ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫ್ಲ್ಯಾಷ್‌ಬ್ಯಾಕ್‌: ಪಿಚ್‌ ಮಧ್ಯದಲ್ಲಿ ಮೋರೆ-ಜಾವೇದ್‌ ಜಟಾಪಟಿ

World Cup flashbacks: When Miandad mimicked More in 1992

ಬೆಂಗಳೂರು, ಮೇ 07: ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಕ್ರಿಕೆಟ್‌ ಪ್ರಿಯರು ತುದಿಗಾಗಲಲ್ಲಿ ನಿಂತಿರುತ್ತಾರೆ. ಅದರಲ್ಲೂ ಸಾಂಪ್ರದಾಯಿಕ ಎದುರಾಳಿಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆಯೆಂದರೆ ಎಲ್ಲರ ಗಮನ ಅಲ್ಲಿ ಕೇಂದ್ರೀಕೃತವಾಗಿರುತ್ತದೆ.

 ವಿಶ್ವಕಪ್‌ ರೀವೈಂಡ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌ ವಿಶ್ವಕಪ್‌ ರೀವೈಂಡ್‌: ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ್ದ ಕಪಿಲ್‌ ದೇವ್‌

ಇನ್ನು ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಈವರೆಗೆ ಒಂದು ಪಂದ್ಯವನ್ನೂ ಸೋತಿಲ್ಲ ಎಂಬುದು ವಿಶೇಷ. ಅಂತೆಯೇ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿರುವ ಎಲ್ಲ ಪಂದ್ಯಗಳು ಇತ್ತಂಡಗಳ ನಡುವಣ ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಿವೆ.

 ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌ ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌

1992ರ ವಿಶ್ವಕಪ್‌ ಟೂರ್ನಿಯೂ ಇದಕ್ಕೆ ಹೊರತೇನಲ್ಲಿ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ವೈರತ್ವಕ್ಕೆ ಈ ವಿಶ್ವಕಪ್‌ ಪಂದ್ಯ ಉತ್ತಮ ಉದಾಹರಣೆ. 1992ರ ಮಾರ್ಚ್‌ 4ರಂದು ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯವಿದು. ವಿಶ್ವಕಪ್‌ ಟೂರ್ನಿಯಲ್ಲಿ ಭಾರತ-ಪಾಕ್‌ ಮುಖಾಮುಖಿಯಾಗಿದ್ದು ಇದೇ ಮೊದಲು. ಈ ಪಂದ್ಯ ಪಾಕ್‌ ತಂಡದ ಜಾವೇದ್‌ ಮಿಯಾಂದಾದ್‌ ಮತ್ತು ಭಾರತ ತಂಡದ ವಿಕೆಟ್‌ಕೀಪರ್‌ ಕಿರಣ್‌ ಮೋರೆ ನಡುವಣ ಜಟಾಪಟಿಗೆ ಹೆಚ್ಚು ಜನಪ್ರಿಯ.

 ಅಫ್ರಿದಿ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಇಮ್ರಾನ್‌ ಫರಾತ್‌ ಅಫ್ರಿದಿ ಬಗ್ಗೆ ಅಚ್ಚರಿಯ ಸತ್ಯ ಬಿಚ್ಚಿಟ್ಟ ಇಮ್ರಾನ್‌ ಫರಾತ್‌

ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತ ತಂಡ ಮೊದಲ ಗೆಲುವಿನ ಹುಡುಕಾಟದಲ್ಲಿತ್ತು. ಮತ್ತೊಂದೆಡೆ ಒಂದು ಜಯದೊಂದಿಗೆ ಅಂಕಪಟ್ಟಿಯಲ್ಲಿ ಭಾರತಕ್ಕಿಂತಲೂ ಮೇಲಿದ್ದ ಪಾಕಿಸ್ತಾನ ತಂಡ ಉತ್ತಮ ಸ್ಥಿತಿಯಲ್ಲಿತ್ತು.

49 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಮೊಹಮ್ಮದ್‌ ಅಝರುದ್ದೀನ್‌ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಭಾರತ ತಂಡದ ಅಂದಿನ ಯುವ ಪ್ರತಿಭೆ ಸಚಿನ್‌ ತೆಂಡೂಲ್ಕರ್‌ ವಿಶ್ವಕಪ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ (62 ಎಸೆತಗಳಲ್ಲಿ 54 ರನ್‌) ಸಿಡಿಸಿದ್ದರು. ಅಜಯ್‌ ಜಡೇಜಾ 77 ಎಸೆತಗಳಲ್ಲಿ 46 ರನ್‌ಗಳನ್ನು ಗಳಿಸಿದರೆ, ಇನಿಂಗ್ಸ್‌ ಅಂತ್ಯದಲ್ಲಿ ಅಬ್ಬರಿಸಿದ ಕಪಿಲ್‌ ದೇವ್‌ 26 ಎಸೆತಗಳಲ್ಲಿ 35 ರನ್‌ಗಳನ್ನು ಚಚ್ಚಿ ತಂಡಕ್ಕೆ 216 ರನ್‌ಗಳ ಸಾಧಾರಣ ಮೊತ್ತ ತಂದುಕೊಟ್ಟರು.

 ಒಡಿಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ ಜೋಡಿ! ಒಡಿಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ ಜೋಡಿ!

ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಇಂಜಮಾಮ್‌ ಉಲ್‌ಹಕ್‌ ಮತ್ತು ನಂತರ ಬಂದ ಝಾಹಿದ್‌ ಫಝಲ್‌ ಅವರ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಜತೆಯಾದ ಜಾವೇದ್‌ ಮಿಯಾಂದಾದ್‌ (40) ಮತ್ತು ಆಮಿರ್‌ ಸೊಹೇಲ್‌ (62) 88 ರನ್‌ಗಳ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು.

ಮಿಯಾಂದಾದ್‌ ಜಂಪಿಂಗ್‌ ಜ್ಯಾಕ್‌

ಆರಂಭಿಕ ಆಘಾತ ಅನುಭವಿಸಿದ್ದ ಪಾಕಿಸ್ತಾನಕ್ಕೆ ಆಸರೆಯಾದ ಜಾವೇದ್‌ ಮತ್ತು ಸೊಹೇಲ್‌, ಭಾರತೀಯ ಬೌಲರ್‌ಗಳಿಗೆ ತಲೆನೋವಾಗಿದ್ದರು. ಈ ಸಂದರ್ಭದಲ್ಲಿ ವಿಕೆಟ್‌ಕೀಪರ್‌ ಕಿರಣ್‌ ಮೋರೆ ಅವರ ಮನವಿ ಶೈಲಿ ಜಾವೇದ್‌ಗೆ ಅಸಹನೀಯ ಎನಿಸಿತ್ತು. 25 ಓವರ್‌ನಲ್ಲಿ ತೆಂಡೂಲ್ಕರ್‌ ಬೌಲಿಂಗ್‌ ಮಾಡಲು ಮುಂದಾದಾಗ ಕ್ರೀಸ್‌ನಿಂದ ಹಿಂದೆ ಸರಿದು ಅಂಪೈರ್‌ ಬಳಿ ತೆರಳಿದ ಜಾವೇದ್‌, ಮೋರೆ ಅವರ ಅತಿಯಾದ ಮನವಿ ಕುರಿತಾಗಿ ದೂರು ನೀಡಿದರು.

ಈ ಸಂದರ್ಭದಲ್ಲಿ ಮೋರೆ ಮತ್ತು ಜಾವೇದ್‌ ನಡುವೆ ಮಾತಿನ ಚಕಾಮಕಿಯೂ ನಡೆಯಿತು. ನಂತರದ ಎಸೆತದಲ್ಲಿ ಕವರ್ಸ್‌ ಕಡೆಗೆ ಚೆಂಡನ್ನು ಹೊಡೆದ ಜಾವೇದ್‌ ರನ್‌ ಗಳಿಕೆಗೆ ಪ್ರಯತ್ನಿಸಿ ಕ್ರೀಸ್‌ಗೆ ವಾಪಾಸಾದರು. ಈ ಸಂದರ್ಭದಲ್ಲಿ ಎರಡೂ ಕೈಗಳಲ್ಲಿ ಬ್ಯಾಟ್‌ ಹಿಡಿದು ಜಂಪ್‌ ಮಾಡುವ ಮೂಲಕ ಮೋರೆ ಅವರನ್ನು ಅನುಕರಿಸಿದಂತೆ ಜಾವೇದ್‌ ನಟಿಸಿದರು. ಜಾವೇದ್‌ ವರ್ತನೆಯನ್ನು ಮೋರೆ ನಿರ್ಲಕ್ಷಿಸಿದರೆ, ಕಾಮೆಂಟೇಟರ್‌ಗಳು ಪರ ಮತ್ತು ವಿರೋಧದ ಚರ್ಚೆಯಲ್ಲಿ ಮುಳುಗಿದರು.

ಅಂತಿಮವಾಗಿ ಪಂದ್ಯದಲ್ಲಿ ನಗುಮುಖ ಭಾರತ ತಂಡದ್ದಾಯಿತು. ಜಾವೇದ್‌-ಆಮಿರ್‌ ಜತೆಯಾಟ ಮುರಿದ ಬಳಿಕ 68 ರನ್‌ಗಳ ಅಂತರದಲ್ಲಿ 8 ವಿಕೆಟ್‌ಗಳನ್ನು ಕೈ ಚೆಲ್ಲಿದ ಪಾಕಿಸ್ತಾನ 43 ರನ್‌ಗಳ ಹೀನಾಯ ಸೋಲುಂಡಿತ್ತು.

Story first published: Tuesday, May 7, 2019, 17:45 [IST]
Other articles published on May 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X