WTC Points Table: ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಸೋಲು; ಭಾರತಕ್ಕಿದೆ ಫೈನಲ್‌ಗೇರುವ ಚಾನ್ಸ್!

ಸೋಮವಾರ, ಡಿಸೆಂಬರ್ 12ರಂದು ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0ರಲ್ಲಿ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ ಎರಡನೇ ಇನ್ನಿಂಗ್ಸ್‌ನಲ್ಲಿ 4 ನಿರ್ಣಾಯಕ ವಿಕೆಟ್‌ಗಳನ್ನು ಪಡೆಯುವ ಮೂಲಕ ಪ್ರವಾಸಿ ತಂಡದ ಸ್ಟಾರ್ ಆಗಿ ಮಿಂಚಿದರು. ಇದರಿಂದಾಗಿ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಆತಿಥೇಯ ಪಾಕಿಸ್ತಾನ ತಂಡವನ್ನು 26 ರನ್‌ಗಳಿಂದ ರೋಚಕವಾಗಿ ಸೋಲಿಸಿತು.

IND vs SL: ಭಾರತ vs ಶ್ರೀಲಂಕಾ ಟಿ20 ಪಂದ್ಯಕ್ಕೆ ಈ ಕ್ರೀಡಾಂಗಣದ ಟಿಕೆಟ್ ದರ ಏರಿಕೆ?IND vs SL: ಭಾರತ vs ಶ್ರೀಲಂಕಾ ಟಿ20 ಪಂದ್ಯಕ್ಕೆ ಈ ಕ್ರೀಡಾಂಗಣದ ಟಿಕೆಟ್ ದರ ಏರಿಕೆ?

ಎರಡು ಇನ್ನಿಂಗ್ಸ್‌ಗಳಲ್ಲಿ 11 ವಿಕೆಟ್‌ಗಳನ್ನು ಪಡೆದ ಚೊಚ್ಚಲ ಪಂದ್ಯವಾಡಿದ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರು ಪಾಕಿಸ್ತಾನ ತಂಡದ ಪರ ಶ್ರಮಿಸಿದ್ದರು. ಆದರೆ ಬ್ಯಾಟ್ಸ್‌ಮನ್‌ಗಳ ಗುರಿ ಬೆನ್ನತ್ತಲು ವಿಫಲರಾದರು.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಈ ಸೋಲಿನ ಮೂಲಕ ಪಾಕಿಸ್ತಾನ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್‌ನಿಂದ ಹೊರಬಿದ್ದಿದೆ. ಈ ಬಾರಿಯೂ ಕೂಡ ಪಾಕಿಸ್ತಾನ ಫೈನಲ್‌ಗೆ ತಲುಪುವುದು ಅಸಾಧ್ಯವಾಗಿದೆ.

ಪಾಕಿಸ್ತಾನ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಸ್ಥಾನಕ್ಕೆ ಇಳಿದಿದ್ದರೆ, ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್‌ ತಂಡ ಉತ್ತಮ ರನ್‌ರೇಟ್ ಮೂಲಕ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ.

2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ರೇಸ್‌ ಶ್ರೇಯಾಂಕದ ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡವಿದ್ದರೆ, ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. ನಂತರದ ಸ್ಥಾನವನ್ನು ಶ್ರೀಲಂಕಾ ಆಕ್ರಮಿಸಿಕೊಂಡಿದ್ದರೆ, ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿಬಿಸಿಸಿಐನ ಕೇಂದ್ರ ಒಪ್ಪಂದ ಕಳೆದುಕೊಳ್ಳುವ ಸಂದಿಗ್ಧತೆಯಲ್ಲಿ ಈ ಆಟಗಾರರು; ಸೂರ್ಯ, ಗಿಲ್‌ಗೆ ಬಡ್ತಿ

ಭಾರತ ತಂಡ ಬುಧವಾರ, ಡಿಸೆಂಬರ್ 14ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವನ್ನು ಅವರದೆ ನೆಲದಲ್ಲಿ ಎದುರಿಸಲಿದ್ದು, ಎರಡೂ ಪಂದ್ಯಗಳನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಶ್ರೇಯಾಂಕದಲ್ಲಿ ಮೇಲೇರಲು ಅದ್ಭುತ ಅವಕಾಶ ಹೊಂದಿದೆ. ಪಾಕಿಸ್ತಾನ ತಂಡ ಫೈನಲ್ ರೇಸ್‌ನಿಂದ ಹೊರಬಿದ್ದಿರುವುದು ಭಾರತಕ್ಕೆ ಲಾಭವಾಗಿ ಪರಿಣಮಿಸಿದೆ.

ಬಾಂಗ್ಲಾದೇಶ ವಿರುದ್ಧ 2-0 ಅಂತರದ ಗೆಲುವು ಭಾರತ ತಂಡ ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (WTC) ಫೈನಲ್‌ಗೇರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಭಾರತ ತಂಡವು WTC ಪಾಯಿಂಟ್ಸ್ ಟೇಬಲ್ ಟಾಪರ್ಸ್ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸಲಿದ್ದು, ಇದು ತವರಿನಲ್ಲಿ ಕಠಿಣ ಸವಾಲಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, December 13, 2022, 8:45 [IST]
Other articles published on Dec 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X