ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪವಾಡ ನಡೆದರೆ ಪಾಕಿಸ್ತಾನ ತಂಡ ವಿಶ್ವಕಪ್ ಸೆಮಿಫೈನಲ್‌ಗೆ ಪ್ರವೇಶಿಸಲಿದೆ!

World cup 2019: Pakistan vs Bangladesh, Match 43-Preview

ಲಂಡನ್, ಜುಲೈ 5: ವಿಶ್ವಕಪ್ 2019ರಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಬೇಕಾದರೆ ಪವಾಡ ನಡೆಯಬೇಕು ಇಲ್ಲಾ ಪಾಕ್ ಆಟಗಾರರು ಬಾಂಗ್ಲಾದೇಶ ವಿರುದ್ಧ ಅತಿಮಾನುಷ ರೀತಿಯಲ್ಲಿ ಆಟವನ್ನು ಗೆದ್ದುಬಿಡಬೇಕು. ಅದಾಗದಿದ್ದರೆ ಪಾಕಿಸ್ತಾನಕ್ಕೆ ಈ ಸಾರಿ ಸೆಮಿಫೈನಲ್ ಪ್ರವೇಶಿಸಲಾಗೋಲ್ಲ. ಟಾಸ್ ಗೆದ್ದಿರುವ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಪಂದ್ಯ ಕುತೂಹಲ ಮೂಡಿಸಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ (ಜುಲೈ 5) ವಿಶ್ವಕಪ್ 43ನೇ ಪಂದ್ಯದಲ್ಲಿ ಬಾಂಗ್ಲಾ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಲೀಗ್ ಹಂತದ ಕೊನೇ ಸೆಣಸಾಟಕ್ಕಿಳಿದಿದೆ. ಇದರಲ್ಲಿ ಪಾಕಿಸ್ತಾನ ತಂಡ 311+ ರನ್‌ ಅಂತರದಿಂದ ಗೆಲ್ಲಬೇಕಿದೆ. ಅಂದರೆ ಉದಾಹರಣೆಗೆ ಪಾಕ್ ಕನಿಷ್ಠ 350+ ರನ್ ಗಳಿಸಬೇಕು ಮತ್ತು 38 ರನ್‌ ಒಳಗೆ ಬಾಂಗ್ಲಾವನ್ನು ಆಲ್ ಔಟ್ ಮಾಡಬೇಕು!

ಬಾಂಗ್ಲಾದೇಶ vs ಪಾಕಿಸ್ತಾನ, ಜೂನ್ 5, Live ಸ್ಕೋರ್‌ಕಾರ್ಡ್

1
43686

ಟೂರ್ನಿಯ ಆರಂಭದಲ್ಲಿ ನ್ಯೂಜಿಲೆಂಡ್ ತಂಡ ರನ್ ರೇಟ್ ಹೆಚ್ಚಿಸಿಕೊಂಡಿತ್ತು. ಕಿವೀಸ್ ಈಗ +0.175 ನೆಟ್ ರನ್ ರೇಟ್ ಗಳಿಸಿದ್ದರೆ, ಪಾಕಿಸ್ತಾನ -0.792 ರನ್ ರೇಟ್ ಹೊಂದಿದೆ. ಬಾಂಗ್ಲಾ ವಿರುದ್ಧ ಪಾಕ್ ಗೆದ್ದರೂ 11 ಪಾಯಿಂಟ್ ಗಳಿಸಿ ಕಿವೀಸ್‌ಗೆ ಸಮವಾಗಿ ನಿಲ್ಲಬಹುದೇ ಹೊರತು, ನೆಟ್ ರನ್ ರೇಟ್‌ನಲ್ಲಿ ನ್ಯೂಜಿಲೆಂಡ್ ಮೇಲೆ ನಿಲ್ಲಲಿದೆ.

ಬಾಂಗ್ಲಾದೇಶ ವಿರುದ್ಧ ನಾವು 500 ರನ್ ಬಾರಿಸುತ್ತೇವೆ: ಸರ್ಫರಾಜ್ ಅಹ್ಮದ್ಬಾಂಗ್ಲಾದೇಶ ವಿರುದ್ಧ ನಾವು 500 ರನ್ ಬಾರಿಸುತ್ತೇವೆ: ಸರ್ಫರಾಜ್ ಅಹ್ಮದ್

ಹೀಗಾಗಿ ಬಾಂಗ್ಲಾ ವಿರುದ್ಧ ದಾಖಲೆ ರನ್‌ ಗೆಲುವು ದಾಖಲಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಅರ್ಫರಾಜ್ ಬಳಗದ ಮೇಲಿದೆ. ಅಲ್ಲದೆ ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಳ್ಳೋವರೆಗೂ ಪಾಕ್ ಸೆಮಿಫೈನಲ್ ಆಸೆ ಜೀವಂತವಾಗಿರಲಿದೆ. ಒಂದು ವೇಳೆ ಬಾಂಗ್ಲಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ, ಪಾಕ್ ಸೆಮಿಫೈನಲ್ ಆಸೆ ಆ ಕ್ಷಣವೇ ಮಣ್ಣು ಪಾಲಾಗುವುದರಲ್ಲಿತ್ತು.

ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಲಿಟಾನ್ ದಾಸ್, ಮಹಮ್ಮದುಲ್ಲಾ, ಮೊಸದ್ದೇಕ್ ಹುಸೇನ್, ಮೆಹಿದಿ ಹಸನ್, ಮುಶ್ರಫೆ ಮೊರ್ತಾಜಾ, ರುಬೆಲ್ ಹುಸೇನ್, ಮುಸ್ತಾಫಿಜುರ್ ರಹಮಾನ್.

ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಮ್, ಹ್ಯಾರಿಸ್ ಸೊಹೈಲ್, ಮೊಹಮ್ಮದ್ ಹಫೀಜ್, ಸರ್ಫರಾಜ್ ಅಹ್ಮದ್, ಇಮಾದ್ ವಾಸಿಮ್, ಶದಾಬ್ ಖಾನ್, ವಹಾಬ್ ರಿಯಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಮೀರ್.

{headtohead_cricket_10_5}

Story first published: Friday, July 5, 2019, 17:37 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X