡ್ಡಲಿವೆ. ಹೀಗಾಗಿ ಭಾರತದೆದೆರು ಸರಣಿ ಕಠಿಣ ಮತ್ತು ಸವಾಲಿನಿಂದ ಕೂಡಿರುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

Story first published: Tuesday, November 16, 2021, 7:14 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X