ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಟೆಸ್ಟ್‌ ಸರಣಿ ಗೆದ್ದ ಬಳಿಕ, WTC ಪಾಯಿಂಟ್ಸ್ ಟೇಬಲ್‌ ಹೇಗಿದೆ?

England WTC

ಇಂಗ್ಲೆಂಡ್‌ ತಂಡವು ನ್ಯೂಜಿಲೆಂಡ್‌ ವಿರುದ್ಧ 3-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಬಳಿಕ ಪಾಯಿಂಟ್ಸ್ ಟೇಬಲ್‌ನಲ್ಲಿ ಹಲವು ವ್ಯತ್ಯಾಸಗಳನ್ನ ಕಾಣಬಹುದಾಗಿದೆ. ಆದ್ರೆ ಅಗ್ರಕ್ರಮಾಂಕದಲ್ಲಿ ಹೆಚ್ಚಿನ ಬದಲಾವಣೆ ಇರದು.

ಹೊಸ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ಹೊಸ ನಾಯಕ ಬೆನ್ ಸ್ಟೋಕ್ಸ್ ಅವರ ಯುಗವು ಅತ್ಯಂತ ಮಹತ್ವಪೂರ್ಣ ಶೈಲಿಯಲ್ಲಿ ಪ್ರಾರಂಭವಾಗಿದ್ದು, ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ ವೈಟ್‌ವಾಶ್ ಮಾಡಿದೆ. ಹೆಡಿಂಗ್ಲಿಯ ಲೀಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 296 ರನ್ ಬೆನ್ನಟ್ಟಿದ್ದು, ಏಳು ವಿಕೆಟ್‌ಗಳ ಗೆಲುವು ಸಾಧಿಸಿತು.

ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ಕ್ರಮವಾಗಿ 86 ಮತ್ತು 71 ರನ್ ಗಳಿಸಿ ಅಜೇಯರಾಗಿ ಉಳಿದರು. ಶುಕ್ರವಾರ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಏಕೈಕ ಟೆಸ್ಟ್ ಪಂದ್ಯ ಆಡಲಿದ್ದು, ಅದಕ್ಕೂ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್ ಈ ಕೆಳಗಿದೆ ನೋಡಿ.

ಇಂಗ್ಲೆಂಡ್‌ ಆಕ್ರಮಣಾಕಾರಿ ಆಟ, ಪಾಯಿಂಟ್ಸ್ ಟೇಬಲ್‌ನಲ್ಲಿ ಏರಿಕೆ

ಇಂಗ್ಲೆಂಡ್‌ ಆಕ್ರಮಣಾಕಾರಿ ಆಟ, ಪಾಯಿಂಟ್ಸ್ ಟೇಬಲ್‌ನಲ್ಲಿ ಏರಿಕೆ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಪ್ರಸ್ತುತ ಸೀಸನ್‌ ಆರಂಭದಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ತಳಭಾಗದಲ್ಲಿದ್ದ ಇಂಗ್ಲೆಂಡ್ ಹೊಸ ಹುರುಪಿನೊಂದಿಗೆ ಏರಿಕೆಗೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ಇಂಗ್ಲೆಂಡ್ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ಪ್ರದರ್ಶಿಸಿತು. ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್‌ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಇಂಗ್ಲೆಂಡ್ ತಂಡವು ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿಕೆಗೊಂಡಿದ್ದು, ತಂಡದ ಗೆಲುವಿನ ಸರಾಸರಿ ಶೇಕಡಾ 28.89ರಷ್ಟಿದೆ.

Ind vs Ire 2nd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

ಹಾಲಿ WTC ಚಾಂಪಿಯನ್ ನ್ಯೂಜಿಲೆಂಡ್ 8ನೇ ಸ್ಥಾನಕ್ಕೆ ಕುಸಿತ

ಹಾಲಿ WTC ಚಾಂಪಿಯನ್ ನ್ಯೂಜಿಲೆಂಡ್ 8ನೇ ಸ್ಥಾನಕ್ಕೆ ಕುಸಿತ

ಮತ್ತೊಂದೆಡೆ, WTC ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ಶೇಕಡಾ 25.93 ಗೆಲುವಿನೊಂದಿಗೆ ಎಂಟನೇ ಸ್ಥಾನದಲ್ಲಿದೆ. ಕಿವೀಸ್ ಪಡೆ ಇಂಗ್ಲೆಂಡ್ ವಿರುದ್ಧ ಮೂರಕ್ಕೆ ಮೂರು ಪಂದ್ಯ ಸೋತು ಹೀನಾಯ ಮುಖಭಂಗ ಎದುರಿಸಿತು. ಈಗಿನಿಂದಲೇ ಉಳಿದ ಟೆಸ್ಟ್ ಪಂದ್ಯ ಗೆದ್ದರೂ ಸಹ ಮುಂದಿನ ವರ್ಷ ಆಡಲಿರುವ ಫೈನಲ್‌ಗೆ ಅವರು ತಲುಪುವುದು ಅಸಂಭವವಾಗಿದೆ.

ಟಿ20 ವಿಶ್ವಕಪ್‌ನ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ ಭಾರತ: ಕಿವೀಸ್ ನಾಡಿನಲ್ಲಿ ವೈಟ್‌ಬಾಲ್ ಸರಣಿ ಖಚಿತ

ಟೀಂ ಇಂಡಿಯಾಗೆ ಮೂರನೇ ಸ್ಥಾನ

ಟೀಂ ಇಂಡಿಯಾಗೆ ಮೂರನೇ ಸ್ಥಾನ

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸಾಲಿನಲ್ಲಿದ್ದು 77 ಪಾಯಿಂಟ್ಸ್‌ನೊಂದಿಗೆ ಶೇಕಡಾ 58.33ರಷ್ಟು ಗೆಲುವಿನ ಸರಾಸರಿ ಹೊಂದಿದೆ. ಮುಂಬರುವ ಜುಲೈ 1ರಿಂದ ಪ್ರಾರಂಭಗೊಳ್ಳಲಿರುವ ಭಾರತ ಗೆದ್ದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಇನ್ನಷ್ಟು ಉತ್ತಮ ಅಂಕಗಳನ್ನು ಸಂಪಾದಿಸಲಿದೆ.

ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಾರ್ಗನ್ | OneIndia Kannada
ಆಸ್ಟ್ರೇಲಿಯಾಗೆ ಅಗ್ರಸ್ಥಾನ

ಆಸ್ಟ್ರೇಲಿಯಾಗೆ ಅಗ್ರಸ್ಥಾನ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 72 ಪಾಯಿಂಟ್ಸ್ ಮತ್ತು ಶೇಕಡಾ 75ರಷ್ಟು ಗೆಲುವಿನ ಸರಾಸರಿಯೊಂದಿಗೆ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನ ಅಲಂಕರಿಸಿದೆ. 71.43 ರಷ್ಟು ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಪ್ರಸ್ತುತ ಎರಡನೇ ಸ್ಥಾನದಲ್ಲಿದೆ. ಭಾರತ ಮೂರನೇ ಸ್ಥಾನದಲ್ಲಿದ್ದು, ಶೇ. 55.56ರ ಗೆಲುವಿನ ಸರಾಸರಿಯೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಪಾಕಿಸ್ತಾನ ಐದನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ. ಏಳು ಮತ್ತು ಎಂಟು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಆಗಿದ್ದು, ಬಾಂಗ್ಲಾದೇಶ ಸ್ಥಾನದಲ್ಲಿರುವ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

Story first published: Tuesday, June 28, 2022, 12:54 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X